ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ತವರು ಕೊಡಗಲ್ಲಿ ಕುಡಿಯುವ ನೀರಿನ ಕೊರತೆಯ ಆತಂಕ

By Staff
|
Google Oneindia Kannada News

ಕಾವೇರಿ ತವರು ಕೊಡಗಲ್ಲಿ ಕುಡಿಯುವ ನೀರಿನ ಕೊರತೆಯ ಆತಂಕ
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಮಸ್ಯೆಗಳ ಪೂರ, ಜಿಲ್ಲಾಧಿಕಾರಿಗಳಿಂದ ಸಾಂತ್ವನ

ಮಡಿಕೇರಿ : ಕರ್ನಾಟಕದ ಜೀವನದಿ ಕಾವೇರಿಯ ತವರು ಕೊಡಗು ಜಿಲ್ಲೆಯಲ್ಲಿಯೇ ಕುಡಿಯುವ ನೀರಿಗೆ ಸಂಚಕಾರ ಉಂಟಾಗುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.

ಮುಂಬರುವ ಬೇಸಗೆಯ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಆತಂಕ ಜಿಲ್ಲೆಯ ಬಹುತೇಕ ಭಾಗಗಳಲ್ಲಿನ ಜನರಲ್ಲಿ ಕಂಡುಬರುತ್ತಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಶ್ರೀಕಾಂತ್‌ ವಲಗಡ್‌ ಅವರು ನಡೆಸಿದ ಸಭೆಯಲ್ಲಿ ನೀರಿನ ಕ್ಷಾಮದ ಸಮಸ್ಯೆಯು ಚರ್ಚೆಗೆ ಬಂದಿದ್ದು , ಸಮಸ್ಯೆಯ ತೀವ್ರತೆಯ ಕುರಿತು ಗಂಭೀರ ಚಿಂತನೆ ನಡೆಯಿತು.

ಕುಡಿಯುವ ನೀರಿನ ಕೊರಧಿತೆ ಎದುರಿಸಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಜಿಲ್ಲಾಧಿಕಾರಿ ಶ್ರೀಕಾಂತ್‌ ಸಾರ್ವಜನಿಕರೊಡನೆ ಚರ್ಚಿಸಿದ್ದಾರೆ. ಸಿದ್ದಾಪುರ, ಮಕ್ಕಂದುರ್‌, ಮುಕ್ಕೊಡ್ಲು, ದುಬಾರೆ, ಬಲ್ಲಮಾವತಿ, ಹೊಡವಾಡ, ಬೆಲ್ಲೂರ್‌, ಹುಡಿಕೇರಿ ಮತ್ತು ಇತರ ಅನೇಕ ಪ್ರದೇಶಗಳ ಜನರು ತಮ್ಮ ಅಳಲನ್ನು ಜಿಲ್ಲಾಧಿಕಾರಿಯವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ ತೋಡಿಕೊಂಡಿದ್ದಾರೆ.

ಇರುವ 18 ತೆರೆದ ಬಾವಿಗಳಲ್ಲಿ (11 ಬಾವಿಗಳನ್ನು ಪಂಚಾಯತಿಯೇ ಜನಬಳಕೆಗೆಂದು ತೋಡಿಸಿದೆ) ಎಲ್ಲವೂ ಬತ್ತಿವೆ ಎಂದು ಸಿದ್ದಾಪುರ ಗ್ರಾಮ ಪಂಚಾಯತಿಯ ಪ್ರತಿನಿಧಿ ಆತಂಕ ವ್ಯಕ್ತಪಡಿಸಿದರು. ಜನತೆಯ ಅಳಲನ್ನು ಆಲಿಸಿದ ಜಿಲ್ಲಾಧಿಕಾರಿ ನೀರಿನ ಕೊರತೆಯನ್ನು ನೀಗಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಒತ್ತು ಕೊಡುವುದು ಎಂದರು.

ಹಳ್ಳಿಗಳ ಲ್ಲಿ ವಿದ್ಯುತ್‌ ಪೂರೈಕೆ ಕೂಡ ಅನಿಶ್ಚಿತವಾಗಿದೆ. ಮಂಗಳೂರು ವಿದ್ಯುತ್‌ ಸರಬರಾಜು ನಿಗಮಕ್ಕೆ ರಾತ್ರಿ ಕರೆ ಮಾಡಿದರೂ ಪ್ರಕ್ರಿಯಿಸುವರೇ ಗತಿಯಿಲ್ಲವಾಗಿದೆ ಎನ್ನುವ ಜನತೆಯ ದೂರಿಗೆ ತಕ್ಷಣ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ- ಅಭಿಯಂತರರಾದ ನಂಜಯ್ಯನವರಿಗೆ ಸಮಸ್ಯೆಯ ಪರಿಶೀಲನೆ ಮಾಡುವಂತೆ ಸೂಚಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X