ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಮಸಣದ ಹೂವುಗಳ ಕಥೆ ; ರಾಜ್ಯದ ಹುಡುಗಿಯರ ವ್ಯಥೆ !

By Staff
|
Google Oneindia Kannada News

ಇದು ಮಸಣದ ಹೂವುಗಳ ಕಥೆ ; ರಾಜ್ಯದ ಹುಡುಗಿಯರ ವ್ಯಥೆ !
ಸುಮಾರು 25 ನೆಟ್‌ವರ್ಕ್‌ಗಳಿಂದ ಮಾಂಸದ ಅಡ್ಡೆಗಳಿಗೆ ರಾಜ್ಯದ ಹೆಂಗಸರ ಸರಬರಾಜು

  • ದಟ್ಸ್‌ಕನ್ನಡ ಬ್ಯೂರೊ
ರಾಜ್ಯದ 50 ಸಾವಿರಕ್ಕೂ ಹೆಚ್ಚು ಮಂದಿ ಮುಂಬಯಿಯ ಸೂಳೆಗೇರಿಯಲ್ಲಿ ಕೊಳೆಯುತ್ತಿದ್ದಾರೆ !

ಇದು ಮೈಸೂರಿನ ಒಡನಾಡಿ ಸಂಸ್ಥೆ ನಮ್ಮ ಮುಂದಿಡುವ ಬೆಚ್ಚಿಬೀಳಿಸುವ ಸತ್ಯ. ಮುಂಬಯಿ ಮಾತ್ರವಲ್ಲ - ಮೆಟ್ರೊಪಾಲಿಟಿನ್‌ ನಗರಗಳಾದ ದೆಹಲಿ, ಕೋಲ್ಕತ್ತಾ ಗಳ ಪಾಪಕೂಪಗಳಲ್ಲಿ ಕನ್ನಡದ ಹುಡುಗಿಯರ ಬದುಕು ಸವೆಯುತ್ತಿದೆ. ನೆರೆಯ ಗೋವಾದ ವೇಶ್ಯಾವಾಟಿಕೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯದ ಹೆಣ್ಣುಮಕ್ಕಳಿದ್ದಾರೆ.

ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತಿಗೆ ಕೂತ ಒಡನಾಡಿ ಸಂಸ್ಥೆಯ ಬಳಗ- ತಮ್ಮ ಅಧ್ಯಯನದ ಅಂಕಿಅಂಶಗಳನ್ನು ಮುಂದಿಟ್ಟಾಗ ಕ್ಷಣಕಾಣ ನಿಬ್ಬೆರಗು, ಮರುಕ್ಷಣ ಎದೆ ಹಿಂಡಿದಂತೆ ನೋವು. ಇದು ಕರ್ನಾಟಕದ ಹುಡುಗಿಯರ ವ್ಯಥೆ ಮಾತ್ರವಲ್ಲ ; ಎಲ್ಲ ರಾಜ್ಯಗಳ ಹುಡುಗಿಯರ ಕಥೆಯೂ ಹೌದು.

ಒಡನಾಡಿ ಸಂಸ್ಥೆಯ ಅಧ್ಯಯನದ ವರದಿಯ ಕೆಲವು ವಿಷಯಗಳು :

  • ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ಬಹುತೇಕ ಹುಡುಗಿಯರು ಅನಾಥರು. ಉಳಿದಂತೆ ಹಿಂದುಳಿದ ವರ್ಗಕ್ಕೆ ಸೇರಿದವರು. ಆರ್ಥಿಕವಾಗಿ ಹಿಂದುಳಿದವರು.
  • ವೇಶ್ಯಾವಾಟಿಕೆಗೆ ಹುಡುಗಿಯರನ್ನು ಸಾಗಿಸುವ ಬಹುದೊಡ್ಡ ಜಾಲವೇ ಕರ್ನಾಟಕದಲ್ಲಿದೆ. ಇಂಥ ಸುಮಾರು 25 ನೆಟ್‌ವರ್ಕ್‌ಗಳು ಮಾಂಸದ ಅಡ್ಡೆಗಳಿಗೆ ರಾಜ್ಯದ ಹೆಂಗಸರನ್ನು ಸರಬರಾಜು ಮಾಡುತ್ತಿವೆ. ಮೈಸೂರು ಜಿಲ್ಲೆಯಲ್ಲೇ ಮೂರು ಜಾಲಗಳಿವೆ.
  • ಕೆಲವು ಹುಡುಗಿಯರನ್ನು ಅಪಹರಿಸಲಾಗುತ್ತದೆ, ಕೆಲವರಿಗೆ ಆಮಿಷ ತೋರಿಸಲಾಗುತ್ತದೆ, ಕೆಲವರನ್ನು ಬಲಾತ್ಕಾರ ಮಾಡಲಾಗುತ್ತದೆ.
  • ಹುಡುಗಿಯರ ಸಾಗಣೆಯ ವಿಷಯ ಪೊಲೀಸರಿಗೆ ಗೊತ್ತಿಲ್ಲವೆಂದೇನಲ್ಲ . ಆದರೆ ರಾಜ್ಯದ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಈ ಕುರಿತು ಮೌನವಾಗಿದ್ದಾರೆ.
  • ರಾಜ್ಯದಲ್ಲಿನ ಪೊಲೀಸ್‌ ದಾಖಲೆಗಳ ಮೂಲಕ- ಪ್ರತಿವರ್ಷ 5400 ಹುಡುಗಿಯರ ಅಪಹರಣದ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತವೆ. ದಾಖಲಾಗದ ಪ್ರಕರಣಗಳ ಸಂಖ್ಯೆ ಇದಕ್ಕೂ ಹೆಚ್ಚು .
  • 15 ರಿಂದ 25 ಸಾವಿರ ರುಪಾಯಿಗಳಿಗೆ ಹುಡುಗಿಯರನ್ನು ಮಾರಾಟ ಮಾಡಲಾಗುತ್ತದೆ.
  • ಒಡನಾಡಿ ಸಂಸ್ಥೆ ಈವರೆಗೆ 480 ಹುಡುಗಿಯರನ್ನು ಪಾಪಕೂಪದಿಂದ ರಕ್ಷಿಸಿ ಪುನರ್ವಸತಿ ಕಲ್ಪಿಸಿದೆ.
ಈಗ ಹೇಳಿ ? ಈ ಪಾಪದ ಹೂವುಗಳನ್ನು ಕಾಪಾಡುವುದು ಹೇಗೆ ? ಯಾರು ?

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X