ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನ ಪುಣ್ಯ ಇತರ ದೇವರುಗಳಿಗಿಲ್ಲ !

By Staff
|
Google Oneindia Kannada News

ರಾಮನ ಪುಣ್ಯ ಇತರ ದೇವರುಗಳಿಗಿಲ್ಲ !
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹಬ್ಬಕ್ಕೆ ಧಾರ್ಮಿಕ ಮಹತ್ವವಷ್ಟೇ ಅಲ್ಲ , ಸಾಂಸ್ಕೃತಿಕ ಅನನ್ಯತೆಯೂ ಉಂಟು. ರಾಮನ ಹೆಸರಿನಲ್ಲಿ ಸಂಗೀತ ಸಮಾರಾಧನೆಯೇ ನಡೆಯುತ್ತದೆ. ಇಂಥದೊಂದು ಹಬ್ಬ ಇನ್ನೊಂದುಂಟೇ?

  • ದಟ್ಸ್‌ಕನ್ನಡ ಡೆಸ್ಕ್‌
ಮತ್ತೊಂದು ಶ್ರೀರಾಮನವಮಿ ಬಂದಿದೆ. ‘ಬರ’ದ ಹಂಗಿಲ್ಲದೆ ಯಥಾಪ್ರಕಾರ ಪೂಜೆ ಪುನಸ್ಕಾರ, ಪಾನಕ ಪನಿವಾರ ಸಂತರ್ಪಣೆಯೂ ನಡೆದಿದೆ!

ಊರುಕೇರಿಗಳ ಮಾತು ಬಿಡಿ; ಬೆಂಗಳೂರಿನಂಥ ಮಹಾನಗರದಲ್ಲೂ ಅಲ್ಲಲ್ಲಿ ಪಾನಕ, ನೀರು ಮಜ್ಜಿಗೆಯ ವಿತರಣೆ ನಡೆದಿದೆ. ಕೊಳಗ/ಡ್ರಂಗಳಲ್ಲಿ ನೀರು ಮಜ್ಜಿಗೆ ಹಾಗೂ ಪಾನಕಗಳನ್ನು ತುಂಬಿಕೊಂಡು ಹಾದಿಹೋಕರ ದಾಹವನ್ನು ತಣಿಸುವ ಚಿತ್ರಗಳು ರಾಮ ಮಂದಿರಗಳ ಎದುರು, ಪ್ರಮುಖ ರಸ್ತೆಗಳಲ್ಲಿ ಕಂಡುಬರುತ್ತಿದೆ. ಇಲ್ಲೆಲ್ಲ ಜನ ಸಂದಣಿ, ಲೀಟರ್‌ಗಟ್ಟಲೆ ಮಜ್ಜಿಗೆ ಕುಡಿಯುವವರೂ ಉಂಟು. ಕೆಲವೆಡೆ ಮಜ್ಜಿಗೆ ಪಾನಕದೊಂದಿಗೆ ಹೆಸರುಬೇಳೆ ವಿತರಣೆಯೂ ಇದೆ. ದಾನಿಗಳು ಇನ್ನೂ ಇದ್ದಾರೆ!

Hare Rama Hare Rama....ಶ್ರೀರಾಮನವಮಿಯೆಂದರೆ ಕೇವಲ ಪೂಜೆ ಪುನಸ್ಕಾರದ ಹಬ್ಬವಲ್ಲ ; ಈ ದಿನದ ಚಿತ್ರಗಳು ಪಾನಕ ಪನಿವಾರದ ವಿತರಣೆಗಷ್ಟೇ ಸೀಮಿತವೂ ಅಲ್ಲ . ಅಸಲಿಗೆ ರಾಮನವಮಿ ಒಂದು ದಿನದ ಹಬ್ಬವೆನ್ನುವುದೇ ಸುಳ್ಳು. ಪೂಜೆ ಪುನಸ್ಕಾರ ವಿಧಿವತ್ತಾಗಿ ಒಂದು ದಿನಕ್ಕೆ ಮೀಸಲಾದರೂ, ರಾಮನವಮಿಯ ನೆರಳು ತಿಂಗಳುಕಾಲದ್ದು . ರಾಮನ ಹಬ್ಬಕ್ಕೆ ಧಾರ್ಮಿಕತೆಯ ಲೇಪ ಮಾತ್ರವಲ್ಲದೆ ಸಾಂಸ್ಕೃತಿಕ ಮೆರುಗೂ ಉಂಟು. ನಾಡಿನ ಮೂಲೆಮೂಲೆಯ ಹಳ್ಳಿಗಳಲ್ಲಿ ರಾಮನವಮಿ ಅಂಗವಾಗಿ ಸಂಗೀತೋತ್ಸವಗಳು ನಂಡೆಯುತ್ತವೆ. ರಾಮಸೇವಾ ಸಮಿತಿ/ಭಜನಾ ಮಂಡಳಿಗಳ ಆಶ್ರಯದಲ್ಲಿ ನಡೆಯುವ ಸಂಗೀತೋತ್ಸವಗಳು ತಿಂಗಳ ಕಾಲ ನಡೆಯುವುದುಂಟು. ಹಬ್ಬದ ನೆಪದಲ್ಲಿ ಸಂಗೀತ ಸಮಾರಾಧನೆ ರಾಮನವಮಿಯ ವೈಶಿಷ್ಟ್ಯ.

ಬೆಂಗಳೂರಿನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀರಾಮನವಮಿ ಅಂಗವಾಗಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಒಂದೆರಡು ಉದಾಹರಣೆ ನೋಡಿ :

  • ಶ್ರೀರಾಮ ಮಂದಿರ, ಮಲ್ಲೇಶ್ವರಂ : 82 ವರ್ಷಗಳ ಇತಿಹಾಸದ ಈ ರಾಮಮಂದಿರದಲ್ಲಿ , ರಾಮನವಮಿ ಅಂಗವಾಗಿ ಮಾ.30ರಂದು ಭಜನೆ, ಮಾ.31ರಂದು ಮೋಹನ ರಂಗನ್‌-ರವಿಕಿರಣ್‌ರ ಕೊಳಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.1ರಂದು ಶ್ರೀಕಂಠನ್‌ ನಾಗೇಂದ್ರಶಾಸ್ತ್ರಿಗಳ ಸಂಗೀತ, ಏ.2ರಂದು ಭಾರತಿ ಶಾಮಣ್ಣ ಹಾಗೂ ಜಯಣ್ಣ ಪುರಂದರರಿಂದ ಸಂಗೀತ ಕಾರ್ಯಕ್ರಮವಿದೆ.
  • ರಾಮಸೇವಾ ಮಂಡಳಿ, ಚಾಮರಾಜಪೇಟೆ : ಮಾ.30ರಂದು ಕದ್ರಿ ಗೋಪಾಲನಾಥ್‌ ಅವರ ಸಂಗೀತ, 31 ರಂದು ಖ್ಯಾತ ಕೊಳಲು ವಾದಕ ಎನ್‌.ರಮಣಿ ಅವರ ಕೊಳಲು, ಏ.1ರಂದು ಕನ್ಯಾಕುಮಾರಿ ಮತ್ತು ಸಂಗಡಿಗರಿಂದ 25 ವೀಣೆಗಳ ಪ್ರಸ್ತುತಿ, ಏ.2ರಂದು ಅರುಣ ಸಾಯಿರಾಂ ಸಂಗೀತ ಕಚೇರಿ.
  • ರಾಮ ಸೇವಾಸಮಿತಿ, ಶೇಷಾದ್ರಿಪುರಂ : ಮಾ.30ರಂದು ಮೈಸೂರು ನಾಗರಾಜ್‌ ಮತ್ತು ಮಂಜುನಾಥ್‌ರ ದ್ವಂದ್ವ ಪಿಟೀಲು, 31 ರಂದು ಸಂಜಯ ಸುಬ್ರಹ್ಮಣ್ಯರ ಗಾಯನ, ಏ.1ರಂದು ಟಿ.ಎಸ್‌.ಸತ್ಯ ಸಂಗೀತ, 2 ರಂದು ಟಿ.ಎಂ.ಕೃಷ್ಣ ಅವರ ಸಂಗೀತ.
  • ಜನರಾಮ ಸೇವಾ ಮಂಡಳಿ, ಜಯನಗರ 8ನೇ ಬ್ಲಾಕ್‌ : ಮಾ.30ರಂದು ಮಂಗಳೂರಿನ ಎಂ.ಎಸ್‌.ಲಾವಣ್ಯ, ಎಂ.ಎಸ್‌.ಸುಬ್ಬುಲಕ್ಷ್ಮಿ, ಎಂ.ಸುಧೀಂದ್ರ ಅವರಿಂದ ಸಾಕ್ಸೋಫೋನ್‌ ವಾದನ. 31ರಂದು ಮಾನಸಿ ಪ್ರಸಾದ್‌ರ ಕರ್ನಾಟಕ ಸಂಗೀತ. ಏ.1 ರಂದು ಸೌಮ್ಯ ಅವರಿಂದ ಕರ್ನಾಟಕ ಸಂಗೀತ. ಏ.2ರಂದು ಅಯ್ಯನಾರ್‌ ಸಂಗೀತ ಸಭಾದಿಂದ ತಾಳವಾದ್ಯ ಕಚೇರಿ.
  • ನರಸಿಂಹರಾಜಾ ಕಾಲೋನಿ ಅಸೋಸಿಯೇಷನ್‌ : ಸಂಘದ 66 ನೇ ವರ್ಷದ ರಾಮನವಮಿ ಕಾರ್ಯಕ್ರಮ ಆಚರಿಸುತ್ತಿದೆ. ಮಾ.31ರಂದು ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳಿಂದ ಭಕ್ತಿಗೀತೆ, ಏ.1ರಂದು ಮೂಡನೂರು ರಘುರಾಂ ಹಾಡುಗಾರಿಕೆ. ಏ.3ರಂದು ಟಿ.ವಿ.ರಾಮಪ್ರಸಾದ್‌ ಹಾಡುಗಾರಿಕೆ.
  • ಮಾಸಿ ರಂಗಮಂದಿರ, ಶಂಕರಪುರ : 42 ನೇ ವರ್ಷದ ರಾಮನವಮಿ ಕಾರ್ಯಕ್ರಮದಲ್ಲಿ , ಮಾ.31ರಂದು ವಿದ್ಯಾಭೂಷಣರಿಂದ ಭಕ್ತಿಗಾಯನ. ಏ.1 ರಂದು ವೈಜಯಂತಿ ಕಾಶಿ ಮತ್ತು ತಂಡದಿಂದ ಕೂಚಿಪುಡಿ ನೃತ್ಯ ಕಾರ್ಯಕ್ರಮ. ಏ.2ರಂದು ಮೀನಾಕ್ಷಿ ರವಿ ಮತ್ತು ವೃಂದದಿಂದ ಸೌಂದರ್ಯ ಲಹರಿ ಕಾರ್ಯಕ್ರಮ.
ಎಷ್ಟೊಂದು ಕಲಾವಿದರು, ಎಷ್ಟೊಂದು ಕಾರ್ಯಕ್ರಮಗಳು. ಎಲ್ಲವೂ ರಾಮ ಮಹಿಮೆ ! ಒಂದು ಹಬ್ಬ ಅರ್ಥಪೂರ್ಣವಾಗುವುದು ಹೀಗೆಯೇ ಅಲ್ಲವೇ ? ರಾಮನ ಈ ಪುಣ್ಯ ಇತರ ದೇವರುಗಳಿಗಿಲ್ಲ .

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X