ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಪೂರ್ಣ ನೆಲಕಚ್ಚುವುದನ್ನು ಬಿಜೆಪಿ ಬಯಸದು -ವೆಂಕಯ್ಯ

By Staff
|
Google Oneindia Kannada News

ಕಾಂಗ್ರೆಸ್‌ ಪೂರ್ಣ ನೆಲಕಚ್ಚುವುದನ್ನು ಬಿಜೆಪಿ ಬಯಸದು -ವೆಂಕಯ್ಯ
ಲೋಕಸಭೆಯಲ್ಲಿ ಬಿಜೆಪಿಗೆ 272 ಸ್ಥಾನ, ರಾಜ್ಯದಲ್ಲೂ ಅಧಿಕಾರ ಗ್ರಹಣ

ಬೆಂಗಳೂರು : ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ 272 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.

ಜನತೆಯ ಒಲವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪರವಾಗಿದ್ದು , ಚುನಾವಣಾ ಫಲಿತಾಂಶಗಳು ಏಕಪಕ್ಷೀಯವಾಗಿರುತ್ತವೆ. ಬಿಜೆಪಿ ಅರ್ಧಕ್ಕಿಂಥ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ಇದರೊಂದಿಗೆ ಕಾಂಗ್ರೆಸ್‌ ಶೋಚನೀಯ ಪರಿಸ್ಥಿತಿಗೆ ತಲುಪಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಶುಕ್ರವಾರ ಹೇಳಿದರು. ರಾಜ್ಯ ಪ್ರವಾಸದಲ್ಲಿದ್ದ ಅವರು ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯ ಆತ್ಮ ವಿಶ್ವಾಸ ಕೇವಲ ಚುನಾವಣಾ ಸಮೀಕ್ಷೆಗಳಿಗೆ ಅವಲಂಬಿತವಾಗಿಲ್ಲ . ತಮಗೆ ಬಂದಿರುವ ವರ್ತಮಾನದ ಪ್ರಕಾರ ಬಿಜೆಪಿ ಪರವಾಗಿ ಗಾಳಿ ಬೀಸುತ್ತಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.

ಕಾಂಗ್ರೆಸ್ಸನ್ನು ತೀರಾ ಅಶಕ್ತಗೊಳಿಸಲು ನಾವು ಬಯಸುವುದಿಲ್ಲ . ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡೂ ಗಟ್ಟಿಯಾಗಿರಬೇಕು. ಆದರೂ, ಚುನಾವಣೆ ನಂತರ ಕಾಂಗ್ರೆಸ್‌ ಹೀನಾಯ ಸ್ಥಿತಿ ಹೊಂದುವುದು ಖಚಿತ ಎಂದು ವೆಂಕಯ್ಯ ನಾಯ್ಡು ಭವಿಷ್ಯ ನುಡಿದರು. ಸಮಾನ ಅಂಶಗಳ ಮೇಲೆ ವಿರೋಧಿ ಒಕ್ಕೂಟವನ್ನು ರೂಪಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಜನತೆಯ ಮುಂದೆ ಪರ್ಯಾಯವನ್ನು ಬಿಂಬಿಸುವಲ್ಲಿ ಕೂಡ ಕಾಂಗ್ರೆಸ್‌ ವಿಫಲವಾಗಿದೆ ಎಂದು ವೆಂಕಯ್ಯ ಆಪಾದಿಸಿದರು.

‘ಮಹಾಶಕ್ತಿ ಭಾರತ್‌’ ಎನ್ನುವ ಆಶಯ ಗೀತೆಯನ್ನು ಬಿಜೆಪಿ ಹೊಂದಲಿದೆ. ಅಭಿವೃದ್ಧಿಯ ಅಗತ್ಯಗಳಾದ- ಸ್ವಾವಲಂಬನೆ, ಸ್ವದೇಶಿ ಮತ್ತು ಹೆಮ್ಮೆ, ಇತ್ಯಾದಿ ವಿಷಯಗಳನ್ನು ಈ ಆಶಯ ಗೀತೆ ಜನತೆಗೆ ತಲುಪಿಸಲಿದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು , ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿಗೆ ಅಧಿಕಾರ ಗ್ರಹಣದ ಹೆಬ್ಬಾಗಿಲು ಎನ್ನುವ ತಮ್ಮ ಮಾತನ್ನು ಪುನರುಚ್ಛರಿಸಿದರು.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X