ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವಾಜಪೇಯಿ ಹೇಳುವುದು ಒಂದು ಮಾಡುವುದು ಇನ್ನೊಂದು...’

By Staff
|
Google Oneindia Kannada News

‘ವಾಜಪೇಯಿ ಹೇಳುವುದು ಒಂದು ಮಾಡುವುದು ಇನ್ನೊಂದು...’
ಪ್ರಧಾನಿ ಹೇಳೋದೆಲ್ಲ ಓಳು, ಬರೀ ಓಳು ಎಂದ ಕಾಂಗ್ರೆಸ್‌

ನವದೆಹಲಿ : ‘ರಾಜಕಾರಣದ ಅಪರಾಧೀಕರಣದ’ ಕುರಿತ ಪ್ರಧಾನಿ ವಾಜಪೇಯಿ ಅವರ ಹೇಳಿಕೆ, ಜನಮರುಳು ಮಾಡಲು ಅನುಸರಿಸುವ ಅವರ ‘ದ್ವಂದ್ವ ನೀತಿ’ಯ ಒಂದು ಭಾಗ ಎಂದು ಕಾಂಗ್ರೆಸ್‌ ಟೀಕಿಸಿದೆ.

ಲಕ್ನೋ ಚುನಾವಣಾ ಭಾಷಣದಲ್ಲಿ ಪ್ರಧಾನಿ ವಾಜಪೇಯಿ ರಾಜಕಾರಣದ ಅಪರಾಧೀಕರಣವನ್ನು ವಿರೋಧಿಸುವುದ್ನು ತಮ್ಮ ರಾಜಕೀಯ ಸಿದ್ಧಾಂತದ ಒಂದು ತತ್ವವೆಂದು ಬಣ್ಣಿಸಿದ್ದರು. ಈ ಹೇಳಿಕೆಗೆ ಕಾಂಗ್ರೆಸ್‌ ತೀವ್ರವಾಗಿ ಪ್ರತಿಕ್ರಿಯಿಸಿದ್ದು - ಗುಜರಾತಿನಲ್ಲಿ ರಾಜಧರ್ಮದ ಕುರಿತು ಮಾತನಾಡಿ ಕೋಮುಗಲಭೆ ನಡೆಸಿದ ಮೋದಿ ಸರಕಾರಕ್ಕೆ ಅಧಿಕಾರ ಮುಂದುವರಿಸಲು ವಾಜಪೇಯಿ ಹಸಿರು ನಿಶಾನೆ ತೋರಿಸಿದರು. ಅಭಿವೃದ್ಧಿಯ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ ಎಂದ ಮರುದಿನ ರಾಮಮಂದಿರದ ವಿಷಯ ಎತ್ತಿದರು . ಇವು ವಾಜಪೇಯಿ ಅವರ ದ್ವಂದ್ವನೀತಿಗೆ ಸಾಕ್ಷಿ ಎಂದು ಕಾಂಗ್ರೆಸ್‌ ವಕ್ತಾರ ಆನಂದ ಶರ್ಮ ಮಂಗಳವಾರ ಹೇಳಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ, ಈ ಮುನ್ನ ಆಡಳಿತ ನಡೆಸಿದ ಪಕ್ಷಗಳಿಗಿಂತ ಬಿಜೆಪಿ ವಿಭಿನ್ನವಾಗಿದೆ, ಪರಿಶುದ್ಧ ರೀತಿಯ ಬದಲಾವಣೆ ತರಲಿದೆ ಎಂದೆಲ್ಲಾ ವಾಜಪೇಯಿ ಬೂಸಿ ಬಿಟ್ಟಿದ್ದರು. ಈಗ ರಾಜಕೀಯದ ಅಪರಾಧೀಕರಣದ ಕುರಿತು ಲಕ್ನೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಅಪರಾಧದ ಹಿನ್ನಲೆಯ ಡಿ.ಪಿ.ಯಾದವ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆನಂದ ಶರ್ಮ ಕಟಕಿಯಾಡಿದರು.

ಈ ಮಧ್ಯೆ ಸಮಸ್ಯಾತ್ಮಕ ಡಿ.ಪಿ.ಯಾದವ್‌ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ. ಪ್ರಧಾನಿ ಮತ್ತು ಉಪಪ್ರಧಾನಿ ಜೊತೆ ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಯಾದವ್‌ ಕೆಲದಿನಗಳ ಹಿಂದೆಯಷ್ಟೆ ೕ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಡಿಪಿ ಯಾದವ್‌ ಮೇಲೆ ಕೊಲೆ , ಅಪಹರಣದಂತಹ ಆರೋಪಗಳಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X