ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಐಟಿ ಜಗತ್ತು : ಆತ್ಮಹತ್ಯೆ ಹೆಚ್ಚಳ, ಸೋಡಾಚೀಟಿ ಅಗ್ಗ

By Staff
|
Google Oneindia Kannada News

ಬೆಂಗಳೂರು ಐಟಿ ಜಗತ್ತು : ಆತ್ಮಹತ್ಯೆ ಹೆಚ್ಚಳ, ಸೋಡಾಚೀಟಿ ಅಗ್ಗ
ಹಣ ಗಳಿಕೆ ಹಾಗೂ ವೃತ್ತಿಯ ಒತ್ತಡದಲ್ಲಿ ಖಾಸಗಿ ಜೀವನದ ಬಳಲಿಕೆ

ಬೆಂಗಳೂರು: ಭಾರತದ ಸಿಲಿಕಾನ್‌ ಪ್ರಸ್ಥಭೂಮಿ ಬೆಂಗಳೂರು. ಇಲ್ಲಿರುವ 1.5 ಲಕ್ಷ ತಂತ್ರಾಂಶ ಕೋಡ್‌-ರೈಟರ್ಸ್‌ ತಮ್ಮ ಗುಣಮಟ್ಟದ ಕಾರ್ಯವೈಖರಿಯಿಂದ ಮಾಹಿತಿ ತಂತ್ರಜ್ಞಾನದ ಜಾಗತಿಕ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನಮಾನ ತಂದು ಕೊಟ್ಟವರು. ಆದರೆ ಅವರ ವೈಯಕ್ತಿಕ ಬದುಕು ಹೇಗಿದೆ ಗೊತ್ತಾ ?

ಮೇಲೆ ಥಳಕು ಒಳಗೆ ಹುಳುಕು ಅನ್ನುವ ಮಾತಿಗೆ ಅನ್ವಯವಾಗುವಂತಿದೆ ಐಟಿ ಜಗತ್ತಿನ ಮಂದಿಯ ಬದುಕು. ಸಾಫ್ಟ್‌ವೇರ್‌ ವೃತ್ತಿಪರರಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿದೆ ಹಾಗೂ ಮದುವೆಯಲ್ಲಿನ ಬಿರುಕುಗಳು ಹೆಚ್ಚಾಗುತ್ತಿವೆ ಎನ್ನುತ್ತಿದೆ ಇತ್ತೀಚಿನ ಒಂದು ಅಧ್ಯಯನ. ವೆಲ್ಲೂರಿನ ಕ್ರಿಶ್ಚಿಯನ್‌ ಕೌನ್ಸೆಲಿಂಗ್‌ ಸೆಂಟರ್‌ನ ನಿರ್ದೇಶಕ ಬಿ.ಜೆ.ಪ್ರಶಾಂತಂ ಈ ಸಮೀಕ್ಷೆ ನಡೆಸಿದ್ದಾರೆ.

ಪ್ರಶಾಂತಂ ಅವರ ಸಮೀಕ್ಷೆಯ ಪ್ರಕಾರ , ಬೆಂಗಳೂರಿನಲ್ಲಿ ಕಳೆದ ವರ್ಷ 2000 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಶೇ. 70 ಪ್ರಕರಣಗಳು ಸಾಫ್ಟ್‌ವೇರ್‌ ಇಂಜಿನಿಯರ್‌ ಹಾಗೂ ಕಾಲ್‌ಸೆಂಟರ್‌ ನೌಕರರಿಗೆ ಸಂಬಂಧಪಟ್ಟಿವೆ. ಆತ್ಮಹತ್ಯೆ ಮಾಡಿಕೊಂಡವರೆಲ್ಲರೂ 35 ವರ್ಷಕ್ಕಿಂತ ಕೆಳಗಿನವರು. ದಿಗಿಲು ಹುಟ್ಟಿಸುವ ಇನ್ನೊಂದು ಅಂಶವೆಂದರೆ, ಈ ಶೇ. 70 ಮಂದಿ ಸಾಯುವ ಮೊದಲು ಕನಿಷ್ಠ ಪಕ್ಷ 10 ಬಾರಿಯಾದರೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಇದಕ್ಕೆಲ್ಲಾ ಕಾರಣವಾದರೂ ಏನು ? ವೃತ್ತಿಪರರಿಗೆ ಸಾಧ್ಯವಾಗುವ ಅಸಾಮಾನ್ಯ ಹಣ ಗಳಿಕೆ ಮತ್ತು ದೊರೆಯುವ ವಿಫುಲ ಅವಕಾಶಗಳು ಅವರ ಖಾಸಗಿ ಜೀವನವನ್ನು ಮರೆಯುವಂತೆ ಮಾಡುತ್ತಿವೆಯೇ ? ಹೌದು ಎನ್ನುತ್ತಾರೆ ಕೆಲವು ವರ್ಷದಿಂದ ಅಮೇರಿಕಾದ ಮೈಕ್ರೋಸಾಫ್ಟ್‌ ನೌಕರರಿಗೆ ಕೌನ್ಸೆಲಿಂಗ್‌ ಮಾಡುತ್ತಿರುವ ಪ್ರಶಾಂತಂ .

ಇನ್ನು ವಿಚ್ಛೇದನದ ವಿಷಯ.

ಕಳೆದ ಮೂರು ತಿಂಗಳಲ್ಲಿ 100 ಮಂದಿ ಐಟಿ ಜಾಣರು ವಿಚ್ಛೇದನ ಪಡೆದಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ವಿಚ್ಛೇದನಗಳ ಸಂಖ್ಯೆ ಶೇ.20 ರಷ್ಟು ಹೆಚ್ಚಲಿದೆ ಎನ್ನುತ್ತಾರೆ ಪ್ರಶಾಂತಂ.

ಬೆಂಗಳೂರಲ್ಲಿ ಬದಲಾವಣೆ ಎಂಬುದು ಅತಿವೇಗದಲ್ಲಿದೆ. ಈ ವೇಗದ ಬದುಕಿನಲ್ಲಿ ಒತ್ತಡ ಸಾಮಾನ್ಯ. ಕೌಟುಂಬಿಕ ನೆಮ್ಮದಿ ಹಾಗೂ ಕಾರ್ಯ ನಿರತ ಪರಿಸರದಲ್ಲಿ ಸ್ನೇಹಪರ ವಾತಾವರಣ ಇಲ್ಲದಿದ್ದರೆ ವ್ಯಕ್ತಿ ಇನ್ನಷ್ಟು ಕುಸಿಯುತ್ತಾನೆ ಎಂದು ಪ್ರಶಾಂತಂ ಹೇಳುತ್ತಾರೆ.

ಬೆಂಗಳೂರನ್ನು ಸಿಂಗಾಪೂರ್‌ ಆಗಿಸುವವರು ಈ ಅಂಶಗಳನ್ನೂ ಗಮನಿಸಬೇಕು.

(ಇನ್ಫೋ ವಾರ್ತೆ)

Post your views

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X