ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ: ನ್ಯಾಯ ದೊರಕುವವರೆಗೆ ನನಗೆ ವಿಶ್ರಾಂತಿಯಿಲ್ಲ -ಜಯಾ

By Staff
|
Google Oneindia Kannada News

ಕಾವೇರಿ: ನ್ಯಾಯ ದೊರಕುವವರೆಗೆ ನನಗೆ ವಿಶ್ರಾಂತಿಯಿಲ್ಲ -ಜಯಾ
ಕರ್ನಾಟಕದಿಂದ ಜಲಾನಯನ ಪ್ರದೇಶದ ವಿಸ್ತರಣೆ.... ತಮಿಳ್ನಾಡು ಸಚಿವರ ಆರೋಪ

ಚೆನ್ನೈ: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆಯಲ್ಲಿ ನ್ಯಾಯ ದೊರಕುವವರೆಗೆ ನನಗೆ ವಿಶ್ರಾಂತಿಯಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪುನರುಚ್ಚರಿಸಿದ್ದಾರೆ. ಅವರು ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ (ಫೆ.09) ಮಾತನಾಡುತ್ತಾ ಈ ವಿಷಯ ಹೇಳಿದರು.

ಇದೇ ಸಂದರ್ಭದಲ್ಲಿ , ಕಾವೇರಿ ನೀರು ಹಂಚಿಕೆಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಸರಕಾರದ ನಡುವೆ ದ್ವಿಪಕ್ಷೀಯ ಮಾತುಕತೆಗೆ ಅವಕಾಶವಿಲ್ಲ. ಏನಿದ್ದರೂ ಕಾವೇರಿ ಉಸ್ತುವಾರಿ ಸಮಿತಿಯ ಹಾಗೂ ಸುಪ್ರೀಮ್‌ ಕೋರ್ಟ್‌ ನಿರ್ಧಾರ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂದು ತಮಿಳುನಾಡು ವಿತ್ತ ಖಾತೆ ಸಚಿವ ಸಿ.ಪೊನ್ನಯ್ಯನ್‌ ತಮಿಳುನಾಡು ವಿಧಾನ ಸಭೆಗೆ ತಿಳಿಸಿದರು.

ಕರ್ನಾಟಕ ಸರಕಾರದೊಂದಿಗೆ ಈವರೆಗೆ ನಡೆದ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಕಾವೇರಿ ಉಸ್ತುವಾರಿ ಸಮಿತಿಯ ಹಾಗೂ ಸುಪ್ರೀಮ್‌ ಕೋರ್ಟ್‌ ನಿರ್ಧಾರ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬ ಕಠಿಣ ಮತ್ತು ಸ್ಪಷ್ಟ ನಿರ್ಧಾರಕ್ಕೆ ಬಂದಿದೆ ಎಂದು ಮಾಜಿ ನೀರಾವರಿ ಸಚಿವರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಅವರು , ಕರ್ನಾಟಕ ತನ್ನ ಜಲಾನಯನ ಪ್ರದೇಶಗಳಾದ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ ಮತ್ತು ಹಾರಂಗಿಯಲ್ಲಿ ತಡೆ ಣೆಕಟ್ಟು ನಿರ್ಮಿಸಿದೆ. ಆ ಮೂಲಕ 21 ಲಕ್ಷವಿದ್ದ ನೀರಾವರಿ ಭೂಮಿಯನ್ನು 26 ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಿಕೊಂಡು ಸ್ತುವಾರಿ ಸಮಿತಿಯ ನಿಯಮ ಉಲ್ಲಂಘಿಸುತ್ತಿದೆ ಎಂದು ಆಪಾದಿಸಿದರು.

(ಪಿಟಿಐ)

ಮುಖಪುಟ / ಕಾವೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X