ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತಾ ಪರಿವಾರದ ಪರಿಸಮಾಪ್ತಿ ; ದೇವೇಗೌಡರ ಘೋಷಣೆ

By Staff
|
Google Oneindia Kannada News

ಜನತಾ ಪರಿವಾರದ ಪರಿಸಮಾಪ್ತಿ ; ದೇವೇಗೌಡರ ಘೋಷಣೆ
ಚುನಾವಣೆಗಳಲ್ಲಿ ಜಾತ್ಯತೀತ ಜನತಾದಳ ಒಂಟಿಯಾಗಿ ಸ್ಪರ್ಧೆ, ಮಾತುಕತೆ ಮುಗಿದ ಅಧ್ಯಾಯ

ಬೆಂಗಳೂರು : ಜನತಾ ಪರಿವಾರದ ವಿಲೀನ ಮುಗಿದ ಅಧ್ಯಾಯ ಎಂದು ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ನಾಯಕ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಜನತಾ ಪರಿವಾರದ ಇತರ ಪಕ್ಷಗಳೊಂದಿಗೆ ವಿಲೀನ ಅಥವಾ ಸ್ಥಾನ ಹೊಂದಾಣಿಕೆಗೆ ಇನ್ನು ಅವಕಾಶವೇ ಇಲ್ಲ . ಚುನಾವಣೆಗಳು ಸನ್ನಿಹಿತವಾಗಿದ್ದು , ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧದ ಯುದ್ಧ ಇಂದಿನಿದಲೇ ಆರಂಭವಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ರಣಕಹಳೆ ಮೊಳಗಿಸಿದರು.

ಹೊಂದಾಣಿಕೆಯ ಮಾತನಾಡುವುದನ್ನು ಕೈಬಿಟ್ಟು , ನೊಂದವರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುತ್ತೇವೆ. ಜಾತ್ಯತೀತ ಜನತಾದಳ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು , ಜನತೆಯ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬರಲಿದೆ. ಒಂದುವೇಳೆ ಮತದಾರರು ತಿರಸ್ಕರಿಸಿದರೂ ಚಿಂತೆಯಿಲ್ಲ . ಆದರೆ ಇತರರ ಕೈಗೊಂಬೆಯಾಗಲು ತಮ್ಮ ಪಕ್ಷ ಇಷ್ಟಪಡುವುದಿಲ್ಲ ಎಂದು ದೇವೇಗೌಡ ಹೇಳಿದರು.

ಪ್ರಗತಿಪರ ಜನತಾದಳದ ಕೆಲವು ನಾಯಕರು ಸೋನಿಯಾ ಹಾಗೂ ವಾಜಪೇಯಿ ಅವರ ಮನೆ ಬಾಗಿಲಲ್ಲಿ ನಿಂತಿದ್ದಾರೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಇದಕ್ಕಾಗಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ವಿಚಲಿತರಾಗಬೇಕಿಲ್ಲ . ನಂಬಿರುವ ತತ್ವ ಹಾಗೂ ಸಿದ್ಧಾಂತವನ್ನು ತಾವು ಯಾವತ್ತಿಗೂ ಬಿಡುವುದಿಲ್ಲ . ಜನತಾ ಪರಿವಾರ ಎನ್ನುವುದರ ಪರಿ ಸಮಾಪ್ತಿ ಆಗಿಹೋಗಿದೆ ಎಂದು ದೇವೇಗೌಡ ಹೇಳಿದರು.

ಫೆ.22ರಿಂದ ಜಾತ್ಯತೀತ ಜನತಾದಳದ ಮುಖಂಡರು ರಾಜ್ಯ ಪ್ರವಾಸ ಕೈಗೊಳ್ಳುವರು. ಮಾರ್ಚ್‌ ಮೊದಲ ವಾರದಲ್ಲಿ ಈ ಪ್ರವಾಸ ಕೊನೆಗೊಳ್ಳಲಿದ್ದು , ಆನಂತರ ಬೃಹತ್‌ ಪ್ರಮಾಣದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಲಿದೆ ಎಂದರು.

ಟೀವಿ ವಾಹಿನಿಗಳಲ್ಲಿ ಜಾಹಿರಾತು ನೀಡುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕ್ರಮಗಳನ್ನು ದೇವೇಗೌಡ ಟೀಕಿಸಿದರು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸೂಲಗಿತ್ತಿಯಂತೆ ಆಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ವ್ಯಂಗ್ಯವಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X