ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಫಸಿಸ್‌ ಬಿಎಫ್‌ಎಲ್‌ ತೆಕ್ಕೆಯಲ್ಲಿ ‘ಕ್ಷೇಮ’ ಟೆಕ್ನಾಲಜೀಸ್‌ ಆರಾಮ

By Staff
|
Google Oneindia Kannada News

ಎಂಫಸಿಸ್‌ ಬಿಎಫ್‌ಎಲ್‌ ತೆಕ್ಕೆಯಲ್ಲಿ ‘ಕ್ಷೇಮ’ ಟೆಕ್ನಾಲಜೀಸ್‌ ಆರಾಮ
21 ಮಿಲಿಯನ್‌ ಡಾಲರ್‌ಗಳಿಗೆ ‘ಕ್ಷೇಮ’ ಎಂಫಸಿಸ್‌ ವಶ

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಒ ಸೇವೆಗಳಲ್ಲಿ ಹೆಸರುಗಳಿಸಿರುವ ‘ಎಂಫಸಿಸ್‌ ಬಿಎಫ್‌ಎಲ್‌ ಸಮೂಹ’ ತನ್ನ ತೆಕ್ಕೆಗೆ ಬೆಂಗಳೂರು ಮೂಲದ ‘ಕ್ಷೇಮ ಟೆಕ್ನಾಲಜಿಸ್‌’ ಕಂಪನಿಯನ್ನು ತೆಗೆದುಕೊಂಡಿದೆ.

21 ಮಿಲಿಯನ್‌ ಡಾಲರ್‌ಗಳ ನಗದು ಮತ್ತು ಸ್ಟಾಕ್‌ಗಳನ್ನು ನೀಡುವ ಮೂಲಕ ಕ್ಷೇಮ ಟೆಕ್ನಾಲಜಿಸ್‌ ಕಂಪನಿಯನ್ನು ಎಂಫಸಿಸ್‌ ತನ್ನ ಸ್ವಾಮಕ್ಕೆ ಒಳಪಡಿಸಿಕೊಂಡಿದೆ. ಅಮೆರಿಕ ಮೂಲದ ಎಂಫಸಿಸ್‌ ಬೆಂಗಳೂರು ಮೂಲದ ಬಿಎಫ್‌ಎಲ್‌ ಸಮೂಹದೊಂದಿಗೆ ಕೈಗೂಡಿಸಿದ ನಂತರ ಸಾಧಿಸಿದ ಬಹುದೊಡ್ಡ ವ್ಯವಹಾರ ಇದಾಗಿದೆ.

6.8 ಮಿಲಿಯನ್‌ ಡಾಲರ್‌ಗಳ ನಗದು ಹಾಗೂ ಉಳಿದ ಹಣವನ್ನು ಸ್ಟಾಕ್‌ಗಳ ರೂಪದಲ್ಲಿ ನೀಡಲಾಗುವುದು. 2004-05ರ ಮೊದಲ ವಿತ್ತ ತ್ರೆೃಮಾಸಿಕ (ಏಪ್ರಿಲ್‌-ಜೂನ್‌)ದ ಕೊನೆಯ ವೇಳೆಗೆ ಈ ವಾಣಿಜ್ಯ ಒಪ್ಪಂದ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಒಪ್ಪಂದದಿಂದಾಗಿ ಕ್ಷೇಮ ಟೆಕ್ನಾಲಜೀಸ್‌ನ ಇಬ್ಬರು ಪಾಲುದಾರರಾದ ಗ್ಲೋಬಲ್‌ ಟೆಕ್ನಾಲಜಿ ವೆಂಚರ್ಸ್‌ ಮತ್ತು ಸಿಂಗಪುರ್‌ ಕಂಪ್ಯೂಟರ್‌ ಸಿಸ್ಟಂಸ್‌, ಕ್ಷೇಮಾಗೆ ದೊರೆತಿರುವ ಮೊತ್ತದಲ್ಲಿ ಕ್ರಮವಾಗಿ ಶೇ.64 ಹಾಗೂ ಶೇ.30 ಈಕ್ವಿಟಿ ಪಡೆಯಲಿದ್ದಾರೆ. ಉಳಿದ ಶೇ.24ರ ಈಕ್ವಿಟಿಯನ್ನು ಕ್ಷೇಮಾದ ಹಿರಿಯ ಆಡಳಿತ ವರ್ಗ ಹಾಗೂ ಆಯ್ದ ನೌಕರರು ಹೊಂದುವರು.

ಎಂಫಸಿಸ್‌ ಸ್ವಾಮ್ಯಕ್ಕೆ ಸಂಪೂರ್ಣವಾಗಿ ಒಳಪಡುವ ಸಂದರ್ಭದಲ್ಲಿ , ಕ್ಷೇಮಾದ ಮೀಸಲು ನಗದು 600 ಮಿಲಿಯನ್‌ ರುಪಾಯಿ ಇರಬಹುದೆಂದು ಅಂದಾಜಿಸಲಾಗಿದೆ. ಕ್ಷೇಮಾದ ಮೂಲ ಬಂಡವಾಳ 180 ಮಿಲಿಯನ್‌ ರುಪಾಯಿಗಳು.

ಎಂಫಸಿಸ್‌ ಹಾಗೂ ಕ್ಷೇಮ ಟೆಕ್ನಾಲಜಿಸ್‌ ಕಂಪನಿಗಳ ನಡುವಣ ಒಪ್ಪಂದವನ್ನು ಏ.2ರಂದು ಸುದ್ದಿಗಾರರಿಗೆ ತಿಳಿಸಿದ ಎಂಫಸಿಸ್‌ನ ಮುಖ್ಯಸ್ಥ ಜೆರ್ರಿ ರಾವ್‌- ಈ ಒಪ್ಪಂದದಿಂದಾಗಿ ಸ್ಪರ್ಧಾತ್ಮಕ ಜಾಗತಿಕ ಮಾರುಕಟ್ಟೆಯಲ್ಲಿ ಎಂಫಸಿಸ್‌ನ ಸೇವೆಗಳ ಕಾರ್ಯವ್ಯಾಪ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಂದರು.

ಏಳು ವರ್ಷಗಳ ಅವಧಿಯ ಕ್ಷೇಮ ಟೆಕ್ನಾಲಜಿಸ್‌ SEI CMM ಹಂತದ 5 ಪ್ರಮಾಣೀಕತ ಸಾಫ್ಟ್‌ವೇರ್‌ ಸೇವೆಗಳ ಸಂಸ್ಥೆಯಾಗಿದ್ದು - ಆರೋಗ್ಯ ಸೇವೆಗಳು, ಜೀವ ವಿಜ್ಞಾನ ಮತ್ತು ವಾಣಿಜ್ಯ ಸೇವೆಗಳಲ್ಲಿ ಹೆಸರುಗಳಿಸಿದೆ. ಆಟೊಮೇಷನ್‌ ಮತ್ತು ಸ್ಥಿರ ತಂತ್ರಜ್ಞಾನದಲ್ಲೂ ಸಂಸ್ಥೆ ಖ್ಯಾತಿ ಸಂಪಾದಿಸಿದೆ.

(ಏಜನ್ಸೀಸ್‌)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X