ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ : ದತ್‌ಗೆ ನೆನಪಾದಳು ನರ್ಗಿಸ್‌ !

By Staff
|
Google Oneindia Kannada News

ಬೆಳಗಾವಿಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ : ದತ್‌ಗೆ ನೆನಪಾದಳು ನರ್ಗಿಸ್‌ !
ದೇಶದಲ್ಲಿ ಕ್ಯಾನ್ಸರ್‌ ಆಸ್ಪತ್ರೆಗಳ ಅಭಿವೃದ್ಧಿಗಾಗಿ ನರ್ಗಿಸ್‌ ಪ್ರತಿಷ್ಠಾನದಿಂದ ನಿಧಿ ಸಂಗ್ರಹ

ನನಗೆ ನರ್ಗಿಸ್‌ ನೆನಪಾಗುತ್ತಿದ್ದಾಳೆ. ಅವಳೊಂದಿಗೆ ಕಳೆದ ಕೊನೆಯ ದಿನಗಳು ನೆನಪಾಗುತ್ತಿವೆ.

ಹಾಗೆಂದವರು ಬಾಲಿವುಡ್‌ ತಾರೆ ಹಾಗೂ ಸಂಸದ ಸುನಿಲ್‌ ದತ್‌. ನರ್ಗಿಸ್‌ ನೆನಪಿನಲ್ಲಿ ಸುನಿಲ್‌ದತ್‌ ಭಾವುಕರಾದರು. ಅವರ ಕೊರಳು ಮೆದುವಾಯಿತು. ಕಣ್ಣಿನಲ್ಲಿ ನೆನಪುಗಳ ಮೆರವಣಿಗೆ.

ದತ್‌ಗೆ ನರ್ಗಿಸ್‌ ನೆನಪಾಗಲಿಕ್ಕೆ ಬೆಳಗಾವಿಯಲ್ಲಿನ ಅಂದಿನ ಸಂದರ್ಭವೇ ಕಾರಣವಾಗಿತ್ತು . ಅದು ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆಯ ಕಾರ್ಯಕ್ರಮ. ಕ್ಯಾನ್ಸರ್‌ಗೆ ನರ್ಗಿಸ್‌ ಬಲಿಯಾಗಿದ್ದಳು. ಹೀಗಾಗಿ ಆಸ್ಪತ್ರೆಯನ್ನು ಉದ್ಘಾಟಿಸಿದ ಸುನಿಲ್‌ದತ್‌ಗೆ ನರ್ಗಿಸ್‌ ತಾನೇತಾನಾಗಿ ನೆನಪಾದಳು.

ನರ್ಗಿಸ್‌ ಜೊತೆ ಅಮೆರಿಕದಲ್ಲಿ ಕಳೆದ ಆತಂಕದ ತಲ್ಲಣದ ದಿನಗಳನ್ನು ಸುನಿಲ್‌ದತ್‌ ನೆನಪಿಸಿಕೊಂಡರು. ನನ್ನ ಪತ್ನಿ ನರ್ಗಿಸ್‌ಳ ಕೊನೆಯ ಹತ್ತು ತಿಂಗಳ ಯಾತನೆ ಕಣ್ಣಿಗೆ ಕಟ್ಟಿದಂತಿದೆ. ಆ ದಿನಗಳ ರೋಗದ ನೋವನ್ನು ನಾನೂ ಅನುಭವಿಸಿದ್ದೇನೆ ಎಂದು ದತ್‌ ಹೇಳಿದರು.

ಪ್ರತಿಯಾಂದು ರಾಜ್ಯದಲ್ಲಿಯೂ ಕ್ಯಾನ್ಸರ್‌ ಆಸ್ಪತ್ರೆ ಇರಬೇಕೆಂಬುದು ನನ್ನ ಕನಸು. ದೇಶದಲ್ಲಿ ಕ್ಯಾನ್ಸರ್‌ ಆಸ್ಪತ್ರೆಗಳ ಅಭಿವೃದ್ಧಿಗಾಗಿ ನರ್ಗಿಸ್‌ ಪ್ರತಿಷ್ಠಾನ 5 ಮಿಲಿಯನ್‌ ಡಾಲರ್‌ಗಳ ನಿಧಿ ಸಂಗ್ರಹಿಸಿದೆ ಎಂದು ಸುನಿಲ್‌ದತ್‌ ಹೇಳಿದರು.

ಟಾಟಾ ಸ್ಮಾರಕ ಕೇಂದ್ರದ ನಿರ್ದೇಶಕ ಕೆ.ಎ.ದಿನ್ಷಾ, ಮುಂಬಯಿಯ ಬ್ರೀಚ್‌ಕ್ಯಾಂಡಿ ಮತ್ತು ಜಸ್ಲೋಕ್‌ ಆಸ್ಪತ್ರೆಯ ಸರ್ಜನ್‌ ಆರ್‌.ಕೆ.ದೇಶಪಾಂಡೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂದೀಪ್‌ ಮಧ್ವಪತಿ ಅವರು ಬೆಳಗಾವಿ ಕ್ಯಾನ್ಸರ್‌ ಆಸ್ಪತ್ರೆಯ ಸ್ಥಾಪಕರು. ಈ ಆಸ್ಪತ್ರೆಯಿಂದಾಗಿ ಬೆಳಗಾವಿ ಪ್ರದೇಶದ ಕ್ಯಾನ್ಸರ್‌ ರೋಗಿಗಳು ಚಿಕಿತ್ಸೆಗಾಗಿ ಮುಂಬಯಿಗೆ ಎಡತಾಕುವ ಕಷ್ಟ ತಪ್ಪಿದೆ.

(ಪಿಟಿಐ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X