ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ಕಂಪ್ಯೂಟರ್ರೇ ಬೇಕೆಂದಿಲ್ಲ ; ‘ಸಿಂಪ್ಯೂಟರ್‌’ ಬಂದಿದೆಯಲ್ಲ !

By Staff
|
Google Oneindia Kannada News

ದುಬಾರಿ ಕಂಪ್ಯೂಟರ್ರೇ ಬೇಕೆಂದಿಲ್ಲ ; ‘ಸಿಂಪ್ಯೂಟರ್‌’ ಬಂದಿದೆಯಲ್ಲ !
ಬೆಂಗಳೂರಿನ ಐಟಿ ಬಜಾರಿನಲ್ಲಿ ಸಿಂಪ್ಯೂಟರ್‌ನದೇ ಸುದ್ದಿ.

ಬೆಂಗಳೂರು : ಬಡವರ ಕಂಪ್ಯೂಟರ್‌ ಎನ್ನುವ ಖ್ಯಾತಿಯ ಸಿಂಪ್ಯೂಟರ್‌ ಕೊನೆಗೂ ಮಾರುಕಟ್ಟೆಗೆ ಬಂದಿದೆ. ಇನ್ನೇಕೆ ತಡ, ಅಂಗಡಿಗೆ ಹೊರಡಿರಿ. ಅದಕ್ಕೂ ಮುನ್ನ ಈ ಸುದ್ದಿ ಓದಿರಿ.

ಹೆಚ್ಚೂಕಮ್ಮಿ ಅಂಗೈ ಅಗಲದಷ್ಟಿರುವ ಈ ಸಿಂಪ್ಯೂಟರ್‌ನಿಂದ ಅಂತರ್ಜಾಲ ವಿಹಾರ, ಇ-ಪತ್ರ ವ್ಯವಹಾರ, ಹಾಗೂ ಇನ್ನಿತರ ವಾಣಿಜ್ಯಸಂಬಂಧಿ ಕೆಲಸ ಕಾರ್ಯ ಸಲೀಸಾಗಲಿದೆ. ಇನ್ನುಮುಂದೆ, ಅಗಲ ತೆರೆಯ ಹಾಗೂ ಬಹುಬೆಲೆಯ ಕಂಪ್ಯೂಟರ್ರೇ ಆಗಬೇಕೆಂದಿಲ್ಲ ; ಸಿಂಪ್ಯೂಟರ್‌ ಇದೆಯಲ್ಲ !

ಬೆಂಗಳೂರಿನ ಬಹುತೇಕ ಕಂಪ್ಯೂಟರ್‌ ಮಳಿಗೆಗಳಲ್ಲಿ ಇದೀಗ ಸಿಂಪ್ಯೂಟರ್‌ ಲಭ್ಯವಿದ್ದು - ರೂ. 9. 950, ರೂ. 12. 950 ಮತ್ತು ರೂ. 19. 950 ಬೆಲೆಯ ಮೂರು ಮಾದರಿಗಳಿವೆ. ಅಲ್ಲದೇ ಅಂತರ್ಜಾಲ ತಾಣ www.amidasimputer.com ದಿಂದ ಕೂಡ ಸಿಂಪ್ಯೂಟರ್‌ಗಳನ್ನು ಬುಕ್‌ ಮಾಡಬಹುದಾಗಿದೆ.

ಸಿಂಪ್ಯೂಟರ್‌ ಭಾರತದಲ್ಲೇ ತಯಾರಾದ ಪ್ರಪ್ರಥಮ ಪುಟಾಣಿ ಗಣಕಯಂತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮತ್ತು ಪಿಕೊಪಿಟಾ ಸಿಂಪ್ಯೂಟರ್ಸ್‌ ಕಂಪನಿಯ ಸಹಯೋಗದಲ್ಲಿ ಹೊರ ಬಂದಿರುವ ಈ ಸಿಂಪ್ಯೂಟರ್‌ಗೆ ಅಮಿದ ಎಂದು ನಾಮಕರಣ ಮಾಡಲಾಗಿದೆ. ಅಮಿತಾಭ ಮತ್ತು ಬುದ್ಧ ಹೆಸರಿನ ಸಂಕ್ಷಿಪ್ತ ರೂಪ ಅಮಿದ ಆಗಿದೆ.

ಯಾವುದೇ ಭಾಷೆಯಲ್ಲಿ ನೇರವಾಗಿ ನಾವು ಸಿಂಪ್ಯೂಟರ್‌ ಪರದೆಯ ಮೇಲೆ ಬರೆಯುವ, ಬೇಕಾದಂತೆ ರೇಖಾ ಚಿತ್ರಗಳನ್ನು ಕೂಡ ಬಿಡಿಸಬಲ್ಲ ವ್ಯವಸ್ಥೆಯಿರುವುದು ಅಮಿದ ದ ಆಕರ್ಷಣೆಯಲ್ಲೊಂದಾಗಿದೆ.

ಬಹು ದಿನಗಳ ಪರಿಶ್ರಮದಿಂದ ಒಡಮೂಡಿದ ಸಿಂಪ್ಯೂಟರ್‌, ಮಾರುಕಟ್ಟೆಗೆ ಪರಿಚಯವಾಗುವಲ್ಲಿ ಕೊಂಚ ವಿಳಂಬವಾದರೂ ಪರಿಪೂರ್ಣ ಬಳಕೆಯಾಗುವಲ್ಲಿ ಸಂಶಯವೇ ಇಲ್ಲ ಎಂಬುದು ಬಿಇಎಲ್‌ನ ವ್ಯವಸ್ಥಾಪಕ ನಿರ್ದೇಶಕ ವೈ. ಎಲ್‌. ಗೋಪಾಲ್‌ ರಾವ್‌ ಅವರ ಅಭಿಪ್ರಾಯ.

ಅಮಿದ ದ ಮೊದಲ ಹೆಜ್ಜೆಯಾಗಿ ಭಾರತೀಯ ಉತ್ಪನ್ನಗಳ ಕಂಪೆನಿಗಳು ಜಾಗತಿಕ ಮಟ್ಟದಲ್ಲಿ ಒಂದು ಅನನ್ಯ ಸ್ಥಾನ ಗಳಿಸಿದೆ ಎಂದು ಪಿಕೊಪಿಟಾದ ಕಾರ್ಯದರ್ಶಿಗಳಾದ ಪ್ರೊ. ವಿನಯ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ತಿಂಗಳಿಗೆ 10,000 ಸಿಂಪ್ಯೂಟರ್‌ ಹೊರ ತರುವ ಯೋಜನೆಯನ್ನು ರೂಪಿಸಲಾಗಿದ್ದು, 2004 ವರ್ಷದ ಅಂತ್ಯದಲ್ಲಿ ಕನಿಷ್ಠ ಪಕ್ಷ 50,000 ಸಿಂಪ್ಯೂಟರ್‌ನ್ನು ವಿವಿಧ ಮಾದರಿಯಲ್ಲಿ ಬಿಇಎಲ್‌ ಮತ್ತು ಪಿಕೊಪಿಟಾ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

(ಏಜನ್ಸೀಸ್‌)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X