ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂದಿರನಿರ್ಮಾಣದಿಂದ ದೇಶಕ್ಕೆ, ಪಕ್ಷಗಳಿಗೆ ಹಿತ-ಪೇಜಾವರಶ್ರೀ

By Staff
|
Google Oneindia Kannada News

ಮಂದಿರನಿರ್ಮಾಣದಿಂದ ದೇಶಕ್ಕೆ, ಪಕ್ಷಗಳಿಗೆ ಹಿತ-ಪೇಜಾವರಶ್ರೀ
ಪ್ರಣಾಳಿಕೆಗಳಲ್ಲಿ ಮಂದಿರ ವಿಷಯ ಸೇರ್ಪಡೆ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಕರೆ

ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ವರ್ತಮಾನದ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುತ್ತಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಮುಂಬರುವ ಚುನಾವಣೆಗಳಲ್ಲಿ ರಾಮ ಮಂದಿರ ವಿಷಯವನ್ನು ತಂತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಸೇರಿಸಿಕೊಳ್ಳುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಗಣಾಚಾರ್ಯ ಸೇವಾ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡುತ್ತಿದ್ದ ವಿಶ್ವೇಶತೀರ್ಥ ಸ್ವಾಮೀಜಿ- ಶಾಂತಿಯುತ ರೀತಿಯಲ್ಲಿ ರಾಮಮಂದಿರ ನಿರ್ಮಾಣ ಪ್ರಯತ್ನಗಳು ನಡೆಯಬೇಕಾಗಿದೆ. ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಮಂದಿರ ವಿಷಯವನ್ನು ಪ್ರಸ್ತಾಪಿಸಬೇಕು ಎಂದರು.

ಹಿಂದೂಗಳ ಪಾಲಿಗೆ ರಾಮಜನ್ಮ ಭೂಮಿ ಪವಿತ್ರ ಸ್ಥಳವಾಗಿದೆ. ಅಗತ್ಯವಿದ್ದರೆ ಮಂದಿರಕ್ಕೆ ಸ್ವಲ್ಪ ದೂರದಲ್ಲಿ ಮಸೀದಿಯನ್ನೂ ನಿರ್ಮಿಸಬಹುದು. ಮಂದಿರ ನಿರ್ಮಿಸಲು ಭಾರತೀಯ ಜನತಾ ಪಕ್ಷ ಉತ್ಸುಕವಾಗಿದ್ದರೂ, ಅದರ ಅಂಗಪಕ್ಷಗಳು ಈ ಪ್ರಯತ್ನವನ್ನು ನಿಯಂತ್ರಿಸುತ್ತಿವೆ ಎಂದು ಸ್ವಾಮೀಜಿ ಹೇಳಿದರು.

ಮಂದಿರ ನಿರ್ಮಾಣ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳೊಂದಿಗೂ ಚರ್ಚಿಸುತ್ತೇವೆ. ಈ ವಿಷಯ ಪರಸ್ಪರರ ಹಿತಾಸಕ್ತಿಯನ್ನು ರಕ್ಷಿಸುವ ರೀತಿಯಲ್ಲಿ ಬಗೆಹರಿಯಬೇಕು ಎಂದರು.

ಮಂದಿರ ನಿರ್ಮಾಣ ದೇಶದ ಹಿತಾಸಕ್ತಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಅನುಕೂಲಕರ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಮಂದಿರ ನಿರ್ಮಾಣದ ಕುರಿತು ವಿಶ್ವ ಹಿಂದೂ ಪರಿಷತ್‌ನ ನಿಲುವೇನು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶ್ರೀಗಳು- ತಾವು ವಿಹೆಚ್‌ಪಿಯ ಸಲಹೆಗಾರರು ಮಾತ್ರ ಎಂದು ಸ್ಪಷ್ಟಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X