ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಹರಿಕೋಟಾ ಇಸ್ರೋ ಕೇಂದ್ರದಲ್ಲಿ ಸ್ಫೋಟ ; ಆರು ಸಾವು

By Staff
|
Google Oneindia Kannada News

ಶ್ರೀಹರಿಕೋಟಾ ಇಸ್ರೋ ಕೇಂದ್ರದಲ್ಲಿ ಸ್ಫೋಟ ; ಆರು ಸಾವು
ಮೂವರು ಗಾಯಾಳುಗಳು ಚೆನ್ನೈನ ಅಪೋಲೊ ಆಸ್ಪತ್ರೆಗೆ

ಚೆನ್ನೈ: ಶ್ರೀಹರಿಕೋಟಾದ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಫೆಬ್ರವರಿ 23ರಂದು ಸಂಭವಿಸಿದ ಸ್ಫೋಟದಲ್ಲಿ ಇಸ್ರೋದ ಇಬ್ಬರು ಇಂಜಿನಿಯರುಗಳು ಮತ್ತು ಇಬ್ಬರು ದಿನಗೂಲಿ ನೌಕರರು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.

ದುರ್ಘಟನೆಯಲ್ಲಿ ಮೂವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಾದ ನಾರಾಯಣನ್‌, ಕೃಷ್ಣ ಪ್ರಸಾದ್‌ ಅವರ ಸ್ಥಿತಿ ಗಂಭೀರವಾಗಿದೆ.

ಕೇಂದ್ರದ ಆವರಣದಲ್ಲಿ ವಾಹನವೊಂದು ಘನ ಇಂಧನ ಸಾಗಿಸುತ್ತಿರುವಾಗ ಸಂಜೆ 4ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿತು. ಸ್ಫೋಟದಿಂದ ಕಟ್ಟಡಕ್ಕೆ ಹಾನಿಯುಂಟಾಗಿದ್ದು, ಮೇಲ್ಛಾವಣಿಯಲ್ಲಿ ಬೃಹತ್‌ ರಂಧ್ರ ಉಂಟಾಗಿದೆ. ಅದು ಪರೀಕ್ಷಾ ಇಂಧನವಾಗಿದ್ದು ಇಸ್ರೋ ಯೋಜನೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಈ ದುರತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಇಸ್ರೋ ಸಮಿತಿಯಾಂದನ್ನು ನೇಮಿಸಿದೆ. ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಶ್ರೀಹರಿಕೋಟಾದ ಈ ಘನ ಇಂಧನ ವರ್ಧಕ ಘಟಕ ಜಗತ್ತಿನ ಇಂಧನ ಘಟಕಗಳಲ್ಲಿಯೇ ದೊಡ್ಡದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X