ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಟಿಂಗ್‌ ವೈಭವದಿ ಬೌಲಿಂಗ್‌ ಮೇಳೈಸೆ ಗೆಲುವು ಸಿದ್ಧ -ಪ್ರಸನ್ನ

By Staff
|
Google Oneindia Kannada News

ಬ್ಯಾಟಿಂಗ್‌ ವೈಭವದಿ ಬೌಲಿಂಗ್‌ ಮೇಳೈಸೆ ಗೆಲುವು ಸಿದ್ಧ -ಪ್ರಸನ್ನ
ಸ್ಪಿನ್‌ ಸ್ವರ್ಣಯುಗದ ಮಾಂತ್ರಿಕನಿಂದ ಪಾಕ್‌ ಪ್ರವಾಸದ ಅವಲೋಕನ

ಕಲ್ಕತ್ತ : ಹೆಚ್ಚಿನ ಭಾರತೀಯ ಬೌಲರ್‌ಗಳು ಗಾಯಾಳು ಪಟ್ಟಿಯಲ್ಲಿ ಇರುವುದರಿಂದ ಬೌಲಿಂಗ್‌ ವಿಭಾಗದ ಸಾಮರ್ಥ್ಯ ಸಂಶಯಿತವಾಗಿದೆ. ಈ ಕೊರತೆಯನ್ನು ಬಲಿಷ್ಠವಾಗಿರುವ ದಾಂಡಿಗರ ದಂಡು ತುಂಬಬೇಕಾಗಿದೆ ಎಂದು ಮಾಜಿ ಸ್ಪಿನ್‌ ಮಾಂತ್ರಿಕ ಇಎಎಸ್‌ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.

ಬೌಲಿಂಗ್‌ವಿಭಾಗ ಬ್ಯಾಟಿಂಗ್‌ಗೆ ಬೆಂಬಲಿತ ದಾಳಿ ನಡೆಸಬೇಕು. ಆ ಮೂಲಕ ತಂಡದ ಸಮತೋಲನ ಸಾಧಿಸಿ ಪ್ರವಾಸಿಗರು ಮುಂದಿನ ಪಾಕ್‌ ಸರಣಿಯಲ್ಲಿ ಗೆಲ್ಲುವುದು ಸಾಧ್ಯವಾಗುತ್ತದೆ ಎಂದು ಭಾರತೀಯ ತಂಡದ ಮಾಜಿ ಸ್ಪಿನ್‌ ಮಾಂತ್ರಿಕ ಇಎಎಸ್‌ ಪ್ರಸನ್ನ ಶುಕ್ರವಾರ ಹೇಳಿದ್ದಾರೆ.

ಇಎಎಸ್‌ ಪ್ರಸನ್ನ 18 ವರ್ಷಗಳ ಹಿಂದೆ ಪಾಕ್‌ ಪ್ರವಾಸ ಹೋದ ಭಾರತ ತಂಡದ ಪ್ರಮುಖ ಆಟಗಾರ. 49 ಟೆಸ್ಟ್‌ಗಳಲ್ಲಿ ಆಡಿರುವ ಅವರು 30.38 ಸರಾಸರಿಯಲ್ಲಿ 189 ವಿಕೆಟ್‌ ಕಬಳಿಸಿದ್ದಾರೆ. ಆಂದಿನ ಭಾರತ ತಂಡದ ಸ್ಪಿನ್‌ ಚತುರ್ಥ ಮಾಂತ್ರಿಕರಲ್ಲಿ ಪ್ರಸನ್ನ ಒಬ್ಬರಾಗಿದ್ದರು. ಕರ್ನಾಟಕದ ಈ ಆಫ್‌ಸ್ಪಿನ್‌ ಎಸೆತಗಾರ ಸದ್ಯ ಕಲ್ಕತ್ತ ನಿವಾಸಿ.

ನಾವು ಖಚಿತವಾಗಿ ಪಾಕಿಸ್ಥಾನಕ್ಕಿಂತ ಪ್ರಬಲ ಬ್ಯಾಟಿಂಗ್‌ ಹೊಂದಿದ್ದೇವೆ. ಇದರಲ್ಲಿ ಅನುಮಾನದ ಸುಳಿವಿಲ್ಲ. ಆದರೆ ಗೆಲ್ಲಲು 20 ವಿಕೆಟ್‌ಗಳನ್ನು ಪಡೆಯಲೇ ಬೇಕು. ನಮ್ಮ ಹೆಚ್ಚಿನ ಬೌಲರ್‌ಗಳು ಗಾಯಾಳು ಆಗಿರುವುದರಿಂದ ನನಗೆ ಸ್ವಲ್ಪ ಸಂಶಯವಾಗುತ್ತಿದೆ ಎಂದು 60-70ರ ದಶಕದ ಭಾರತೀಯ ಸ್ಪಿನ್‌ ತಾರೆ ನುಡಿದರು.

ಅನುಭವಿ ವೇಗಿಗಳಾದ ಜಹಿರ್‌ ಖಾನ್‌, ಆಶಿಶ್‌ ನೆಹ್ರಾ, ಅಜಿತ್‌ ಅಗರ್ರಕರ್‌ ಗಾಯಾಳಾಗಿರುವುದು ಭಾರತಕ್ಕೆ ದೊಡ್ಡ ಹೊಡೆತ. ಹರಭಜನ್‌ ಸಿಂಗ್‌ ಬೆರಳುಗಾಯದಿಂದ ಹೊರಗುಳಿದಿದ್ದಾರೆ. ಅನಿಲ್‌ ಕುಂಬ್ಳೆ ಭರವಸೆ ಮೂಡಿಸುತ್ತಿಲ್ಲ. ಹೊಸ ಅನನುಭವಿ ಸ್ಪಿನ್‌ ದಾಳಿಗಾರರು ಈ ಸ್ಥಾನವನ್ನು ಎಷ್ಟು ತುಂಬಬಲ್ಲರು ಎಂಬುದು ಅನುಮಾನದ ಪ್ರಶ್ನೆ. ಪಾಕಿಸ್ಥಾನದ ಪಿಚ್‌ಗಳು ನಿಧಾನಗತಿಯವು. ವಿಶೇಷ ಶ್ರಮ ಮತ್ತು ಹೆಚ್ಚಿನ ಕೌಶಲ್ಯ ನಿರೀಕ್ಷಿಸುತ್ತವೆ. ಇಂತಹ ವಿಕೆಟ್‌ನಲ್ಲಿ ಜೊತೆಯಾಟ ಬೆಳೆಯದಂತೆ ನಮ್ಮ ಬೌಲರ್‌ಗಳು ನಿರಂತರವಾಗಿ ವಿಕೆಟ್‌ ತೆಗೆಯುತ್ತಿರಬೇಕಾಗುತ್ತದೆ. ಯುವ ದಾಳಿಗಾರರಾದ ಪಠಾಣ್‌ ಮತ್ತು ಬಾಲಾಜಿ ಮೇಲೆ ಬೌಲಿಂಗ್‌ ಯಶಸ್ಸು ಅವಲಂಬಿತವಾಗಿದೆ ಎಂದು ಪ್ರಸನ್ನ ಹೇಳಿದರು.

ನಮ್ಮ ಬ್ಯಾಟಿಂಗ್‌ ದೃಢತೆಯ ಬಗ್ಗೆ ಎರಡು ಮಾತಿಲ್ಲ. ಅವರ ಚಾಣಾಕ್ಷ ಕೌಶಲತೆಗೆ ಪಾಕಿಸ್ಥಾನದ ದಾಂಡಿಗರು ಸಾಟಿಯಲ್ಲ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದಿಂದ ದಾಂಡಿಗರಿಗೆ ಇನ್ನಷ್ಟು ವಿಶ್ವಾಸ ಹೆಚ್ಚಿದೆ. ಪಾಕ್‌ ಸರಣಿ ಬಹಳ ಸ್ಪರ್ಧಾತ್ಮಕವಾಗಿರುತ್ತದೆ. ಆದರೆ ಕೇವಲ ಭಾರತದ ಬ್ಯಾಟಿಂಗ್‌ ಮತ್ತು ಪಾಕ್‌ ಬೌಲಿಂಗ್‌ ಮಧ್ಯದ ಸೆಣಸಾಟ ಎನ್ನುವಷ್ಟು ಸರಳವಾಗಿಲ್ಲ . ನಾನಿದನ್ನು ಸರಸಗಾಟಾಗಿ ತಳ್ಳಿಹಾಕುತ್ತೇನೆ. ಏಕೆಂದರೆ ವಸೀಮ್‌ ಆಕ್ರಮ್‌ ಮತ್ತು ವಕಾರ್‌ ಯೂನಸ್‌ ಇಲ್ಲದ ಪಾಕ್‌ ದಾಳಿಗೆ ಅಂತಹ ಪ್ರಖರತೆ ಇಲ್ಲ ಎಂದರು.

18 ವರ್ಷಗಳ ಹಿಂದೆ ಪಾಕಿಸ್ಥಾನ ಪ್ರವಾಸ ಕೈಗೊಂಡ ಭಾರತ ತಂಡ 0-2 ಅಂತರದಲ್ಲಿ ಸರಣಿ ಸೋತಿತ್ತು. ಬಿಷನ್‌ಸಿಂಗ್‌ ಬೇಡಿ ತಂಡದಲ್ಲಿನ ಅಂದಿನ ಅನುಭವವನ್ನು ನೆನಪಿಸಿಕೊಂಡ ಪ್ರಸನ್ನ- ಅಂತರರಾಷ್ಟ್ರೀಯ ರಾಯಭಾರತ್ವದ ಒತ್ತಡದಲ್ಲಿ ನಾವು ಸೋತೆವು. ನಮಗೆ ಅದು ಕ್ರಿಕೆಟ್‌ ಎಂಬ ಕಲ್ಪನೆ ಇಲ್ಲದಷ್ಟು ಬಾಹ್ಯ ಒತ್ತಡವಿತ್ತು. ಪಾಕ್‌ ಪ್ರವಾಸದ ಮುನ್ನ ನಮಗೆ ದ್ವಿಪಕ್ಷೀಯ ಸಂಬಂಧ ಅಭಿವೃದ್ಧಿಗೆ ಇದು ಎಷ್ಟೊಂದು ಪೂರಕ ಎಂದು ತಲೆಗೆ ತುರುಕಲಾಗಿತ್ತು ಎಂದು ಹಳೆ ನೆನಪಿನ ಪುಟಗಳನ್ನು ತಿರುವಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X