ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳ್ಗಿಚ್ಚು , ನಾಗರಹೊಳೆ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

By Staff
|
Google Oneindia Kannada News

ಕಾಳ್ಗಿಚ್ಚು , ನಾಗರಹೊಳೆ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ
ಮಾರ್ಚ್‌ 1ರಿಂದಲೇ ನಿಷೇಧ ಜಾರಿ, ಬೆಂಕಿ ಹತೋಟಿಗೆ ಸಮರ ಸಿದ್ಧತೆ

ಮೈಸೂರು : ಕಾಳ್ಗಿಚ್ಚಿನ ಭೀತಿಯಿಂದಾಗಿ ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ.

ನಾಗರಹೊಳೆ ಉದ್ಯಾನಕ್ಕೆ ಸಾರ್ವನಿಕರ ಪ್ರವೇಶವನ್ನು ಮಾರ್ಚ 1ರಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ನಾಗರಹೊಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಾಳ್ಗಿಚ್ಚು ಹತೋಟಿಗೆ ಬರುವವರೆಗೂ, ಅನಿರ್ದಿಷ್ಟ ಕಾಲ ಈ ನಿಷೇಧ ಮುಂದುವರಿಯಲಿದೆ ಎಂದು ಪ್ರಾಜೆಕ್ಟ್‌ ಟೈಗರ್‌ನ ಕ್ಷೇತ್ರ ನಿರ್ದೇಶಕರು ತಿಳಿಸಿದ್ದಾರೆ.

ಅರಣ್ಯ ಸಿಬ್ಬಂದಿ ಹಾಗೂ ಲಭ್ಯವಿರುವ ಎಲ್ಲ ವಾಹನಗಳನ್ನೂ ಬೆಂಕಿ ಹತೋಟಿಗೆ ತರಲು ಬಳಸಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸಫಾರಿ ಹಾಗೂ ವಸತಿಗೃಹಗಳಲ್ಲಿ ಸಾರ್ವಜನಿಕರು ಉಳಿದುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಬೇಸಗೆಯಲ್ಲಿ ಕಾಳ್ಗಿಚ್ಚು ಸ್ವಾಭಾವಿಕವಾದರೂ, ಈ ಬಾರಿ ಕಾಳ್ಗಿಚ್ಚಿನ ಬೇಗೆ ತೀವ್ರತರವಾಗಿದೆ. ಕಾಳ್ಗಿಚ್ಚನ್ನು ಹತೋಟಿಗೆ ತರಲು ಅರಣ್ಯ ಸಿಬ್ಬಂದಿ ಯಮ ಸಾಹಸ ಪಡುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X