ಛಾಪ ಪಾಪ : ರಾಜ್ಯದ ಪ್ರಕರಣಗಳ ಅಧಿಕೃತ ಸಿಬಿಐ ತನಿಖೆಗೆ ಚಾಲನೆ
ಛಾಪ ಪಾಪ : ರಾಜ್ಯದ ಪ್ರಕರಣಗಳ ಅಧಿಕೃತ ಸಿಬಿಐ ತನಿಖೆಗೆ ಚಾಲನೆ
ತನಿಖೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ
ಕರ್ನಾಟಕ ಸರ್ಕಾರವು ಸ್ಟಾಂಪಿಟ್‌ನಿಂದ ತನಿಖೆಗೊಳಪಟ್ಟ ಎಲ್ಲ ಕೇಸುಗಳನ್ನೂ ಸಿಬಿಐ ವಶಕ್ಕೊಪ್ಪಿಸಿದೆ. ತನಿಖಾ ತಂಡದಲ್ಲಿ ಸಿಬಿಐನ ಜಂಟಿ ನಿರ್ದೇಶಕರಾದ ಅರ್ಚನಾ ರಾಮಸುಂದರಂ ಮತ್ತು ಡಿಐಜಿ ಪ್ರಭಾತ್ ಕುಮಾರ್ ಇದ್ದಾರೆ ಎಂದು ರಾಜ್ಯ ಗೃಹ ಇಲಾಖೆಯ ಹಿರಿಯ ಅಧಿಕಾರಿ ಕೆ.ಪಿ. ಪಾಂಡೆ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಈ ಮೊದಲು ಅರ್ಚನಾ ಮತ್ತು ಪ್ರಭಾತ್ ಕುಮಾರ್ ಅವರುಗಳು ಪಾಂಡೆ, ಡಿಜಿಪಿ ಟಿ. ಮಡಿಯಾಳ್ ಮತ್ತು ಸ್ಟಾಂಪಿಟ್ ಪ್ರಮುಖರಾದ ಶ್ರೀಕುಮಾರ್ ಜೊತೆ ಪ್ರಕರಣ ಸಂಬಂಧಿಸಿ ಒಂದು ಗಂಟೆಗೂ ಹೆಚ್ಚು ಹೊತ್ತು ಚರ್ಚಿಸಿದ್ದರು. ಸ್ಟಾಂಪಿಟ್ ತನಿಖೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 16 ಚಾರ್ಜ್ ಶೀಟ್‌ಗಳನ್ನು ಕಡತದಲ್ಲಿಡಲಾಗಿದೆ.
ಕೇಂದ್ರ ತನಿಖಾ ತಂಡಕ್ಕೆ ಅಗತ್ಯ ಮಾಹಿತಿ, ನೆರವನ್ನು ಕೊಡಲು ಬದ್ಧರಾಗಿದ್ದೇವೆ. ಜೊತೆಗೆ ತನಿಖೆ ಮುಗಿವವರೆಗೆ ತಂಡದ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಪಾಂಡೆ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು