ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್‌ರ ‘ಪೋಪ್‌’ ಖ್ಯಾತಿಯ ಗುರುಚರಣ್‌ಸಿಂಗ್‌ ತೋಹ್ರಾ ನಿಧನ

By Staff
|
Google Oneindia Kannada News

ಸಿಖ್‌ರ ‘ಪೋಪ್‌’ ಖ್ಯಾತಿಯ ಗುರುಚರಣ್‌ಸಿಂಗ್‌ ತೋಹ್ರಾ ನಿಧನ
ಏಪ್ರಿಲ್‌ 2ರಂದು ಹುಟ್ಟೂರಲ್ಲಿ ಅಂತ್ಯಸಂಸ್ಕಾರ

ಚಂಡೀಗಢ : ಸಿಖ್‌ರ ‘ಪೋಪ್‌’ ಎಂದೇ ಖ್ಯಾತರಾದ ನಾಯಕ ಅಕಾಲಿದಳದ ಮುಖಂಡ ಗುರುಚರಣ್‌ಸಿಂಗ್‌ ತೆೇಹ್ರಾ ಏಪ್ರಿಲ್‌ 1ರ ಮಧ್ಯರಾತ್ರಿಭಾರತೀಯ ಕಾಲಮಾನ 00: 41ಗಂಟೆಗೆ ಖಾಸಗಿ ಆಸ್ಪತ್ರೆಯಾಂದರಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಒಂದು ವಾರದ ಹಿಂದೆಯಷ್ಟೇ ಹೃದಯಾಘಾತಕ್ಕೆ ತುತ್ತಾಗಿದ್ದ ಅವರನ್ನು ಅಮೃತಸರದಿಂದ ನವದೆಹಲಿಯ ಆಸ್ಪತ್ರೆಗೆ ಕರೆತರಲಾಗಿತ್ತು.

1924ರಲ್ಲಿ ಪಂಜಾಬಿನ ಪಾಟಿಯಾಲದಲ್ಲಿ ಜನಿಸಿದ ತೋಹ್ರ ಭಾರತ ವಿಭಜನೆಗೊಳ್ಳುವ ಹಿಂದೆಯೇ ಅಕಾಲಿದಳದ ಸಕ್ರಿಯ ಕಾರ್ಯಕರ್ತರಾಗಿದ್ದರು. ಉತ್ತಮ ಸಂಘಟಕರಾದ ಅವರು ರಾಜಕೀಯವಾಗಿ ಅಧಿಕಾರದತ್ತ ಒಲವು ತೋರಿಸಿರಲಿಲ್ಲ. ಧರ್ಮ ಯುದ್ಧಮೋರ್ಚಾ ಮತ್ತು ಆಪರೇಶನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸಂದರ್ಭಗಳು ಒಳಗೊಂಡಂತೆ ಹಲವು ಬಾರಿ ಧರ್ಮಕ್ಕಾಗಿ, ರೈತರಿಗಾಗಿ, ಹಕ್ಕುಗಳಿಗಾಗಿ, ಸ್ವಾತಂತ್ರಕ್ಕಾಗಿ ಜೈಲುವಾಸ ಅನುಭವಿಸಿದ್ದರು. ಎರಡು ದಶಕಕ್ಕೂ ಹೆಚ್ಚಿನ ಕಾಲ ಎಸ್‌ಜಿಪಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಏಪ್ರಿಲ್‌ ಎರಡರಂದು ಸಕಲ ಗೌರವದೊಂದಿಗೆ ತೋಹ್ರಾ ಅಂತಿಮ ಸಂಸ್ಕಾರ ಕ್ರಿಯೆಗಳನ್ನು ಅವರ ಹುಟ್ಟೂರಾದ ಪಾಟಿಯಾಲದ ತೊಹ್ರಾದಲ್ಲಿ ನೆರವೇರಿಸಲಾಗುವುದು. ನವದೆಹಲಿಯಿಂದ ಅಕಾಲಿದಳ ಪ್ರಧಾನ ಕಾರ್ಯದರ್ಶಿ ಸುಖಬೀರ್‌ ಸಿಂಗ್‌ ಬಾದಲ್‌ ಮತ್ತು ಅವರ ಅಳಿಯ ಪಾರ್ಥೀವ ಶರೀರವನ್ನು ಕರೆತರಲಿದ್ದಾರೆ.ಅಕಾಲಿ ದಳದ ಅಧ್ಯಕ್ಷ ಪ್ರಕಾಶ್‌ಸಿಂಗ್‌ ಬಾದಲ್‌ ಸ್ವೀಕರಿಸಲಿದ್ದಾರೆ ಎಂದು ಅಕಾಲಿದಳದ ಕಾರ್ಯದರ್ಶಿ ಡಿ.ಎಸ್‌.ಚೀಮಾ ಹೇಳಿದರು. ದೇಶದಾದ್ಯಂತ ಹಲವು ಧಾರ್ಮಿಕ ಮತ್ತು ರಾಜಕೀಯ ನಾಯಕರುಗಳು ತೋಹ್ರಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X