ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ

By Staff
|
Google Oneindia Kannada News

ಬೆಂಗಳೂರಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ
ಏಪ್ರಿಲ್‌ 10ರಿಂದ ಬದಲಾವಣೆ ಅನುಷ್ಠಾನಕ್ಕೆ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರದಿಂದ ಹಲವೆಡೆ ಟ್ರಾಫಿಕ್‌ನ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಟಾಫಿಕ್‌ ಜಾಂ ಹಾಗೂ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಕೆಲ ರಸ್ತೆಗಳ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಸುಗಮ ಸಾರಿಗೆ ಉದ್ದೇಶದಿಂದ ಕೆಲ ರಸ್ತೆಗಳ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಮರಿಸ್ವಾಮಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಈ ಬದಲಾವಣೆಗಳು ಏಪ್ರಿಲ್‌ 10 ರಿಂದ ಕಾರ್ಯಗತವಾಗಲಿವೆ. ಬದಲಾವಣೆಗಳು ಕೆಳಗಿನಂತಿವೆ.

ಕೆಂಪೇಗೌಡ ರಸ್ತೆ : ಪೊಲೀಸ್‌ ಕಾರ್ನರ್‌ ವೃತ್ತದಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಈಗಿರುವ ಸಂಚಾರ ವ್ಯವಸ್ಥೆಯನ್ನು ಯಥಾವತ್ತಾಗಿಟ್ಟುಕೊಂಡು, ಮೈಸೂರು ಬ್ಯಾಂಕ್‌ ವೃತ್ತದಿಂದ ಪೊಲೀಸ್‌ ಕಾರ್ನರ್‌ ವೃತ್ತದ ಕಡೆಗಿನ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಶೇಷಾದ್ರಿ ರಸ್ತೆ : ಈವರೆಗೆ ಆನಂದರಾವ್‌ ವೃತ್ತದಿಂದ ಮಹಾರಾಣಿ ವೃತ್ತದವರೆಗೆ ಇದ್ದ ಏಕಮುಖ ಸಂಚಾರ ವ್ಯವಸ್ಥೆಯನ್ನು ಕೆ.ಆರ್‌. ವೃತ್ತದವರೆಗೆ ವಿಸ್ತರಿಸಲಾಗಿದೆ. ಈಗ ಕೆ.ಆರ್‌. ವೃತ್ತದಿಂದ ಮಹಾರಾಣಿ ಕಾಲೇಜ್‌ ವೃತ್ತದ ಕಡೆಗೆ ಸಂಚರಿಸುವ ಎಲ್ಲ ವಿಧದ ವಾಹನ ಸಂಚಾರ ನಿಷೇಧಿಸಲಾಗಿದೆ.

ಪ್ಯಾಲೇಸ್‌ ರಸ್ತೆ : ಮಹಾರಾಣಿ ಕಾಲೇಜ್‌ ವೃತ್ತದಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಸಂಚರಿಸುವ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ, ಮೈಸೂರು ಬ್ಯಾಂಕ್‌ ವೃತ್ತದಿಂದ ಮಹಾರಾಣಿ ಕಾಲೇಜ್‌ ವೃತ್ತದವರೆಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹಳೆ ಪೋಸ್ಟ್‌ ಆಫೀಸ್‌ ರಸ್ತೆ : ಈ ರಸ್ತೆಯಲ್ಲಿ ಕೆ. ಆರ್‌. ವೃತ್ತದಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಇರುವ ಏಕಮುಖ ಸಂಚಾರ ವ್ಯವಸ್ಥೆಯನ್ನು ರದ್ದುಪಡಿಸಿ ಬಿಎಂಟಿಸಿ ಮತ್ತು ಕೆ.ಎಸ್‌.ಆರ್‌.ಟಿ.ಸಿ. ವಾಹನಗಳ ಸಹಿತ ಇತರೆ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಲಘು ವಾಹನಗಳು, ದ್ವಿಚಕ್ರ ವಾಹನಗಳಿಗೆ ಎರಡೂ ಬದಿಯ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಕೆ.ಆರ್‌. ವೃತ್ತದಿಂದ ಪೊಲೀಸ್‌ ಕಾರ್ನರ್‌ ವೃತ್ತದ ಕಡೆ ಬರುವ ವಾಹನಗಳು (ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ) ಪೊಲೀಸ್‌ ಕಾರ್ನರ್‌ನಲ್ಲಿ ಮುಕ್ತ ಬಲ ತಿರುವು ಪಡೆದು ಮೈಸೂರು ಬ್ಯಾಂಕ್‌ ವೃತ್ತದ ಕಡೆಗೆ ಚಲಿಸಬಹುದಾಗಿದೆ.

ಕಾವೇರಿ ಭವನ ಬಳಿ ಇರುವ ಬಿಎಂಟಿಸಿ ಬಸ್‌ ನಿಲ್ದಾಣವನ್ನು ಶೇಷಾದ್ರಿ ರಸ್ತೆಯ ಎಸ್‌.ಜೆ. ಪಾಲಿಟೆಕ್ನಿಕ್‌ ಮುಂಭಾಗಕ್ಕೆ ಹಾಗೂ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್‌ರವರ ನ್ಯಾಯಾಲಯದ ಮುಂಭಾಗಕ್ಕೆ ಸ್ಥಳಾಂತರಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X