ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಟಲ್‌ಜೀ ಕೋ ದೇಖಾ ತೋ ಐಸಾ..’ ಅದೇ ರಾಗ, ಬಿಜೆಪಿ ಹಾಡು

By Staff
|
Google Oneindia Kannada News

‘ಅಟಲ್‌ಜೀ ಕೋ ದೇಖಾ ತೋ ಐಸಾ..’ ಅದೇ ರಾಗ, ಬಿಜೆಪಿ ಹಾಡು
ಸಿನಿಮಾ ಮಂದಿಗೆ ರಾಜಕೀಯಕ್ಕೆ ಬಂದರೂ ಹಾಡಿನ ಪಾಡು ತಪ್ಪಿಲ್ಲ

ನವದೆಹಲಿ : ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಸಿನಿತಾರೆಯರನ್ನು ಸೆಳೆಯುವಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ, ಈಗ ಹಿಂದಿಯ ಸುಪ್ರಸಿದ್ದ ಗೀತೆಗಳ ರಾಗಕ್ಕೆ ತನ್ನ ಪ್ರಚಾರ ಸಾಹಿತ್ಯ ತುಂಬಿಸುವ ಮೂಲಕ ಮತದಾರರನ್ನು ಮರಳು ಮಾಡುವ ಪ್ರಯತ್ನದಲ್ಲಿದೆ.

ಮಹಾಭಾರತ ಧಾರಾವಾಹಿಯ ಶೀರ್ಷಿಕೆ ಹಾಡಾದ ‘ಮಹಾಶಕ್ತಿ ಭಾರತ...’- ‘ಶಕ್ತಿಶಾಲಿ ಭಾಜಪ’ ವಾಗಿದೆ. ಈಗ ಮೆಗಾ ಹಿಟ್‌ ಆಗಿದ್ದ ಅಮಿರ್‌ಖಾನ್‌ ಚಿತ್ರ ‘ಲಗಾನ್‌’, ಹೃತಿಕ್‌ ರೋಶನ್‌ನ ಚಿತ್ರ ‘ಕೋಯಿ ಮಿಲ್‌ಗಯಾ ’ದ ಬಿಜೆಪಿ ಅವತರಣಿಕೆಯ ಸಿ.ಡಿ. ಲಭ್ಯ.

ಹಾಡುಗಳಲ್ಲಿ ಪ್ರಚಾರ ಮಾತ್ರವಲ್ಲ! ಒಂದು ಕಾಲದಲ್ಲಿ ರಾಜೀವ್‌ ಆಪ್ತರಾಗಿದ್ದ ಅಮಿತಾಭ್‌ ಬಚ್ಚನ್‌ ಅವರ ಚಿತ್ರ ‘ಬಾಗ್‌ಬಾನ್‌’ ಹಾಡಿನ ರಿಮೇಕ್‌ ಸೋನಿಯಾ ವಿದೇಶಿ ಮೂಲದ ಕುರಿತಾಗಿದೆ.

‘ಕಮಲ್‌ ಕಿಲ್‌ ಗಯೇ’ ‘ಭಾಜಪಾ ಲಹರೇ’ ‘ ಮುಂತಾದ ಹಾಡುಗಳನ್ನು ಹೊಂದಿದ ಒಂದು ಲಕ್ಷ ಸಿಡಿಗಳ ಸರಮಾಲೆಯನ್ನು ಭಾಜಪ ಅಧ್ಯಕ್ಷ ವೆಂಕಯ್ಯನಾಯ್ಡು ಬಿಡುಗಡೆಗೊಳಿಸಿದ್ದಾರೆ.

‘ಮಹಾ ಶಕ್ತಿ ಶಾಲಿ ಭಾರತ ’ ಹಾಡು ಭಾರತವನ್ನು ‘ಸುಪರ್‌ ಪವರ್‌’ ಮಾಡುವ ಬಿಜೆಪಿಯ ಆಶ್ವಾಸನೆಯ ಇಂಪನ್ನು ಹೊತ್ತಿದೆ. ಈ ನಾದದ ಅಂತರಾಳದಲ್ಲಿ ಬಿಜೆಪಿಯ ‘ವಿಷನ್‌ ಡಾಕ್ಯುಮೆಂಟ್‌’ನ ಸಂಪೂರ್ಣ ಚಿತ್ರಣವಿದೆ. ಈ ಹಾಡುಗಳು ಸರಳ ಹಾಗೂ ಸಂದರವಾಗಿದೆ. ಸುಲಭವಾಗಿ ಸಾಮಾನ್ಯ ಮನುಷ್ಯರಿಗೆ ಬಿಜೆಪಿಯ ಧ್ಯೇಯೋದ್ದೇಶಗಳನ್ನು ತಲುಪಿಸುತ್ತದೆ. ಅಂತಹ ಸಾಹಿತ್ಯವನ್ನು ಈ ರಾಗದಲ್ಲಿ ಸಂಯೋಜಿಸಲಾಗದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

‘1942 ಎ ಲವ್‌ ಸ್ಟೋರಿ’ ಚಿತ್ರದ ‘ಏಕ್‌ ಲಡ್‌ಕೀ ಕೊ ದೇಖಾ ತೋ ಐ ಸಾ ಲಗಾ ’ ಹಾಡು ಜನಜನಿತವಾಗಿತ್ತು. ಅದನ್ನು 2004ರ ಈ ಚುನಾವಣೆಗೆ ಹಿನ್ನೆಲೆ ಸಂಗೀತಗಾರ ಕುಮಾರ್‌ ಶಾನು ‘ಆಟಲ್‌ ಜೀ ಕೋ ದೇಖಾತೋ ಐ ಸೆ ಲಗಾ’ ಎಂದು ಮಾಡಿದ್ದಾರೆ. ಮುಂಬೈ ಸ್ಟುಡಿಯಾದಲ್ಲಿ ಧ್ವನಿ ಮುದ್ರಣ ಕಾರ್ಯ ನಡೆದಿದೆ. ಸುದೇಶ್‌ ಬೋಸ್ಲೆ, ರಾಹುಲ್‌ ಸೇತ್‌, ವಿನೋದ್‌ ರಾಥೋರ್‌, ಮುನ್ನ ಅಜೀಜ್‌, ಅನುರಾಧಾ ಪೊದ್ವಾಲ್‌, ಸಾಧನಾ ಸರ್‌ಗಮ್‌ ಮತ್ತು ಸಂಜೀವಣಿ ಯಂತಹ ಖ್ಯಾತ ಗಾಯಕರ ಕಂಠದಿಂದ ಈ ರಿಮೇಕ್‌ಗಳು ಹೊರಹೊಮ್ಮಿವೆ.

ಹಾಡುಗಳಿಗೆ ಮರು-ಸಂಗೀತ ಪ್ರಣಯ್‌ ಪ್ರಧಾನ್‌ ನೀಡಿದ್ದಾರೆ. ನಿರ್ಮಾಣದ ಜವಾಬ್ದಾರಿ ದೇವೆಂದ್ರ ಖಂಡೆಲ್‌ವಾಲ ಹೊತ್ತಿದ್ದಾರೆ. ಹಾಡುಗಳಿಗೆ ಸಾಹಿತ್ಯ ವಸ್ತುಗಳನ್ನು ಪಕ್ಷದ ಅಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ಪ್ರಧಾನ ಕಾರ್ಯದರ್ಶಿ ಮುಖ್ತಾರ್‌ಅಬ್ಬಾಸ್‌ ನಕ್ವಿ ಅವರೇ ಒದಗಿಸಿದ್ದಾರೆ.

ಈ ಸಿಡಿಗಳನ್ನು ಹಳ್ಳಿಯ ಕ್ಯಾಸೆಟ್‌ ಅಂಗಡಿಗಳಲ್ಲಿ ಮಾರಾಟಕ್ಕೆ ಇಡುತ್ತೇವೆ. ಅದರಿಂದ ಪಕ್ಷದ ಪ್ರಚಾರ ಮತ್ತು ಪ್ರೊಪಗಾಂಡ ನಡೆಯಲಿದೆ. ಇದು ಈಗಿರುವ ಬಿಜೆಪಿ ಅಲೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಹೇಳಿದರು.

ನೀವು ಬೆಂಗಳೂರಿನ ಮಾರ್ಕೆಟ್‌ ಬಳಿ ಒಮ್ಮೆ ಸಾಗಿದರೆ ಪ್ರೇಮ ಚಂದ್ರಮ... ದಂತಹ ಖ್ಯಾತ ಹಾಡುಗಳ ್ಫರಾಜಕೀಯ ಪರಿವರ್ತನೆಯ ಹಾಡುಗಳು ಕಿವಿಗೆ ಸಿಗುವುದು. ಕರ್ನಾಟಕದಲ್ಲಿ ಈಗಾಗಲೇಇಂತಹ ಹಲವು ಹಾಡುಗಳು ಪ್ರಚಾರಕ್ಕಿಳಿದಾಗಿದೆ. ಆದರೆ ಸಿಡಿ ರೂಪದಲ್ಲಿ ಬಂದಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X