ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಐತಿಹಾಸಿಕ ಜಯ ; ಪಾಕ್‌ಗೆ ಇನಿಂಗ್ಸ್‌, 52 ರನ್‌ ಸೋಲು

By Staff
|
Google Oneindia Kannada News

ಭಾರತಕ್ಕೆ ಐತಿಹಾಸಿಕ ಜಯ ; ಪಾಕ್‌ಗೆ ಇನಿಂಗ್ಸ್‌, 52 ರನ್‌ ಸೋಲು
ಅನಿಲ್‌ಕುಂಬ್ಳೆಗೆ 6, ಪಠಾಣ್‌ಗೆ 2 ವಿಕೆಟ್‌

ಮುಲ್ತಾನ್‌ : ಪಾಕ್‌ ವಿರುದ್ಧದ ಸ್ನೇಹ ಸರಣಿ ಕ್ರಿಕೆಟ್‌ನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಜಯಗಳಿಸುವ ಮೂಲಕ ಭಾರತ ಕ್ರಿಕೆಟ್‌ ತಂಡ ಐತಿಹಾಸಿಕ ಜಯ ದಾಖಲಿಸಿದೆ.

ಏಪ್ರಿಲ್‌ 1ರ ಗುರುವಾರ ಮುಲ್ತಾನ್‌ನಲ್ಲಿ ಕೊನೆಗೊಂಡ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಇನಿಂಗ್ಸ್‌ ಹಾಗೂ 52 ರನ್‌ಗಳಿಂದ ಸೋಲಿಸಿತು. ಈ ಭಾರೀ ಜಯದೊಂದಿಗೆ 52 ವರ್ಷಗಳ ನಂತರ ಪಾಕಿಸ್ತಾನದ ನೆಲದಲ್ಲಿ ಜಯದ ಸಾಧನೆಯನ್ನು ಭಾರತ ಮಾಡಿದಂತಾಗಿದೆ.

ನಾಲ್ಕನೇ ದಿನದ ಅಂತ್ಯಕ್ಕೆ ಭಾರತದ ಜಯ ನಿಚ್ಚಳವಾಗಿತ್ತು . ಫಾಲೋಆನ್‌ಗೆ ತುತ್ತಾಗಿದ್ದ ಪಾಕಿಸ್ತಾನ, ಎರಡನೇ ಇನಿಂಗ್ಸ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿತ್ತು . ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು 61 ರನ್‌ ಮಾಡಬೇಕಿದ್ದ ಪಾಕಿಸ್ತಾನ, ಗುರುವಾರದ ಆಟದಲ್ಲಿ 9 ರನ್‌ ಸೇರಿಸುವಷ್ಟರಲ್ಲಿ ಉಳಿದೊಂದು ವಿಕೆಟ್‌ ಕಳೆದುಕೊಂಡಿತು. ಬುಧವಾರ ಅಜೇಯ ಶತಕ ಸಿಡಿಸಿದ್ದ ಯೂಸಫ್‌ ಯಾಹಾನ ಇಂದು ಬಲುಬೇಗನೆ ಪಠಾಣ್‌ಗೆ ವಿಕೆಟ್‌ ಒಪ್ಪಿಸಿದರು.

ಯಾಹಾನ 112 ರನ್‌ ಗಳಿಸಿದರು. ಭಾರತದ ಪರ ಅನಿಲ್‌ ಕುಂಬ್ಳೆ 6 ಹಾಗೂ ಪಠಾಣ್‌ 2 ವಿಕೆಟ್‌ ಕಬಳಿಸಿದರು.

ಪ್ರಧಾನಿ ಅಭಿನಂದನೆ : ಐತಿಹಾಸಿಕ ಜಯ ಗಳಿಸಿದ ಭಾರತೀಯ ಕ್ರಿಕೆಟ್‌ ತಂಡವನ್ನು ಪ್ರಧಾನಿ ವಾಜಪೇಯಿ ಅಭಿನಂದಿಸಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡಕ್ಕೆ ಅಭಿನಂದನಾ ಸಂದೇಶವನ್ನು ವಾಜಪೇಯಿ ಕಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X