ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಮೈಕ್ರೋ ಪ್ರೊಸೆಸರ್‌ ನಿಯಂತ್ರಿತ ರೈಲು ಇಂಜಿನ್‌

By Staff
|
Google Oneindia Kannada News

ಭಾರತದಿಂದ ಮೈಕ್ರೋ ಪ್ರೊಸೆಸರ್‌ ನಿಯಂತ್ರಿತ ರೈಲು ಇಂಜಿನ್‌
ಅಮೇರಿಕಾದ ನಂತರ ಭಾರತದಿಂದ 4,000 ಅಶ್ವ ಶಕ್ತಿ ಸಾಮರ್ಥ್ಯ ಇಂಜಿನ್‌ ಅಭಿವೃದ್ಧಿ

ನವದೆಹಲಿ : 4,000 ಅಶ್ವ ಶಕ್ತಿ ಸಾಮರ್ಥ್ಯವುಳ್ಳ ಹೊಸ ತಲೆಮಾರಿನ ಮೈಕ್ರೊಪ್ರೊಸೆಸರ್‌ ನಿಯಂತ್ರಿತ ಡೀಸೆಲ್‌ ಚಾಲಿತ ರೈಲ್ವೆ ಇಂಜಿನ್‌ ಯಂತ್ರವನ್ನು ಭಾರತ ತಯಾರಿಸಿದೆ.

ಸುಮಾರು 58 ಬೋಗಿಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ. ಈ ಯಂತ್ರದ ಅಭಿವೃದ್ಧಿಯಿಂದಾಗಿ ಅಮೇರಿಕಾದ ನಂತರ ಇಂಥದೊಂದು ತಂತ್ರಜ್ಞಾನ ತಯಾರಿಸಿದ ಕೀರ್ತಿಗೆ ಭಾರತ ಭಾಜನವಾಗಿದೆ. ‘ಡೀಸೆಲ್‌ ಲೋಕೊಮೊಟಿವ್‌ ವರ್ಕ್ಸ್‌, ವಾರಣಾಸಿ’ ಈ ಯಂತ್ರವನ್ನು ತಯಾರು ಮಾಡಿದೆ. ಇದು ಭಾರತೀಯ ರೈಲ್ವೇ ವಿಭಾಗದಲ್ಲಿ 58 ಬೋಗಿ ಸರಕು ಸಾಗಾಟ ಸಾಮರ್ಥ್ಯದ ಏಕೈಕ ರೈಲ್ವೇ ಇಂಜಿನ್‌.

ಅಮೇರಿಕಾದ ‘ಜನರಲ್‌ ಮೊಟಾರ್ಸ್‌ ಫ್ಯಾಕ್ಟರಿ’ಯ ಹೊರತಾಗಿ ಬೇರ್ಯಾರೂ ಇಂಥಹ ತಂತ್ರಜ್ಞಾನವನ್ನು ಈವರೆಗೂ ಹೊಂದಿರಲಿಲ್ಲ. ಈ ಹಿಂದೆ 150 ಕಿ.ಮಿ. ವೇಗ ಸಾಮರ್ಥ್ಯದ ಪ್ರಯಾಣಿಕರ ರೈಲನ್ನು ಭಾರತೀಯ ರೈಲ್ವೆ ತಯಾರಿಸಿ, ಕೊಂಕಣ ರೈಲ್ವೇಯಲ್ಲಿ ಪರೀಕ್ಷಿಸಿ ಯಶಸ್ವಿಯಾಗಿತ್ತು. ಅಂತರ್‌ನಗರ ಸಂಚಾರಕ್ಕಾಗಿ ಕಡಿಮೆ ದೂರ ಪ್ರಯಾಣದ ರೈಲೊಂದನ್ನು ಸಹ ತಯಾರಿಸಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X