ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಮಲ’ದ ಸಂಗ ತ್ಯಜಿಸಿ ದೇವೇಗೌಡ ದಳದ ‘ಭತ್ತಹೊತ್ತಳು’ ತಾರಕ್ಕ

By Staff
|
Google Oneindia Kannada News

‘ಕಮಲ’ದ ಸಂಗ ತ್ಯಜಿಸಿ ದೇವೇಗೌಡ ದಳದ ‘ಭತ್ತಹೊತ್ತಳು’ ತಾರಕ್ಕ
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅನಂತಕುಮಾರ್‌ಗೆ ಮುಖಾಮುಖಿ ?

ಬೆಂಗಳೂರು : ಬಿಜೆಪಿಯಿಂದ ಟಿಕೆಟ್‌ ನಿರಾಕರಣೆಗೆ ಒಳಗಾಗಿರುವ ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ದಾರ್ಥ ಜಾತ್ಯತೀತ ಜನತಾದಳ ಸೇರಿದ್ದಾರೆ.

ಬಿಜೆಪಿ ಪಕ್ಷ ಸಂಪೂರ್ಣ ಕೇಸರಿಮಯವಾಗಿದೆ. ರಾಜ್ಯ ಬಿಜೆಪಿಯ ‘ಬಾಸ್‌’ಗಳು ತಮ್ಮ ಬದುಕನ್ನು ಅತ್ಯಂತ ಆತಂಕಕ್ಕೆ ಒಡ್ಡಿದರು. ಅವರು ಮೋಸಗಾರರು, ತಮ್ಮ ರಾಜಕೀಯ ಭವಿಷ್ಯವನ್ನು ನಾಶ ಮಾಡಲು ಯತ್ನಿಸಿದರು ಎಂದು ಶನಿವಾರ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾದ ತಾರಾದೇವಿ ಆಪಾದಿಸಿದರು.

ದೇಶ ಸೇವೆ ಮಾಡಬಹುದೆನ್ನುವ ಉದ್ದೇಶದಿಂದ ಬಿಜೆಪಿ ಸೇರಿದೆ. ಆದರೆ ಆ ಪಕ್ಷಕ್ಕೆ ನನ್ನಂಥವರ ಅಗತ್ಯವಿಲ್ಲ ಎನ್ನುವುದು ಏಳು ವರ್ಷಗಳ ನಂತರ ತಿಳಿಯಿತು. ನಾನಾಗಿ ಬಿಜೆಪಿಯನ್ನು ತೊರೆಯಲು ಉದ್ದೇಶಿಸಿರಲಿಲ್ಲ . ಆದರೆ ಅವರು ಬಾಗಿಲನ್ನು ತೋರಿಸಿದರು ಎಂದು ತಾರಾದೇವಿ ತಮ್ಮ ಸಂಕಟಗಳನ್ನು ಹೇಳಿಕೊಂಡರು.

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ಸೇರಿಸುವ ಉದ್ದೇಶದಿಂದ ಜಾತ್ಯತೀತ ಜನತಾದಳಕ್ಕೆ ಸೇರಿದ್ದೇನೆ ಎಂದ ತಾರಾದೇವಿ- ಬೆಂಗಳೂರು ದಕ್ಷಿಣ ಅಥವಾ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದರು. ತಾರಾದೇವಿ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಜಾತ್ಯತೀತ ಜನತಾದಳಕ್ಕೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಹೊರದಬ್ಬಿಸಿಕೊಂಡಿದ್ದ ಗುಂಡಪ್ಪ ವಕೀಲ ಹಾಗೂ ಜಿ.ಕೃಷ್ಣಪ್ಪ ಕೂಡ ಜಾತ್ಯತೀತ ದಳ ಸೇರಿದರು.

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿದ್ದ ತಾರಾದೇವಿ, ಪಿ.ವಿ.ನರಸಿಂಹರಾವ್‌ ಸಂಪುಟದಲ್ಲಿ ಸಚಿವೆಯಾಗಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X