• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಹಾನ್ಸ್‌ ಸುವರ್ಣಮಹೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ

By Staff
|

ನಿಮ್ಹಾನ್ಸ್‌ ಸುವರ್ಣಮಹೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ
ಅಭಿವೃದ್ಧಿ ಯೋಜನೆ ಶ್ರಿಸಾಮಾನ್ಯ ಪರವಾಗಿರಬೇಕು: ಶೇಖಾವತ್‌

ಬೆಂಗಳೂರು: ‘ದೇಶದ ಅಭಿವೃದ್ಧಿ ಯೋಜನೆಗಳು ಬಡ ಹಾಗೂ ಸಾಮಾನ್ಯ ಮನುಷ್ಯ ಕೇಂದ್ರೀಕೃತವಾಗಿರ ಬೇಕು. ಅಸಹಾಯಕ, ಅಸಮಾನತಾ, ಅಲಕ್ಷ್ಯ, ಪೂರ್ವಾಗ್ರಹ ಭಾವವು ಹೋಗಲಾಡಿಸುವ ಕಠಿಣ ನಿರ್ಧಾರವನ್ನು ನಾವು ಕೈಗೊಳ್ಳಬೇಕು. ಭಾರತವಿಂದು ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆಯಿಡುತ್ತಿದೆ. 2020 ರಲ್ಲಿ ಸಂಪೂರ್ಣ ಅಭಿವೃದ್ಧಿಶೀಲ ರಾಷ್ಟ್ರವಾಗಲಿದೆ. ಆದರೆ ಅಭಿವೃದ್ಧಿ ಎಂಬುದು ಅಸಮಾನತೆ, ಬಡತನ, ರೋಗ, ಹಸಿವಿನಿಂದ ಕೂಡಿದ್ದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಗಾಂಧಿ ಮಾತಿನಂತೆ ಪ್ರಜಾಪ್ರಭುತ್ವ ಯಾವತ್ತೂ ಸಮಾನ್ಯ ಮನುಷ್ಯನ ಶ್ರೇಯೋಭಿವೃದ್ಧಿಗಾಗಿ ಇರಬೇಕು’ ಎಂದು ಉಪ ರಾಷ್ಟ್ರಪತಿ ಭೈರೋನ್‌ ಸಿಂಗ್‌ ಶೇಖಾವತ್‌ ಕರೆ ನೀಡಿದ್ದಾರೆ..

ಅವರು ಬೆಂಗಳೂರಿನಲ್ಲಿ ನಿನ್ನೆ (ಫೆ.17) ನಡೆದ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (NIMHANS)ಸುವರ್ಣಮಹೋತ್ಸವ ಆಚರಣೆಯ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತಿದ್ದರು.

‘ ನಮ್ಮಲ್ಲಿ ಅಸಹಾಯಕರ ಕುರಿತು ಸೂಕ್ಷ್ಮ ಸಂವೇದನೆ ಇರಬೇಕು. ನಮ್ಮಲ್ಲಿ ಮೌಲ್ಯಯುತ ಸಮಾಜದ ನಿರ್ಮಾಣ ಆಗಬೇಕಾಗಿದೆ. ತಾಂತ್ರಿಕತೆಯು ಮಾನವನ ಮಾನಸಿಕ ನೋವನ್ನು ನಿವಾರಿಸಬಹುದಾದರೆ ಅದು ಸಾಧನೆಯೇ ಸರಿ. ಆ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಐಟಿ, ಬಿಟಿ, ವೈದ್ಯಕೀಯ ತಂತ್ರಜ್ಞಾನ ಮುಂತಾದುವುಗಳ ಮೂಲಕ ಸಾಪ್ಟವೇರ್‌,ಹಾರ್ಡ್‌ವೇರ್‌ ತಂತ್ರಜ್ಞಾನದ ಬಳಕೆಯಾಂದಿಗೆ ಮಾನಸಿಕ ಅಸ್ವಸ್ಥ ಮಗುವಿನ ಮಿದುಳು ಕಾರ್ಯಮಾಡುವಂತೆ ಮಾಡಬಹುದಾದ ಸಮಯ ಶೀಘ್ರದಲ್ಲೇ ಬರಲಿ ಎಂದು ಆಶಿಸುತ್ತೇನೆ. ನಾವು ನಮ್ಮ ಸಂಸ್ಕೃತಿ, ಆಧ್ಯಾತ್ಮಿಕ ವಿಚಾರಧಾರೆಯನ್ನು ಅಳವಡಿಸಿಕೊಂಡು ಮಾನವೀಯ ಮೌಲ್ಯವನ್ನು ಬೆಳೆಸಬೇಕಾಗಿದೆ. ನಮ್ಮ ಧರ್ಮದ ಆಧ್ಯಾತ್ಮಿಕ ತತ್ವದಂತೆ ಸಹಬಾಳ್ವೆ, ಅಸಹಾಯಕರ ಬಗೆಗಿನ ಒಲವನ್ನು ಬೆಳಸಬೇಕು’ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಆರೋಗ್ಯ ಮತ್ತು ಸಮಾಜಕಲ್ಯಾಣ ಖಾತೆ ಸಚಿವೆ ಸುಶ್ಮಾಸ್ವರಾಜ್‌ ತಮ್ಮ ಭಾಷಣದಲ್ಲಿ,
‘ನಿಮ್ಹಾನ್ಸ್‌ ಹೇಳಿದ ಹಾಗೆ ‘ಭಾರತದಲ್ಲಿ ವಾರ್ಷಿಕ 10 ಕೋಟಿ ಮಂದಿ ಮಾನಸಿಕ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ’ ಎಂಬುದನ್ನು ಒಪ್ಪಿಕೊಂಡರು. ಇದಕ್ಕೆ ಮಣ್ಣಿನ ಸವಕಳಿ, ವಿಭಜನೆಗೊಳ್ಳುತ್ತಿರುವ ಅವಿಭಕ್ತ ಕುಟುಂಬ, ಕಛೇರಿಯ ಒತ್ತಡಗಳು, ಕೌಟುಂಬಿಕ ಮೌಲ್ಯದ ಕುಸಿತಗಳೆಲ್ಲ ಕಾರಣ’ ಎಂದು ನುಡಿದರು.

‘ಸರಕಾರ ಭಾರತೀಯ ಮನಶಾಸ್ತ್ರಜ್ಞರು ವಿದೇಶಕ್ಕೆ ಹೋಗುವುದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಲೋಚಿಸುತ್ತಿದೆ. ಕಳೆದ ವರ್ಷ ಈ ಬೆಳವಣಿಗೆಯನ್ನು ನಾನು ಗಮನಿಸಿದ್ದೇನೆ. ನಿಮ್ಯಾಹನ್ಸ್‌ನ ಬಹು ನಿರೀಕ್ಷಿತ ‘ಗಾಮಾ ನೈಫ್‌’ ಉಪಕರಣಕ್ಕಾಗಿ , ವಿಶ್ವವಿದ್ಯಾಲಯಕ್ಕೆ (NIMHANS Deemed University) 15 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವುದು’ ಎಂದು ಹೇಳಿದರು.

ಸಮಾರಂಭದಲ್ಲಿ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಎ.ಬಿ. ಮಾಲಕರೆಡ್ಡಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅನಂತಕುಮಾರ್‌, ನಿರ್ದೇಶಕ ಡಾ.ಡಿ.ನಾಗರಾಜ್‌ ಅವರು ಉಪಸ್ಥಿತರಿದ್ದರು.

(ಪಿಟಿಐ)


ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more