ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಿಡಿ’ಯಲ್ಲಿ ಕಾಳಿಂಗರಾವ್‌ ಗೀತಗುಚ್ಛ !

By Staff
|
Google Oneindia Kannada News

‘ಸಿಡಿ’ಯಲ್ಲಿ ಕಾಳಿಂಗರಾವ್‌ ಗೀತಗುಚ್ಛ !
ಆಕಾಶವಾಣಿಯಿಂದ ಸುಗಮ ಸಂಗೀತ ಹೀರೋಗಳ ಗೀತೆಗಳಿಗೆ ‘ಸಿಡಿ’ ರೂಪ

ಬೆಂಗಳೂರು : ಸುಗಮ ಸಂಗೀತದ ಸ್ವರ್ಣ ಅಧ್ಯಾಯಗಳನ್ನು ಮತ್ತೆ ಜೀವಂತಗೊಳಿಸುವ ಅಪರೂಪದ ಪ್ರಯತ್ನದಲ್ಲಿ ಆಕಾಶವಾಣಿ ತೊಡಗಿದೆ.

ಕನ್ನಡ ಸುಗಮ ಸಂಗೀತ ಕ್ಷೇತ್ರದ ಸಾರ್ವಕಾಲಿಕ ಹೀರೋಗಳಾದ ಪಿ.ಕಾಳಿಂಗರಾವ್‌ ಹಾಗೂ ಮೈಸೂರು ಅನಂತಸ್ವಾಮಿ ಅವರ ಗೀತೆಗಳ ‘ಸಿಡಿ’ ತಟ್ಟೆಗಳನ್ನು ಹೊರತರಲು ಆಕಾಶವಾಣಿ ನಿರ್ಧರಿಸಿದೆ. ಪ್ರಸಾರ ಭಾರತಿಯ ಮುಖ್ಯಸ್ಥ ಹಾಗೂ ಆಕಾಶವಾಣಿಯ ಪ್ರಧಾನ ನಿರ್ದೇಶಕ ಕೆ.ಎಸ್‌.ಶರ್ಮ ಅವರು ಈ ಸಂಗೀತ ಸಂಭ್ರಮದ ಸುದ್ದಿಯನ್ನು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನೂತನ ಎಫ್‌ ಎಂ ಚಾನಲ್‌ (100.4) ಒಂದನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಶರ್ಮ ಈ ವಿಷಯ ತಿಳಿಸಿದರು.

AIR to release CD of Kalinga Rao songsಆಕಾಶವಾಣಿ ಗೀತಖಜಾನೆಯಲ್ಲಿ ಮೂವತ್ತು ನಿಮಿಷ ಕಾಲಾವಧಿಯ 40 ಸಾವಿರಕ್ಕೂ ಹೆಚ್ಚು ಧ್ವನಿಸುರುಳಿಗಳಿವೆ. ಇವುಗಳನ್ನು ಹಾಳಾಗಲು ಬಿಡುವುದಿಲ್ಲ . ಗೀತೆಗಳ ಹೆಚ್ಚು ಹೆಚ್ಚು ‘ಸಿಡಿ’ ತರಲು ಆಕಾಶವಾಣಿ ಉದ್ದೇಶಿಸಿದೆ. ಕಾಳಿಂಗರಾವ್‌, ಅನಂತಸ್ವಾಮಿ ಅವರ ಗೀತೆಗಳ ಸಿಡಿ ತರಲಾಗುವುದು ಎಂದು ಶರ್ಮ ಹೇಳಿದರು.

ಯುಗಾದಿ ವೇಳೆಗೆ ಕಾಳಿಂಗರಾವ್‌ ಹಾಗೂ ಅನಂತಸ್ವಾಮಿ ಗೀತೆಗಳ ‘ಸಿಡಿ’ ಹೊರಬರುವ ಸಾಧ್ಯತೆಯಿದೆ.

ರಾಷ್ಟ್ರೀಯ ಕಲಾವಿದರು : ಎ ದರ್ಜೆಯ ಕಲಾವಿದರನ್ನು ಗೌರವಿಸಲು ಆಕಾಶವಾಣಿ ನಿರ್ಧರಿಸಿದೆ. 30 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಎ ದರ್ಜೆಯ ಕಲಾವಿದರಾಗಿ ಸೇವೆ ಸಲ್ಲಿಸಿರುವ ಹಾಗೂ 70 ವರ್ಷ ವಯಸ್ಸಾಗಿರುವ ಕಲಾವಿದರು ಈ ಗೌರವಕ್ಕೆ ಅರ್ಹರು. 1 ಲಕ್ಷ ರುಪಾಯಿ ನಗದನ್ನು ಈ ಗೌರವ ಒಳಗೊಂಡಿದೆ. ಈ ಸನ್ಮಾನಕ್ಕೆ ಒಳಗಾದ ಕಲಾವಿದರನ್ನು ರಾಷ್ಟ್ರೀಯ ಕಲಾವಿದರಾಗಿ ಗುರ್ತಿಸಲಾಗುವುದು ಎಂದು ಶರ್ಮ ತಿಳಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X