ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಪ್ರಣಾಳಿಕೆ : ರೈತರಿಗೆ ಆದ್ಯತೆ, ಬಡವರಿಗೆ ಅಕ್ಕಿ, ಉದ್ಯೋಗ

By Staff
|
Google Oneindia Kannada News

ಗೌಡರ ಪ್ರಣಾಳಿಕೆ : ರೈತರಿಗೆ ಆದ್ಯತೆ, ಬಡವರಿಗೆ ಅಕ್ಕಿ, ಉದ್ಯೋಗ
ಬೊಕ್ಕಸ ಬರಿದಾಯಿತು, ಅಭಿವೃದ್ಧಿಗ ಬರ ಬಂದಿತು- ಗೌಡರ ಟೀಕೆ

ಬೆಂಗಳೂರು : ಮಾಜಿ ಪ್ರಧಾನಿ ಹಾಗೂ ಜಾತ್ಯಾತೀತ ಜನತಾದಳದ ಅಧ್ಯಕ್ಷ ಎಚ್‌.ಡಿ. ದೇವೇಗೌಡ ನೇತೃತ್ವದ ಜಾತ್ಯತೀತ ಜನತಾ ದಳದ ಚುನಾವಣಾ ಪ್ರಣಾಳಿಕೆ ಏ.5ರ ಸೋಮವಾರ ಬಿಡುಗಡೆಯಾಯಿತು.

ಏಪ್ರಿಲ್‌ 5 ರಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ದೇವೇಗೌಡರು- ಕರ್ನಾಟಕದಲ್ಲಿ ಆಡಳಿತ ನಡೆಸುವ ಅವಕಾಶವನ್ನು ಮಾಡಿಕೊಟ್ಟರೆ ಕೃಷಿಕರಿಗೆ ಸಾಲದ ಮೇಲೆ 5 % ಸಬ್ಸಿಡಿಯನ್ನು ಕೊಡಲಾಗುವುದು ಎಂದು ಘೋಷಿಸಿದರು.

ಪ್ರಣಾಳಿಕೆಯ ಮುಖ್ಯಾಂಶಗಳು :

  • ಸರ್ಕಾರದಿಂದ ಕೃಷಿಕರು ತೆಗೆದುಕೊಂಡ ಸಾಲಗಳ ಮೇಲಿನ ಬಡ್ಡಿಯ ದರಗಳನ್ನೂ ಇಳಿಸಲಾಗುವುದು
  • ಅತಿ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ದೊರಕುವಂತೆ ಮಾಡಲಾಗುವುದು.
  • ಎರಡು ವರ್ಷಗಳೊಳಗಾಗಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ನಿಗದಿತ ದರ ದೊರಕುವಂತೆ ಮಾಡಲಾಗುವುದು.
  • ಆನ್‌ಲೈನ್‌ ಲಾಟರಿಯ ಸಂಪೂರ್ಣ ನಿಷೇಧ.
  • ನಿರುದ್ಯೋಗಿಗಳಿಗೆ 5 ಲಕ್ಷ ಉದ್ಯೋಗಾವಕಾಶಗಳು.
  • ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಪ್ರತಿ ಕೆ.ಜಿಗೆ ರೂ. 3.50 ರಂತೆ ಅಕ್ಕಿ.
ಕೃಷ್ಣ ಅವರ ಸರ್ಕಾರ ರೈತರನ್ನು ಅಸ್ಪೃಶ್ಯರಂತೆ ಕಾಣುತ್ತಿದೆ. ಖಾಲಿ ಪಾತ್ರೆಯಲ್ಲಿ ಶಬ್ದ ಜಾಸ್ತಿ ಎಂಬಂತೆ ಮಾಡುವುದಕ್ಕಿಂತ ಆಡುವುದೇ ಹೆಚ್ಚುತ್ತಿದೆ. ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣರ ಮಹತ್ಸಾಧನೆಗಳೆಂದರೆ ಬರೀ ಮೂರು. ಅವುಗಳೆಂದರೆ, ಪ್ರಚಾರ ಕಾರ್ಯಕ್ರಮಗಳು, ಭ್ರಷ್ಟಾಚಾರದಲ್ಲಿ ದಾಖಲೆ ಮತ್ತು ಸುಳ್ಳು ಹೇಳುವುದರಲ್ಲಿ ನಿಸ್ಸೀಮತೆ ಎಂದು ದೇವೇಗೌಡ ಛೇಡಿಸಿದರು.

ಕೃಷ್ಣ ಸರ್ಕಾರದ ಆಡಳಿತಾವಧಿಯಲ್ಲೇ ಬಡತನ, ಸಾಲ, ಹಿಂಸೆ, ನೋವು ಸಹಿಸಲಾರದೇ ಸತ್ತ ರೈತರ ಸಂಖ್ಯೆ 470. ಸರ್ಕಾರದ ಬೊಕ್ಕಸವನ್ನು ಬರಿದು ಮಾಡಿದ್ದರೂ, ಈ ಹಣ ಯಾವುದೇ ಒಂದು ಸಾರ್ವಜನಿಕ ಕೆಲಸಕಾರ್ಯಗಳಿಗೆ ಅದು ಬಳಕೆಯಾಗಿಲ್ಲ. ಜನರನ್ನೂ ಬರ ಪೀಡಿತರನ್ನಾಗಿಸಿ, ಸರ್ಕಾರದ ಬೊಕ್ಕಸವನ್ನೂ ಬರಿದು ಮಾಡಲಾಗಿದೆ ಎಂದು ದೇವೇಗೌಡ ದೂರಿದರು.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X