ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ: ಏಡ್ಸ್‌ ಹುಟ್ಟಡಗಿಸಲು ಸುಷ್ಮಾರಿಂದ 15 ಕೋಟಿ ಯೋಜನೆ

By Staff
|
Google Oneindia Kannada News

ಬಳ್ಳಾರಿ: ಏಡ್ಸ್‌ ಹುಟ್ಟಡಗಿಸಲು ಸುಷ್ಮಾರಿಂದ 15 ಕೋಟಿ ಯೋಜನೆ
ಎಚ್‌ಐವಿ ಸೋಂಕು ವ್ಯಾಪಕವಾಗಿರುವ ದೇಶದ ಜಿಲ್ಲೆಗಳಲ್ಲಿ ಹುಬ್ಬಳ್ಳಿಯೂ ಒಂದು

ನವ ದೆಹಲಿ : ವರ ಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಮಾತ್ರ ಹುಬ್ಬಳ್ಳಿಯನ್ನು ನೆನಪಿಸಿಕೊಳ್ಳುತ್ತಿದ್ದ ಬಿಜೆಪಿ ನಾಯಕಿ ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಸುಷ್ಮಾ ಸ್ವರಾಜ್‌ ಈ ಬಾರಿ ಸಮಾಜ ಕಲ್ಯಾಣ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಯನ್ನು ನೆನಪಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಜಿಲ್ಲೆಯ ಅಂದಾಜು 30 ಸಾವಿರ ಎಚ್‌ಐವಿ ರೋಗಿಗಳು ಉತ್ತಮ ಜೀವನ ನಡೆಸುವಂತೆ ಮಾಡುವ ಹಾಗೂ ಏಡ್ಸ್‌ ವಿರೋಧಿ ಆಂದೋಲನ- ಸುಷ್ಮಾ ಅವರ 15 ಕೋಟಿ ರುಪಾಯಿ ವೆಚ್ಚದ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಲ್ಲಿ ಸೇರಿವೆ. 2004ರ ಮೇ 1ರಿಂದ ಈ ಕಾರ್ಯಕ್ರಮ ಜಾರಿಗೆ ಬರಲಿದೆ.

2007ನೇ ಇಸವಿಯ ನಂತರ ಎಚ್‌ಐವಿ / ಏಡ್ಸ್‌ ಸೋಂಕಿನ ಯಾವುದೇ ಹೊಸ ಪ್ರಕರಣ ಪತ್ತೆಯಾಗಬಾರದು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸುಷ್ಮಾ ಅವರ ಬಳ್ಳಾರಿ ಯೋಜನೆ ಹೊಂದಿದೆ. ಈ ಕಾರ್ಯಕ್ರಮ ಯಶಸ್ವಿಯಾದಲ್ಲಿ , ಇಡೀ ದೇಶಕ್ಕೆ ಯೋಜನೆಯನ್ನು ವಿಸ್ತರಿಸುವುದು ಸಚಿವೆ ಸುಷ್ಮಾ ಕನಸು.

ಇಡೀ ಆರೋಗ್ಯ ಇಲಾಖೆಯ ಕಾರ್ಯಯಂತ್ರವನ್ನು ಏಡ್ಸ್‌ ವಿರೋಧಿ ಸಮರಕ್ಕೆ ಬಳಸಲಾಗುತ್ತಿರುವ ಇಂಥದೊಂದು ಯೋಜನೆ ದೇಶದಲ್ಲಿಯೇ ಮೊಟ್ಟಮೊದಲಿನದು ಎಂದು ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯ (ಘಅಇಣ) ಯೋಜನಾ ನಿರ್ದೇಶಕಿ ಮೀನಾಕ್ಷಿ ದತ್ತ ಘೋಷ್‌ ಹೇಳುತ್ತಾರೆ.

ಸೋಂಕು ವ್ಯಾಪಕವಾಗಿರುವ ಪ್ರದೇಶ-ಜನತೆಯನ್ನು ಗುರ್ತಿಸುವುದು, ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುವುದು, ಹಳ್ಳಿಹಳ್ಳಿಗಳಲ್ಲೂ ಕಾಂಡೋಂಗಳ ವಿತರಣೆ, ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳು, ರಸ್ತೆ-ಹೋಟೆಲು-ಹೆದ್ದಾರಿ- ಇತ್ಯಾದಿ ಕಡೆಗಳಲ್ಲಿನ ವ್ಯಭಿಚಾರಕ್ಕೆ ನಿಯಂತ್ರಣ ಹೇರುವುದು, ಲೈಂಗಿಕ ಕಾರ್ಯಕರ್ತರ ಮನಃ ಪರಿವರ್ತನೆ- ಇತ್ಯಾದಿ ಕಾರ್ಯಕ್ರಮಗಳನ್ನು ಏಡ್ಸ್‌ ನಿಯಂತ್ರಣ ಯೋಜನೆ ಹೊಂದಿದೆ.

ಎಚ್‌ಐವಿ ಸೋಂಕು ವ್ಯಾಪಕವಾಗಿರುವ ದೇಶದ ಜಿಲ್ಲೆಗಳಲ್ಲಿ ಹುಬ್ಬಳ್ಳಿಯೂ ಒಂದಾಗಿದೆ. ಇಲ್ಲಿನ ಜನರಲ್ಲಿ ಶೇ.3ರಷ್ಟು ಮಂದಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಇಡೀ ರುವ ಆತಂಕವಿದೆ. ದೇಶದಲ್ಲಿ ಈ ಪ್ರಮಾಣ ಸರಾಸರಿ ಶೇ.0.8 ಮಾತ್ರ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X