ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಜೆಟ್‌ ಕೂಡಾ ಜನಪರವಾಗಿಲ್ಲ ಅಂದ್ರೆ, ಇನ್ನೇನ್‌ ಹೇಳನಾ ಸ್ವಾಮಿ

By Staff
|
Google Oneindia Kannada News

ಈ ಬಜೆಟ್‌ ಕೂಡಾ ಜನಪರವಾಗಿಲ್ಲ ಅಂದ್ರೆ, ಇನ್ನೇನ್‌ ಹೇಳನಾ ಸ್ವಾಮಿ
ಕರ್ನಾಟಕ ಬಜೆಟ್‌-2004 : ಪ್ರತಿಪಕ್ಷ ನಾಯಕರ ಪ್ರತಿಕ್ರಿಯೆಗಳು

ಬೆಂಗಳೂರು: ಚುನಾವಣೆಯ ಕಾವಿನಲ್ಲಿ ಮೊಟ್ಟೆಯಾಡೆದ ಬಜೆಟ್‌ ಕೂಡಾ ಜನಪರವಾಗಿಲ್ಲ ಎಂಬುದು ವಿರೋಧ ಪಕ್ಷಗಳ ಅಭಿಪ್ರಾಯ. ಇಲ್ಲಿ ನಿಷೇಧಿಸದ ಆನ್‌ ಲೈನ್‌ ಲಾಟರಿ, ಬಿಟ್ಟು ಬಿಟ್ಟ ಕಬ್ಬು ಬೆಳೆಗಾರರ ಸಮಸ್ಯೆ, ನಿರ್ಲಕ್ಷ್ಯಗೊಂಡ ಹೈಕೋರ್ಟ್‌ ಪೀಠ, ಐಟಿ ಬಿಟಿಯ ದಿವ್ಯ ನಿರ್ಲಕ್ಷ್ಯ, ಮರೆತೇ ಹೋದ ರಾಜ್ಯ ನೌಕರರ ತುಟ್ಟಿ ಭತ್ತೆ, ಸರಾಯಿ ತಯಾರಿಕೆಗೆ ದೊರೆತ ಮುಕ್ತ ಅನುಮತಿ, ಕುರಿತು ಕಿಡಿಕಾರಿದವರು ರಾಜ್ಯದ ವಿವಿಧ ವಿರೋಧ ಪಕ್ಷಗಳ ನಾಯಕರು. ನಾವು ಬಜೆಟ್‌ ಬಗ್ಗೆ ಪ್ರತಿಪಕ್ಷಗಳು ಹೊಗಳಿದ್ದನ್ನು ಹಿಂದೆಂದೂ ಕಂಡಿಲ್ಲ -ಕೇಳಿಲ್ಲ ,ಇಂದೂ ಇಲ್ಲ.

‘ಕೃಷ್ಣ ಸರಕಾರದ ಆ ಬಜೆಟ್‌ ದೂರದೃಷ್ಟಿತ್ವ ಇಲ್ಲದ ,ನಿರಾಶೆ ತಂದ ಮತ್ತು ಚುನಾವಣಾ ಪ್ರಣಾಳಿಕೆಗಾಗಿ ತಯಾರಿಸಿದಂತಿದೆ ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ದೂಷಿಸಿದ್ದಾರೆ.

‘ಕೇವಲ ಪ್ರಚಾರದ ದೃಷ್ಟಿಯಲ್ಲಿ ಮಂಡಿಸಿದ ಬಜೆಟ್‌. ಇಲ್ಲಿ ರಾಜ್ಯ ಎದುರಿಸು ತ್ತಿರುವ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದ’ ಎಂದು ರಾಜ್ಯ ಪ್ರಗತಿಪರ ಜನತಾ ದಳದ ಶಾಸಕಾಂಗ ನಾಯಕ ಬಿ. ಸೊಮಶೇಖರ್‌ ಟೀಕಿಸಿದ್ದಾರೆ.

‘ಕೇವಲ ಚುನಾವಣಾ ದೃಷ್ಟಿಯ ಬಜೆಟ್‌ನಿಂದಾಗಿ ಭ್ರಮನಿರಸವಾಗಿದೆ . ಹೊಸ ರೀತಿಯ ಕಾರ್ಯಕ್ರಮಗಳ ಪ್ರಸ್ತಾವನೆಯಿಲ್ಲ .ಬಜೆಟ್‌ನಲ್ಲಿ ಭಾಷೆ ಅಬ್ಬರಿಸಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರಷ್ಟೇ’ ಎಂದು ಪ್ರಕ್ರಯಿಸಿದವರು ಜಾತ್ಯಾತೀತ ಜನತಾ ದಳದ ಮುಖಂಡ ಪಿ.ಜಿ.ಆರ್‌ ಸಿಂಧ್ಯಾ.

‘ಬಡ ರೈತ ವಿರೋಧಿ ಬಜೆಟ್‌ ಇದಾಗಿದೆ. ಕೃಷ್ಣ ಅಂಕಿಅಂಶಗಳೊಡನೆ ಆಟವಾಡಿದಾರಷ್ಟೇ’ ಎಂದು ಜಾತ್ಯಾತೀತ ಜನತಾ ದಳದ ಮುಖಂಡ ಬ.ಎನ್‌. ಬಚ್ಚೇಗೌಡ ಟೀಕಿಸಿದ್ದಾರೆ.

‘ವಿತ್ತೀಯ ಕೊರತೆಯನ್ನು ಕೇವಲ ಶೂನ್ಯಕ್ಕೆ ತರುವುದಾಗಿ ಹೇಳಿದ ಅವರ ಬಜೆಟ್‌ ಶೂನ್ಯ ದೂರದೃಷ್ಟಿ ಹೊಂದಿದೆ’. ಎಂದು ರಾಜ್ಯ ಪ್ರಗತಿಪರ ಜನತಾ ದಳದ ಮುಖಂಡ ಎಂ.ಸಿ.ನಾಣಯ್ಯ ತೀವ್ರವಾಗಿ ದೂರಿದ್ದಾರೆ.

ಅಖಿಲಭಾರತ ಕಮ್ಯುನಿಷ್ಟ್‌ ಪಕ್ಷವು ‘ಈ ಆಯವ್ಯಯವು ಒಂದು ಪದಪುಂಜಗಳ ಡೊಂಬರಾಟ. ಜನಪ್ರೀಯತೆಯ ಬ್ನೆನುಹತ್ತಿ ಕೃಷಿ ಕೈಗಾರಿಕೆಯ ಸ್ವಯಂ ಅಭಿವೃದ್ದಿಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ ’ ಎಂದು ಜರೆದಿದೆ.

ಜಾತ್ಯಾತೀತ ಜನತಾ ದಳದ ಮುಖಂಡ ಎಂ.ಪಿ.ಪ್ರಕಾಶ್‌ ‘ಚುನಾವಣ ವರ್ಷ ಎಂಬ ಕಾರಣಕ್ಕೆ ಯಾರದೋ ಮೇಲೆ ಗೂಬೆ ಕೂರಿಸಿ ಬಜೆಟ್‌ನ್ನು ಬಳಸಿಕೊಂಡಿರುವುದು ಸತ್ಸಂಪ್ರದಾಯವಲ್ಲ ’ಎಂದು ಹೇಳಿದರು.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X