ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗಿ ಇಂಜಿನಿಯರ್‌ಗಳ ಹೆಚ್ಚಳ ; ಸೀಟು ಕಡಿತಕ್ಕೆ ಶಿಫಾರಸ್ಸು

By Staff
|
Google Oneindia Kannada News

ನಿರುದ್ಯೋಗಿ ಇಂಜಿನಿಯರ್‌ಗಳ ಹೆಚ್ಚಳ ; ಸೀಟು ಕಡಿತಕ್ಕೆ ಶಿಫಾರಸ್ಸು
ವಿದ್ಯಾವಂತ ನಿರುದ್ಯೋಗಿಗಳ ಪ್ರೊ.ಯು.ಆರ್‌.ರಾವ್‌ ನೇತೃತ್ವದ ತಾಂತ್ರಿಕ ಶಿಕ್ಷಣ ಸಮಿತಿ ಆತಂಕ

ಬೆಂಗಳೂರು : ದೇಶದಲ್ಲಿ ನಿರುದ್ಯೋಗಿ ಇಂಜಿನಿಯರ್‌ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ- ಇಂಜಿನಿಯರಿಂಗ್‌ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಬೇಕೆಂದು ಪ್ರೊ.ಯು.ಆರ್‌.ರಾವ್‌ ನೇತೃತ್ವದ ತಾಂತ್ರಿಕ ಶಿಕ್ಷಣ ಸಮಿತಿ ಶಿಫಾರಸ್ಸು ಮಾಡಿದೆ.

ಪ್ರಸ್ತುತ ಲಭ್ಯವಿರುವ 3.5 ಲಕ್ಷ ಇಂಜಿನಿಯರಿಂಗ್‌ ಸೀಟುಗಳಲ್ಲಿ 50 ಸಾವಿರ ಸೀಟುಗಳನ್ನು ರದ್ದು ಮಾಡುವುದು ಅನಿವಾರ್ಯ. ಇಂಜಿನಿಯರಿಂಗ್‌ ಸಂಸ್ಥೆಗಳಿಂದ ಪ್ರತಿವರ್ಷ 3.5 ಲಕ್ಷ ಮಂದಿ ಇಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಇವರಲ್ಲಿ ಪ್ರತಿಶತ 20ಕ್ಕೂ ಹೆಚ್ಚು ಮಂದಿ ಪ್ರತ್ಯಕ್ಷ ನಿರುದ್ಯೋಗ ಎದುರಿಸುತ್ತಿದ್ದಾರೆ ಎಂದು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಸಮಿತಿಯ ಮಾಜಿ ಅಧ್ಯಕ್ಷ ಪ್ರೊ.ಯು.ಆರ್‌.ರಾವ್‌ ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಗತಿಯ ದರ ಕುಂಠಿತವಾಗುತ್ತಿದೆ. ಹೆಚ್ಚು ವಿದ್ಯಾವಂತ ನಿರುದ್ಯೋಗಿಗಳನ್ನು ಸೃಷ್ಟಿಸುವುದು ಅತ್ಯಂತ ಅಪಾಯಕರ ಎಂದು ರಾವ್‌ ಅಭಿಪ್ರಾಯಪಟ್ಟರು. ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುವ ಕೆಲವು ಮುಖ್ಯ ವಿಷಯಗಳನ್ನು ಅವರು ವಿವರಿಸಿದರು. ಅವುಗಳೆಂದರೆ :

  • ಇಂಜಿನಿಯರಿಂಗ್‌ ಕಾಲೇಜುಗಳ ಶುಲ್ಕವನ್ನು ಮೂರನೇ ಒಂದರಷ್ಟು ಕಡಿಮೆ ಮಾಡುವುದು.
  • ಶುಲ್ಕದ ಮೇಲೆ ಶೇ.30ಕ್ಕಿಂತ ಹೆಚ್ಚು ಹಣವನ್ನು ಸಂಸ್ಥೆಗಳು ವಿದ್ಯಾರ್ಥಿಗಳ ಮೇಲೆ ವಿಧಿಸುವಂತಿಲ್ಲ .
  • ದೇಶದಲ್ಲಿ ಒಟ್ಟು 924 ಖಾಸಗಿ ಸಂಸ್ಥೆಗಳು ಹಾಗೂ 1200 ಇಂಜಿನಿಯರಿಂಗ್‌ ಕಾಲೇಜುಗಳು ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಶೇ.75 ಸಂಸ್ಥೆಗಳು ಸ್ವಯಂ ಆರ್ಥಿಕ ವ್ಯವಸ್ಥೆಯನ್ನು ಹೊಂದಿವೆ. ಆದರೆ ಬಹಳಷ್ಟು ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಸಿಬ್ಬಂದಿ ಇಲ್ಲ . ಮೂಲಭೂತ ಸೌಕರ್ಯಗಳೂ ಉತ್ತಮವಾಗಿಲ್ಲ . ಪ್ರಾಥಮಿಕ ಸವಲತ್ತುಗಳನ್ನು ಒದಗಿಸುವುದು ಅನಿವಾರ್ಯವಾಗಿದೆ.
ಯು.ಆರ್‌.ರಾವ್‌ ಅಧ್ಯಕ್ಷತೆಯ ತಾಂತ್ರಿಕ ಶಿಕ್ಷಣ ಸಮಿತಿಯಲ್ಲಿ - ಐಐಟಿಯ ಮಾಜಿ ನಿರ್ದೇಶಕ ಪಿ.ವಿ.ಇಂದಿರಾಸೇನ್‌, ಮಾನವ ಸಂಪನ್ಮೂಲ ಸಚಿವಾಲಯದ ಮಾಜಿ ವಿಶೇಷ ಕಾರ್ಯದರ್ಶಿ ಅಶೋಕ್‌ ಚಂದ್ರ, ಗ್ರಾಮೀಣ ಅಭಿವೃದ್ಧಿಯ ನಿವೃತ್ತ ಕಾರ್ಯದರ್ಶಿ ಕಿರಣ್‌ ಅಗರವಾಲ್‌ ಇದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X