ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಸೈಟು ಬಿಕರಿ ಮಾಡೊ ‘ಬಿಡಿಎ’ ಏಜೆನ್ಸಿ ಕಥೆಯಿದು

By Staff
|
Google Oneindia Kannada News

ಬೆಂಗಳೂರಲ್ಲಿ ಸೈಟು ಬಿಕರಿ ಮಾಡೊ ‘ಬಿಡಿಎ’ ಏಜೆನ್ಸಿ ಕಥೆಯಿದು
ಇರುವವರಿಗೇ ಎಲ್ಲ , ಇಲ್ಲದವರಿಗಿಲ್ಲ ಎಂಬ ಬಿಡಿಎ ನೀತಿ

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳಿಗಾಗಿ ಸಲ್ಲಿಸಲಾಗಿರುವ, ಸಲ್ಲಿಸಲಾಗುತ್ತಿರುವ ಅರ್ಜಿಗಳ ಸಂಖ್ಯೆ ನೋಡಿದರೆ ಬೆರಗಾಗುವಂತಿದೆ. ಇದು ಬೆಂಗಳೂರು ನಗರದಲ್ಲಿ ಸೂರು ಇಲ್ಲದವರ ಸಂಖ್ಯೆಯನ್ನು ಬಿಂಬಿಸುತ್ತಿದೆಯೇ? ಕರ್ನಾಟಕ ಪ್ರಕಾಶಿಸುತ್ತಿದೆ ಎಂದು ಕೃಷ್ಣ ಹೇಳುವಂತಿಲ್ಲ !

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರತಿ ಬಾರಿ ಹೊಸ ನಿವೇಶನಗಳ ಅರ್ಜಿ ಕರೆದಾಗಲೂ ಅರ್ಜಿದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಬಾರಿ 10,000 ಬಿಡಿಎ ನಿವೇಶನಗಳಿಗೆ ಸುಮಾರು 1.20 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ನಗರದ ಜನಸಂಖ್ಯೆ ಬೆಳೆಯುತ್ತಿರುವ ವೇಗಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.

ಈಗಾಗಲೇ ಒಂದೊ ಎರಡೊ ನಿವೇಶನಗಳನ್ನು ಹೊಂದಿರುವವರು ಕೂಡ ಪುನಃ ಅರ್ಜಿ ಸಲ್ಲಿಸಿರುವುದು, ಒಡೆತನದಲ್ಲಿರುವ ನಿವೇಶನಗಳಿಗೆ ‘ಒಳ್ಳೆಯ ರೇಟು ಬರಲಿ ’ಎಂದು ಹಾಗೆಯೇ ಖಾಲಿ ಬಿಟ್ಟಿರುವ ಉದಾಹರಣೆಗಳೂ ಇವೆ. ಎರಡು, ಮೂರು ನಿವೇಶನಗಳನ್ನು ಹೊಂದಿರುವವರಿಗೇ ಬಿಡಿಎ ಪುನಃ ನಿವೇಶನಗಳನ್ನು ಮಂಜೂರು ಮಾಡುತ್ತಿರುವ ತಮಾಷೆಗಳೂ ಮಾಯಾನಗರಿಯಲ್ಲಿ ಸಾಕಷ್ಟಿವೆ.

ಮುಖ್ಯಮಂತ್ರಿಗಳ ಕೋಟಾದಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ನಿವೇಶನ ದೊರೆಯುತ್ತದೆ. ಅಂತಹ ನಿವೇಶನಗಳಿಗೆ ರಾಜ ಬೇಡಿಕೆ. ಕರ್ನಾಟಕದವರಾಗಿದ್ದು ದೆಹಲಿಯಲ್ಲಿ ನೆಲೆಸಿದ್ದರೂ, ಇಲ್ಲಿ ಯಾರಾದರೂ ಸಂಬಂಧಿಕರಿದ್ದರೆ ಅವರೂ ಅರ್ಜಿ ಸಲ್ಲಿಸಬಹುದು.

‘ಬಿಡಿಎ ಸೈಟು ಖರೀದಿಗೆ ದುಡ್ಡು ಹಾಕಿದ್ರೆ ಒಳ್ಳೆ ಇನ್ವೆಸ್ಟ್‌ಮೆಂಟು’ ಎನ್ನುವ ಮಾತು ಬೆಂಗಳೂರಲ್ಲಿ ಚಾಲ್ತಿಯಲ್ಲಿದೆ. ಏಕೆಂದರೆ ಬಿಡಿಎ ಜಾಗದ ದರ ಮಾರುಕಟ್ಟೆ ದರಕ್ಕಿಂತ ತುಂಬ ಕಡಿಮೆ. ನಿವೇಶನ ಮಂಜೂರಾತಿಯ ಮುಂಚೆ ಸರಿಯಾದ ವಿಚಾರಣೆಗಳಾಗಲೀ, ತಪಾಸಣೆಗಳಾಗಲೀ ಇಲ್ಲ.

‘ಬಿಡಿ ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳುವೆ’ ನೆಂಬ ಮನೋಭಾವದ ಬಿಡಿಎ ಹಳೆಯ ಪದ್ಧತಿಗಳನ್ನೇ ಇನ್ನೂ ಅನುಸರಿಸುತ್ತಿದೆ. ಹೀಗೇ ಮುಂದುವರಿದರೆ ‘ಇರುವವರಿಗೇ ಎಲ್ಲ ; ಇಲ್ಲದವರಿಗಿಲ್ಲ ’ ಎಂಬ ದಾಸರ ಸಾಲು ವಾಸ್ತವಕ್ಕೆ ಬರುವಲ್ಲಿ ಸಂಶಯವೇ ಇಲ್ಲ !

ಅಂದಹಾಗೆ, ಬೆಂಗಳೂರಲ್ಲಿ ನಿಮ್ಮದೊಂದು ನಿವೇಶನವಿದೆಯಾ ?

(ಇನ್ಫೋ ವಾರ್ತೆ)

Post your views

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X