• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ ಎಲ್ಲೆಡೆ ಇರುಳೆಲ್ಲ ಹರ ಹರಾ! ಶಿವರಾತ್ರಿಯ ಸಂಭ್ರಮ

By Staff
|

ದೇಶದ ಎಲ್ಲೆಡೆ ಇರುಳೆಲ್ಲ ಹರ ಹರಾ! ಶಿವರಾತ್ರಿಯ ಸಂಭ್ರಮ

ಶಿವ ಶಿವ ಎಂದರೆ, ಭಯವಿಲ್ಲ ಶಿವ ನಾಮಕೆ ಸಾಟಿ ಸಾಟಿಲ್ಲ....

ಬೆಂಗಳೂರು: ನಾಟ್ಯದಲ್ಲಿ ‘ನಟರಾಜ’, ಸಿಟ್ಟಿನಲ್ಲಿ ‘ರುದ್ರ’, ದಂಪತಿಗಳಿಗೆ ‘ಅರ್ಧನಾರೀಶ್ವರ’, ಬೆಂಕಿಯಂತೆ ‘ಭೈರವ’, ಜಂಗಮರಿಗೆ ‘ಲಿಂಗ ’ ಎಲ್ಲರಿಂದಲೂ ಆಚರಿಸಲ್ಪಡುವ ಶಂಕರ. ಎಲ್ಲೆಲ್ಲೂ ಅವನದೇ ಆಚರಣೆ. ಬುಧವಾರ ನಗರದೆಲ್ಲಡೆ ಮಹಾಶಿವರಾತ್ರಿಯ ಸಂಭ್ರಮ. ಶಿವಾಲಯದಲ್ಲಿ ಅರ್ಚನೆ , ನೈವೇದ್ಯ, ಪೂಜೆ, ಭಜನೆಯಿಂದ ಆರಾಧನೆ. ಜಾಗರಣೆ ನಿಮಿತ್ತ ಸಂಗೀತ ಕಛೇರಿ, ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳ ಸಂಭ್ರಮ. ಶಿವ ಮಾತ್ರವಲ್ಲದೇ ಪಾರ್ವತಿ, ನಾಗ ,ಗಣೇಶ ಎಲ್ಲರೂ ಶಿವರಾತ್ರಿಯ ಸಂಭ್ರಮದಲ್ಲಿ ಆರಾಧನೆಗೊಂಡರು.

ನಗರದೆಲ್ಲೆಡೆ ಸಂತೃಪ್ತನಾದ ಹರ...

om nam shivayaಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಹೂವಿನ ವಿಶೇಷ ಪೂಜೆ. ಬಸವನಗುಡಿಯ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ. ದರ್ಶನಕ್ಕೆ ಬೀದಿ ಬದಿಯಲ್ಲೂ ನೆರೆದಿದ್ದ ಸಾಲು.ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯದ ಬಳಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಲು ಜನ ಸಾಲು ಸಾಲು ಬಂದರು. ಹಾಲೆರೆದು ಹರನ ಆಕಾಂಕ್ಷೆಗಳನ್ನು ಈಡೇರಿಸುವಂತೆ ಬೇಡಿಕೊಂಡರು.

ಯಶವಂತಪುರದ ಗಾಯತ್ರಿ ದೇವಾಲಯದಲ್ಲಿ ಪಂಚಕೋಟಿ ಬಿಲ್ವಾರ್ಚನೆಯಿತ್ತು. ಹಾಗೂ ಸಂಗೀತ ಸಂಜೆ, ಭರತನಾಟ್ಯ, ಭಜನೆಯ ಮೂಲಕ ಭಕ್ತಾದಿಗಳು ಜಾಗರಣೆ ಮಾಡಿದರು.ಕೋರಮಂಗಲದಲ್ಲಿರುವ ಪ್ರಜಾಪಿತ ಈಶ್ವರೀಯ ಮಹಾವಿದ್ಯಾಲಯದಲ್ಲಿ ‘ಅಮರನಾಥ ಗುಹೆಗಳಲ್ಲಿ ಶಿವದರ್ಶನ’ ಎಂಬ ಆಧ್ಯಾತ್ಮಿಕ ಚಿಂತನಾ ಕಾರ್ಯಕ್ರಮ.

ಕೆ.ಆರ್‌. ಮಾರ್ಕೇಟ್‌ ಜಲಕಂಠೇಶ್ವರ ದೇಗುಲದಲ್ಲಿ ಶಿವನ ದರ್ಶನಕ್ಕಾಗಿ ಅಗಾಧ ಜನ ನೆರೆದಿದ್ದರು. ಮೊದಲೇ ತುಂಬಿ ತುಳುಕುವ ಮಾರ್ಕೇಟ್‌ನಲ್ಲಿ ಹರ ಬಂದರೂ ಹಾದು ಹೋಗಲು ಜಾಗವಿರಲಿಲ್ಲ. ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ ನಗೆ ಜಾಗರಣೆ ’ ಕಾರ್ಯಕ್ರಮ ಏರ್ಪಡಿಸಿದ್ದರು. ರುದ್ರಾವತಾರಿ ಸಾಕ್ಷಾತ್‌ ಶಿವನೇ ಧರೆಗಿಳಿದು ಬಂದಿದ್ದರೆ ಒಮ್ಮೆ ನಗುತಿದ್ದ.

ತ್ಯಾಗರಾಜ ನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಕಥಾಕ್ಷೇಪವನ್ನು ಏರ್ಪಡಿಸಿದ್ದರು. ಶಿವ ಭಕ್ತರು ಮದುವೆ ಸಂಭ್ರಮದ ಹಾಗೆ ನಿದ್ದೆಗೆಟ್ಟು ಕಾರ್ಯಕ್ರಮ ವೀಕ್ಷಿಸಿದರು.ಮಲ್ಲೇಶ್ವರದ ದಕ್ಷಿಣಮುಖ ನಂದಿತೀರ್ಥ ದೇಗುಲದಲ್ಲಿ ಸಾವಿರದ ಎಂಟು ಲೀಟರ್‌ ಹಾಲಿನ ಅಭಿಷೇಕ.ನಗರದೆಲ್ಲೆಡೆ ಆರಾಧನೆಗೊಂಡ, ಇವ ರುದ್ರಭೂಮಿ ವಾಸನಾದರೂ, ನಮ್ಮ ಜನಪದರ ಉಕ್ತಿಯಲ್ಲಿ ಸುರಸುಂದರಾಂಗ.

ಶಿವನು ಭಿಕ್ಷಕೆ ಬಂದ ನೋಡು ಬಾರೇ ತಂಗಿ

ಇವನಂತ ಚೆಲುವರಿಲ್ಲ ನೋಡು ಬಾರೆ......

ಭುವನವೆಲ್ಲ ಭಜಿಸುತಿಹೆ ಓ ಮಂಜುನಾಥ...

ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಸಾವಿರಾರು ಯಾತ್ರಾರ್ತಿಗಳು ಆಗಮಿಸಿ ಪೂಜೆ ಸಲ್ಲಿಸಿದರು. ಕುಕ್ಕೆಯ ಸುಬ್ರಹ್ಮಣ್ಯನಿಗೂ ವಿಶೇಷ ಪೂಜೆ ಜರಗಿತು.ಗೋಕರ್ಣ, ಮುರುಡೇಶ್ವರ ಮುಂತಾದ ಶಿವಾಲಯದಲ್ಲಿ ಹರನಾಮ ಉದ್ಗಾರಕ್ಕೆ ಲೆಕ್ಕವಿರಲಿಲ್ಲ. ಕಾಶೀ ಪುಣ್ಯಕ್ಷೇತ್ರದಲ್ಲಿ ಭಕ್ತಾದಿಗಳ ಅಭ್ಯಂಜನ ಮಾಡಿ ಶಿವ ಪೂಜೆಗೈದರು. ನೂಕುನುಗ್ಗಲು ಸಡಿಲಗೊಳಿಸಲು ಕೆಲವರನ್ನು ಬಂಧಿಸ ಬೇಕಾಯಿತು. ವಾರಣಾಸಿಯ ವಿಶ್ವನಾಥನಿಗೆ ಬೃಹತ್‌ ‘ಶಿವಭಾರತ್‌’ ಏರ್ಪಸಲಾಗಿತ್ತು. ಜ್ಞಾನವಾಪಿ ಮಸೀದಿಯ ಪಕ್ಕದ ಶೃಂಗಾರ ಗೌರಿ ದೇಗುಲಕ್ಕೆ ಪೂಜೆ ಸಲ್ಲಿಸಲು ತೆರಳಿದವರನ್ನೂ ಬಂಧಸಲಾಯಿತು. ಪುಟಪರ್ತಿಯಲ್ಲಿ ಸಾಯಿಬಾಬರಿಂದ ಲಿಂಗ ದರ್ಶನ . ಮಧ್ಯಪ್ರದೇಶದ ಓಂಕಾರೇಶ್ವರ, ಮಹೇಶ್ವರ ದೇವಳದಲ್ಲಿ ಭಕ್ತರ ಮಹಾಪೂರವೇ ಹರಿದಿತ್ತು. ನರ್ಮದಾ ನದಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚುಮಂದಿ ಮಿಂದರು.ಭೋಪಾಲ್‌ನ ಶಿವಧಮ್‌ದೇಗುಲದಲ್ಲಿ ನಾಗದೇವರಿಗೆ ವಿಶೇಷಪೂಜೆ ಜರುಗಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more