ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್‌ ಹೆಬ್ರೀವ್‌ ವಿ.ವಿ.ಯಲ್ಲಿ ‘ಭಾರತೀಯ ಅಧ್ಯಯನ’ ವಿಭಾಗ

By Staff
|
Google Oneindia Kannada News

ಇಸ್ರೇಲ್‌ ಹೆಬ್ರೀವ್‌ ವಿ.ವಿ.ಯಲ್ಲಿ ‘ಭಾರತೀಯ ಅಧ್ಯಯನ’ ವಿಭಾಗ
ಭಾರತದ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಕಹಾನೆ ನೆನಪಿನಲ್ಲಿ ಗ್ರಂಥಾಲಯ

ಜೆರುಸಲೇಮ್‌ : ಮಹಾತ್ಮ ಗಾಂಧಿ ಮತ್ತು ನೆಹರೂ ಒಳಗೊಂಡಂತೆ ಭಾರತದ ಪ್ರಮುಖ ನಾಯಕರುಗಳ ಕೃತಿ ಹಾಗೂ ಸಂಪಾದಿತ ಪತ್ರಗಳ ವಿಶೇಷ ವಿಭಾಗವೊಂದನ್ನು ಇಸ್ರೇಲ್‌ನ ಹೆಬ್ರೀವ್‌ ವಿಶ್ವವಿದ್ಯಾಲಯದಲ್ಲಿ ತೆರೆಯಲಾಗಿದೆ.

ಈ ವಿಭಾಗದಲ್ಲಿ ಭಾರತಕ್ಕೆ ಸಂಬಂಧಿಸಿದ ಅಪಾರ ಸಾಹಿತ್ಯವಿದೆ. ಭಾರತದ ಬಗ್ಗೆ ವಿಶೇಷ ಪರಿಣತಿ ಹೊಂದಿದ್ದ ಪ್ರೊ. ರ್ಯಿವೆನ್‌ ಕಹಾನೆ ಅವರ ಗೌರವಾರ್ಥವಾಗಿ ವಿಶ್ವವಿದ್ಯಾಲಯದ ಟ್ರೂಮೆನ್‌ ಇನ್‌ಸ್ಟಿಟ್ಯೂಟ್‌ ಲೈಬ್ರೆರಿಯು ಈ ವಿಭಾಗವನ್ನು ಸ್ಥಾಪಿಸಿದೆ. ಕಹಾನೆ 2003ರಲ್ಲಿ ನಿಧನ ಹೊಂದಿದ್ದರು.

ರ್ಯಿವೆನ್‌ ಕಹಾನೆ ಭಾರತವನ್ನು ಬಹುವಾಗಿ ಪ್ರೀತಿಸುತಿದ್ದರು. ಕಳೆದ ಮೂವತ್ತು ವರ್ಷಗಳಲ್ಲಿ ಯಾವತ್ತೂ ಭಾರತಕ್ಕೆ ಭೇಟಿ ನೀಡುವ ಅವಕಾಶವನ್ನು ಅವರು ತಪ್ಪಿಸಿಲ್ಲ. ಈ ಪ್ರಯತ್ನದಿಂದ ಮುಂದಿನ ವಿದ್ಯಾರ್ಥಿಗಳಿಗೆ ಭಾರತದ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಗಬಹುದು. ಇದು ವೈವಿಧ್ಯತೆಯಲ್ಲಿ ಸಹಬಾಳ್ವೆ ನಡೆಸಲು ಪ್ರಮುಖ ಮಾದರಿ ದೇಶ. ಎಂದು ಸ್ವತಃ ಲೇಖಕಿಯಾಗಿರುವ ಅವರ ಪತ್ನಿ ಇಸ್ರೆೃಲಾ ಹೇಳಿದರು.

ಕಹಾನೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಸಂದರ್ಶಕ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಭಾರತದ ಸಮಾಜ ಮತ್ತು ರಾಜಕೀಯ ವೈವಿಧ್ಯತೆಯ ಬಗ್ಗೆ ಬರೆದಿದ್ದರು. ಅವರ ಮರಣದ ಸಂದರ್ಭದಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣದ ಕುರಿತು ಪುಸ್ತಕ ಬರೆಯುತ್ತಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X