ಪಾಕಿಸ್ತಾನದಿಂದ 2000 ಕಿಮೀ. ಕ್ರಮಿಸಬಲ್ಲ ಷಹೀನ್-2 ಕ್ಷಿಪಣಿ
ಪಾಕಿಸ್ತಾನದಿಂದ 2000 ಕಿಮೀ. ಕ್ರಮಿಸಬಲ್ಲ ಷಹೀನ್-2 ಕ್ಷಿಪಣಿ
ಪಾಕ್ ಬತ್ತಳಿಕೆಯಲ್ಲಿ ಸಾಲು ಸಾಲು ಕ್ಷಿಪಣಿಗಳು
2000 ಕಿಮೀಗಳ ದೂರವನ್ನು ಕ್ರಮಿಸಬಲ್ಲ ಷಹೀನ್-2 ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆಯಿತು ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿ ಪರೀಕ್ಷೆಯ ಕುರಿತು ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ಪಾಕಿಸ್ತಾನ ಮಾಹಿತಿ ನೀಡಿತ್ತು .
ಅಲ್ಪಗಾಮಿ, ಮಧ್ಯಗಾಮಿ ಹಾಗೂ ದೂರಗಾಮಿ ಕ್ಷಿಪಣಿಗಳ ಪ್ರಯೋಗಗಳನ್ನು ನಿಯಮಿತವಾಗಿ ನಡೆಸುವ ಮೂಲಕ ಪಾಕಿಸ್ತಾನ ತನ್ನ ಕ್ಷಿಪಣಿ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ. 280 ಕಿಮೀ ಕ್ರಮಿಸುವ ಸಾಮರ್ಥ್ಯದ ಷಹೀನ್-1, 600 ಕಿಮೀ ಕ್ರಮಿಸುವ ಶಕ್ತಿಯ ಹತೀಫ್ (ಘಝ್ನವಿ)-1 ಹಾಗೂ ಅಣ್ವಸ್ತ್ರ ಸಿಡಿತಲೆಗಳ ಒಯ್ಯಬಲ್ಲ ಹತಫ್-3 (290 ಕಿಮೀ ದೂರ ಕ್ರಮಿಸಬಲ್ಲ ದು) ಕ್ಷಿಪಣಿಗಳ ಪ್ರಯೋಗಗಳನ್ನು ಪಾಕಿಸ್ತಾನ ಈಗಾಗಲೇ ನಡೆಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications