ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿ ಆಗದಿದ್ದರೆ ವಾಜಪೇಯಿ ಬೇರೆ ಏನಾಗುತ್ತಿದ್ದರು ?

By Staff
|
Google Oneindia Kannada News

ರಾಜಕಾರಣಿ ಆಗದಿದ್ದರೆ ವಾಜಪೇಯಿ ಬೇರೆ ಏನಾಗುತ್ತಿದ್ದರು ?
ವಾಜಪೇಯಿ ಕವಿತೆಗಳ ಕನ್ನಡ, ತೆಲುಗು, ಮಲಯಾಳಿ ಭಾಷಾನುವಾದ ಪ್ರಕಟ

ನವದೆಹಲಿ : ಭಾರತೀಯ ರಾಜಕಾರಣದ ಜನಪ್ರಿಯತೆಯ ಉತ್ತುಂಗದಲ್ಲಿರುವ ಪ್ರಧಾನಿ ಆಟಲ್‌ ಬಿಹಾರಿ ವಾಜಪೇಯಿ ರಾಜಕಾರಣಿ ಅಲ್ಲದಿದ್ದರೆ ಏನಾಗುತ್ತಿದ್ದರು ಎಂಬ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ವಾಜಪೇಯಿ ಉತ್ತರವೇನು ಗೊತ್ತಾ - ನನ್ನ ಬಾಲ್ಯದ ಇಚ್ಛೆಯಂತೆ ಕವಿ ಅಥವಾ ಪತ್ರಕರ್ತನಾಗುತ್ತಿದೆ. ಆದರೆ ಕವಿ-ಪತ್ರಕರ್ತನಾಗುವ ಪ್ರಕ್ರಿಯೆಯಲ್ಲಿ ನಾನು ರಾಜಕಾರಣಿಯಾಗಿ ಬಿಟ್ಟೆ.

ನಾನು ಒಬ್ಬ ಕವಿಯಾಗಬಲ್ಲೆ ಎಂದು ಯಾವತ್ತೂ ಅಂದುಕೊಂಡಿಲ್ಲ. ಆದರೆ ಪತ್ರಕರ್ತನಾಗಬೇಕೆಂಬ ಹಂಬಲವಿತ್ತು. ಆದರೆ ಅವೆರಡೂ ಅಲ್ಲದೆ ರಾಜಕಾರಣಿಯಾಗಿ ಬಿಟ್ಟೆ ಎಂದು ಕಾಂಗ್ರೆಸೇತರ ಪೂರ್ಣಾವಧಿ ಸರಕಾರ ನಡೆಸಿದ ದೇಶದ ಪ್ರಥಮ ಪ್ರಧಾನಿ ಹೇಳಿದರು. ಅವರು ತಮ್ಮ ಕವಿತೆಗಳ ಕನ್ನಡ, ತೆಲುಗು, ಮಲಯಾಳಿ ಭಾಷಾನುವಾದ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಈ ಪುಸ್ತಕಗಳು ಯೋಜನಾ ಆಯೋಗದ ಸದಸ್ಯ ವೆಂಕಟಸುಬ್ರಹ್ಮಣ್ಯನ್‌ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ. ತಮಿಳು ಅವತರಣಿಕೆ ಈ ಹಿಂದೆಯೇ ಪ್ರಕಟಗೊಂಡಿತ್ತು.

ಭಾರತ ಬಹುಭಾಷೀಯ ರಾಷ್ಟ್ರ. ಆದ್ದರಿಂದ ಯಾವುದೇ ಭಾಷೆಯ ಪ್ರಶಂಸಾತ್ಮಕ ಕೃತಿಗಳು ತಕ್ಷಣ ಇತರ ಭಾಷೆಗೆ ಭಾಷಾಂತರಗೊಳ್ಳಬೇಕು ಎಂದು ವಾಜಪೇಯಿ ಅಭಿಪ್ರಾಯಪಟ್ಟರು.

ನಾನು ಕೆಲವೇ ದಿನಗಳು ಸರಕಾರ ನಡೆಸಿರಬಹುದು. ಆದರೆ ಶೋಷಿತ ವರ್ಗಕ್ಕೆ ಸಹಾಯ ಮಾಡಲು ಹೊರಟಾಗ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ‘ವಾಜಪೇಯಿ ಕವಿಯೇ’ ಎಂಬ ಸೋನಿಯಾ ಗಾಂಧಿ ಟೀಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾ ಹೇಳಿದರು.

ವಾಜಪೇಯಿ ಕೃತಿಗಳನ್ನು ಭಾರತೀಯ ಭಾಷೆಗಳಿಗೆ ಮಾತ್ರವಲ್ಲ , ವಿದೇಶಿ ಭಾಷೆಗಳಿಗೂ ಭಾಷಾಂತರ ಮಾಡಲಾಗುವುದು. ಕವಿಯ ಅಂತಃಸತ್ವ ಪ್ರಜ್ವಲಿಸುವಂತೆ ಅನುವಾದಿಸಲಾಗುವುದು ಎಂದು ಕೇಂದ್ರ ಸಚಿವ ಮುರಳಿಮನೋಹರ ಜೋಷಿ ಹೇಳಿದರು. ಈ ಸಂದರ್ಭದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ.ಪಂತ್‌ ಹಾಜರಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X