ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ಸಾಗರದ ನಡುವೆ ನಂಜನಗೂಡು ಶ್ರೀಕಂಠೇಶ್ವರನ ರಥೋತ್ಸವ

By Staff
|
Google Oneindia Kannada News

ಜನ ಸಾಗರದ ನಡುವೆ ನಂಜನಗೂಡು ಶ್ರೀಕಂಠೇಶ್ವರನ ರಥೋತ್ಸವ
ಬಿಗಿ ಭದ್ರತೆ, ಜನರ ಸಂಭ್ರಮ, ರಾತ್ರಿಯಿಡೀ ಪೂಜೆ ಪುನಸ್ಕಾರ

ನಂಜನಗೂಡು: ಏಪ್ರಿಲ್‌ 2 ರಂದು ನಡೆದ ಶ್ರೀಕಂಠೇಶ್ವರನ ಬ್ರಹ್ಮ ರಥೋತ್ಸವದಲ್ಲಿ 50,000ಕ್ಕೂ ಹೆಚ್ಚು ಭಕ್ತಾದಿಗಳು ನೆರೆದಿದ್ದರು.

ನಾಲ್ಕು ವರ್ಷಗಳ ಹಿಂದೆ ನಡೆದ ರಥೋತ್ಸವದ ಸಂದರ್ಭದಲ್ಲಿ ರಥವನ್ನು ಎಳೆಯುವ ಸಂದರ್ಭದಲ್ಲಿ ಹಲವರಿಗೆ ಪೆಟ್ಟಾಗಿತ್ತು. ಆದರೆ ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು .

250 ಟನ್‌ ಭಾರದ ಬೃಹತ್‌ ಗಾತ್ರದ ಚಕ್ರಗಳ, 100 ಅಡಿ ಎತ್ತರದ ರಥದ ಸುತ್ತಲೂ ರಕ್ಷಣಾ ಕವಚವನ್ನು ಅಳವಡಿಸಲಾಗಿತ್ತು . ಮತ್ತು 50 ಪೊಲೀಸ್‌ ಸಿಬ್ಬಂದಿಗಳು ರಥದ ಸುತ್ತಲೂ ಭದ್ರತಾ ವ್ಯವಸ್ಥೆ ಮಾಡಿದ್ದರು.

ಬೆಳಿಗ್ಗೆ 5.50ರ ನಸುಕಿನಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಕುಮಾರ್‌ ದೀಕ್ಷಿತ್‌ರವರು ಆದಿಪೂಜ್ಯ ವಿಘ್ನೕಶ್ವರನನ್ನು ಪೂಜಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಕಂಠೇಶ್ವರನನ್ನು ಹೊತ್ತಿರುವ ಗೌತಮ ರಥದ ಪೂಜೆಯಾಂದಿಗೆ ರಥವನ್ನು ಎಳೆಯಲಾಯ್ತು. ಐದು ರಥಗಳಲ್ಲಿ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ದೇವರುಗಳನ್ನು ಸಿಂಗರಿಸಿ ಕೂರಿಸಲಾಗಿತ್ತು.

ಸಚಿವ ಎಂ. ಮಹಾದೇವು ರಥೋತ್ಸವ ಕಾರ್ಯಕ್ರಮದಲ್ಲಿ ಹಾಜರಿದ್ದರು. ರಥವು ಮುಂದಕ್ಕೆ ಚಲಿಸುತ್ತಿದ್ದಂತೆಯೇ ಅರ್ಚಕರುಗಳ ವೇದ ಮಂತ್ರ ಘೋಷ, ಭಕ್ತಾದಿಗಳ ಜೈಕಾರ ಮುಗಿಲು ಮುಟ್ಟಿತ್ತು. ರಥದ ಗೋಪುರಕ್ಕೆ ಬಾಳೆಹಣ್ಣು ಎಸೆಯುವುದು ಕೂಡ ರೂಢಿಗತ ಸಂಪ್ರದಾಯವಾಗಿದ್ದು ಎಲ್ಲರೂ ರಥಕ್ಕೆ ಏಲಕ್ಕಿ ಬಾಳೆಹಣ್ಣಿನ ಮಳೆಗರೆದರು.

ಉತ್ಸವಕ್ಕೆ ಪಾಲ್ಗೊಳ್ಳುವ ಮುನ್ನ ಪವಿತ್ರವಾದ ಕಪಿಲಾ ನದಿಯಲ್ಲಿ ಮಿಂದು ಶುಚಿಯಾಗಿ ಬರಬೇಕೆಂಬುದು ಭಕ್ತಾದಿಗಳ ನಂಬಿಕೆ. ರಥೋತ್ಸವವು ಮಧ್ಯರಾತ್ರಿಯವರೆಗೂ ನಡೆದಿದ್ದು , ಸೇರಿದ ಜನಸಾಗರ ರಾತ್ರಿಯ ಸಮಯದ ತನಕ ಒಂದು ಲಕ್ಷ ತಲುಪಿರಬಹುದೆಂದು ಅಂದಾಜಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X