ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳಿ, ಎದ್ದೇಳಿ, ಎಚ್ಚರಗೊಳ್ಳಿ ! ಬೆಂಗಳೂರಲ್ಲಿ ಟಿ.ಎನ್‌. ಶೇಷನ್‌ !

By Staff
|
Google Oneindia Kannada News

ಏಳಿ, ಎದ್ದೇಳಿ, ಎಚ್ಚರಗೊಳ್ಳಿ ! ಬೆಂಗಳೂರಲ್ಲಿ ಟಿ.ಎನ್‌. ಶೇಷನ್‌ !
ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಕೋಪಗೊಳ್ಳುವಂತೆ ಮತದಾರರಿಗೆ ಶೇಷನ್‌ ಕರೆ

ಬೆಂಗಳೂರು : ದೇಶದಲ್ಲಿ ನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹರಿತಗೊಳಿಸಲು, ಅತ್ಯುತ್ತಮಗೊಳಿಸಲು ಮತದಾರರು ಆಸಕ್ತಿ ವಹಿಸಬೇಕು ಎಂದು ಚುನಾವಣಾ ಆಯೋಗದ ಮಾಜಿ ಪ್ರಧಾನ ಆಯುಕ್ತ ಟಿ.ಎನ್‌.ಶೇಷನ್‌ ಅಭಿಪ್ರಾಯಪಟ್ಟಿದ್ದಾರೆ.

ಮತದಾರರು ಕ್ರಿಯಾಶೀಲ ಸಿಟ್ಟು ತಾಳಬೇಕಾದ ಸಮಯ ಸನ್ನಿಹಿತವಾಗಿದೆ. ಈ ಸಿಟ್ಟಿನ ಮೂಲಕವೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಬಹುದು ಎಂದು ಶೇಷನ್‌ ಮಾ.17ರ ಬುಧವಾರ ಹೇಳಿದರು. ಅವರು ನಮ್ಮಲ್ಲಿ ಸಾಕಷ್ಟು ಕ್ರಿಯಾಶೀಲತೆ ಇದೆಯೇ? ಎನ್ನುವ ವಿಷಯದ ಕುರಿತು, ಸಿಐಐನ ಅನ್ವೇಷಣೆಯಿಂದ ಮೂಲಕ ಸ್ಪರ್ಧಾತ್ಮಕತೆ ಎನ್ನುವ ವಿಷಯದ ಕುರಿತು ಮಾತನಾಡುತ್ತಿದ್ದರು.

ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಇಡೀ ಜಗತ್ತಿಗೇ ತಿಳಿದಂತೆ ಭಾರತ ಕ್ರಿಯಾಶೀಲವಾಗಿದೆ: ಆದರೆ ಅದು ನಿಮಗೆ ಸಾಕೆನಿಸುತ್ತಿದೆಯೇ ? ಎಂದು ಶೇಷನ್‌ ಮತದಾರರನ್ನು ಪ್ರಶ್ನಿಸಿದರು. ಸರ್ಕಾರವು ದೇಶದ ಪರಿಸ್ಥಿತಿಯನ್ನು ಸುಧಾರಣೆಗೆ ತರುವುದು ನಿಮಗೆ ಬೇಕಾದಲ್ಲಿ, ನೀವು ಪ್ರಜಾಪ್ರಭುತ್ವವನ್ನು ಸುಧಾರಿಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕ್ರಿಯಾಶೀಲರಾಗಬೇಕು ಎಂದರು.

ಬಹುತೇಕ ಭಾರತೀಯರು ಅನಕ್ಷರಸ್ಥರು. ಅವರು ಮತ ಹಾಕುವ ಯಂತ್ರದ ಎದುರು ನಿಂತರೂ ತಮ್ಮ ಮತ ಯಾರಿಗೆ ಹಾಕಬೇಕೆಂದು ಅರಿಯದವರೂ ಇದ್ದಾರೆ. ಅವರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಮಾಜಿ ಚುನಾಧಿವಣ ಆಯುಕ್ತ ಶೇಷನ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X