ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ ನಿರಾಶಾದಾಯಕ, ದಿಕ್ಕು ದೆಸೆ ರಹಿತ - ಬಿಜೆಪಿ ತೀವ್ರ ದಾಳಿ

By Staff
|
Google Oneindia Kannada News

ಬಜೆಟ್‌ ನಿರಾಶಾದಾಯಕ, ದಿಕ್ಕು ದೆಸೆ ರಹಿತ - ಬಿಜೆಪಿ ತೀವ್ರ ದಾಳಿ
ಚುನಾವಣಾ ಆಯುಕ್ತರ ಕರೆಯ ಮೇರೆಗೆ ಕೃಷ್ಣ ದೆಹಲಿಗೆ

ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಮಂಡಿಸಿರುವ 2004-05ನೇ ಸಾಲಿನ ಬಜೆಟ್‌ ತೀರಾ ನಿರಾಶಾದಾಯಕ ಹಾಗೂ ದಿಕ್ಕುದೆಸೆಗಳಿಲ್ಲದ ಬಜೆಟ್‌ ಎಂದು ರಾಜ್ಯ ವಿಧಾನಸಭೆಯಲ್ಲಿನ ಬಿಟೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ಬಣ್ಣಿಸಿದ್ದಾರೆ.

ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಬಜೆಟ್‌ ಗಮನವನ್ನೇ ಹರಿಸಿಲ್ಲ . ಜನವರಿಯಲ್ಲೇ ಹೊಸ ಲೆವಿಗಳನ್ನು ಹೇರಿರುವ ರಾಜ್ಯ ಸರ್ಕಾರ, ಚುನಾವಣೆಯ ಹಿನ್ನೆಲೆಯಲ್ಲಿ ತೆರಿಗೆ ರಹಿತ ಬಜೆಟ್‌ ಎಂದು ನಾಟಕವಾಡುತ್ತಿರುವುದಾಗಿ ಜಗದೀಶ ಶೆಟ್ಟರ್‌ ಟೀಕಿಸಿದರು. ಅವರು ಸೋಮವಾರ, ವಿಧಾನಸಭೆಯಲ್ಲಿ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಲೋಕಸಭೆ ಚುನಾವಣೆಗಳೊಂದಿಗೆ ರಾಜ್ಯವಿಧಾನಸಭೆ ಚುನಾವಣೆಗಳು ನಡೆಯುವ ಕುರಿತು ರಾಜ್ಯ ಸರ್ಕಾರ ರಹಸ್ಯ ಪಾಲನೆ ಮಾಡುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದ ಶೆಟ್ಟರ್‌- ಚುನಾವಣೆಗಳ ಕುರಿತಂತೆ ಸರ್ಕಾರ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದೆ, ವೃಥಾ ಗೊಂದಲಗಳನ್ನು ಸೃಷ್ಟಿಸುತ್ತಿದೆ ಎಂದು ಆಪಾದಿಸಿದರು.

ಬಜೆಟ್‌ ಮೇಲಿನ ಚರ್ಚೆ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣ ಸದನದಲ್ಲಿ ಹಾಜರಿಲ್ಲದೆ ಇರುವುದನ್ನು ಶೆಟ್ಟರ್‌ ಆಕ್ಷೇಪಿಸಿದರು. ಶೆಟ್ಟರ್‌ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ- ನೂತನ ಚುನಾವಣಾ ಮುಖ್ಯಆಯುಕ್ತ ಟಿ.ಎಸ್‌.ಕೃಷ್ಣಮೂರ್ತಿ ಅವರ ಕರೆಯ ಮೇರೆಗೆ ಕೃಷ್ಣ ದೆಹಲಿಗೆ ತೆರಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಚುನಾವಣೆ ನಡೆಸುವ ಕುರಿತು ಸರ್ಕಾರದಲ್ಲಿ ಗೊಂದಲವಿಲ್ಲ ಎಂದೂ ಖರ್ಗೆ ಸ್ಪಷ್ಟಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X