ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಬೇರರ ಯಾದಿಯಲ್ಲಿ ಒಂಬತ್ತು ಭಾರತೀಯರಿಗೆ ಸ್ಥಾನ, ಗೇಟ್ಸ್‌ ಪ್ರಥಮಿಗ

By Staff
|
Google Oneindia Kannada News

ಕುಬೇರರ ಯಾದಿಯಲ್ಲಿ ಒಂಬತ್ತು ಭಾರತೀಯರಿಗೆ ಸ್ಥಾನ, ಗೇಟ್ಸ್‌ ಪ್ರಥಮಿಗ
‘ಫೊರ್ಬ್‌ಸ್‌’ ಪ್ರಕಟಿಸಿದ ಬಿಲಿಯನ್‌ ಪಟ್ಟಿಯಲ್ಲಿ ವಿಶ್ವದ ಅಗ್ರ ಸ್ಥಾನ ಬಿಲ್‌ ಗೇಟ್ಸ್‌ ಗೆ,ಭಾರತದ ನಂ.1 ಅಜೀಮ್‌ ಪ್ರೇಮಜಿ

ಲಂಡನ್‌: ಇಂಗ್ಲೆಂಡ್‌ ಮೂಲದ ಪ್ರತಿಷ್ಠಿತ ‘ಫೋರ್ಬ್ಸ್‌’ ನಿಯತಕಾಲಿಕ ಪ್ರಕಟಿಸಿರುವ ವಿಶ್ವದ ಅತಿ ಶ್ರಿಮಂತ ಪಟ್ಟಿಯಲ್ಲಿ ಒಂಬತ್ತು ಭಾರತೀಯರು ಸ್ಥಾನ ಪಡೆದಿದ್ದು , ಕರ್ನಾಟಕದ ಅಜೀಂ ಪ್ರೇಂಜಿ ಭಾರತೀಯರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.

‘ಫೋರ್ಬ್ಸ್‌’ ಪಟ್ಟಿಯು ವಿಶ್ವದ 587 ಬಿಲಿಯನ್‌ಪತಿಗಳ ಹೆಸರನ್ನು ಹೊಂದಿದೆ. ಸತತ ಹತ್ತನೇ ಬಾರಿ ಬಿಲ್‌ ಗೇಟ್ಸ್‌ (46.6 ಬಿ) ತಮ್ಮ ಅಗ್ರ ಸ್ಥಾನ ಕಾಯ್ದುಕೊಂಡರೆ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ ಜಾಗತಿಕ ಶ್ರೀಮಂತರ ಯಾದಿಯಲ್ಲಿ 58ನೇ ಸ್ಥಾನ ಪಡೆದಿದ್ದಾರೆ.

18ನೇ ವರ್ಷದ ಈ ಪಟ್ಟಿಯಲ್ಲಿ 64 ಹೊಸ ಮುಖಗಳಿವೆ. ಅವನತಿ ಕಂಡಿದ್ದ 56 ಶ್ರೀಮಂತರು ಮತ್ತೆ ಸ್ಥಾನ ಪಡೆದಿದ್ದಾರೆ. ಏಷ್ಯಾದ ಅತೀ ಸಿರಿವಂತ ಸೌದಿ ಅರೇಬಿಯಾದ ದೊರೆ ಅಲ್ವಾಲೀದ್‌ ಬಿನ್‌ ತಲಾಲ್‌ ಅಲ್‌ಸೂದ್‌(21.5ಬಿ,), ವಿಶ್ವದ ಶ್ರಿಮಂತ ಮಹಿಳೆ ‘ವಾಲ್‌-ಮಾರ್ಟ್‌’ ನ ಆಲಿಸ್‌ ವಾಲ್ಟನ್‌(20ಬಿ,) ‘ಫೋರ್ಬ್ಸ್‌’ ಪಟ್ಟಿಯ ಇತರ ಪ್ರಮುಖರು.

ಭಾರತೀಯರಲ್ಲಿ , ಪ್ರೇಂಜಿ ನಂತರ ಎರಡನೇ ಸ್ಥಾನ ಪಡೆದಿರುವ ಲಕ್ಷಿ ಮಿಟ್ಟಲ್‌ ಅನಿವಾಸಿ ಭಾರತೀಯರು. ಎರಡು ವರ್ಷಗಳ ಹಿಂದೆ ಬಿಡಿಗಾಸಿಗೆ ಪರದಾಡುತ್ತಿದ್ದ ‘ಹ್ಯಾರಿ ಪಾಟರ್‌’ ಲೇಖಕಿ ಜೊಯನ್‌ ಕಥ್ಲೀನ್‌ ರೋವ್‌ಲಿಂಗ್‌ ಇಂದು ಬಿಲಿಯನ್‌ ದೊರೆ. ಇದು ಅಚ್ಚರಿಯಾದರೂ ಬರಹಕ್ಕಿರುವ ಮಹತ್ವವನ್ನು ತೋರಿಸಿದೆ.

ವಿಶ್ವದಲ್ಲಿಯೇ ಅಮೇರಿಕಾ ಅತೀ ಹೆಚ್ಚಿನ ಬಿಲಿಯನ್‌ ದೊರೆಗಳನ್ನು ಹೊಂದಿದೆ. ಎರಡನೇ ಮತ್ತು ಮೂರನೇ ಸ್ಥಾನ ಕ್ರಮವಾಗಿ ಜರ್ಮನಿ ಮತ್ತು ರಷ್ಯಾದ ಪಾಲಾಗಿದೆ. ಬಿಲಿಯಪತಿಗಳಲ್ಲಿ ಹೆಚ್ಚಿನ ಸಂಖೆಯಲ್ಲಿ ್ಯ ಅಂತರರಾಷ್ಟ್ರೀಯ ಕಂಪೆನಿಗಳ ಒಡೆಯರಿದ್ದಾರೆ.

‘ಫೋರ್ಬ್ಸ್‌’ ಪಟ್ಟಿಯಲ್ಲಿನ ಭಾರತೀಯರು :

ಕ್ರಮಾಂಕ ಹೆಸರು ಆಸ್ತಿ (ಬಿ.ಡಾಲರ್‌ಗಳಲ್ಲಿ ) ಕ್ರಮಾಂಕ
1 ಅಜೀಂ ಪ್ರೇಂಜಿ 6.70 58
2 ಲಕ್ಷ್ಮಿ ಮಿಟ್ಟಲ್‌ 6.20 62
3 ಮುಖೇಶ್‌ ಮತ್ತು ಅನಿಲ್‌ ಅಂಬಾನಿ 6.00 65
4 ಕುಮಾರ ಮಂಗಲಂ ಬಿರ್ಲಾ 3.20 147
5 ಸುನೀಲ್‌ ಮಿಟ್ಟಲ್‌ 2.70 186
6 ಪಲ್ಲೊಂಜಿ ಮೇಸ್ತ್ರಿ 2.30 231
7 ಆದಿ ಗೋದ್ರೇಜ್‌ ಮತ್ತು ಕುಟುಂಬ 2.00 277
8 ಶಿವ ನಾಡರ್‌ 1.8 310
9 ಅನಿಲ್‌ ಅಗರ್‌ವಾಲ್‌ 1.00 552

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X