ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲಾರ್‌ ಹತ್ಯಾಕಾಂಡದ ಕಾಡುಗಳ್ಳ ವೀರಪ್ಪನ್‌ ಸಹಚರರಿಗೆ ಗಲ್ಲು

By Staff
|
Google Oneindia Kannada News

ಪಾಲಾರ್‌ ಹತ್ಯಾಕಾಂಡದ ಕಾಡುಗಳ್ಳ ವೀರಪ್ಪನ್‌ ಸಹಚರರಿಗೆ ಗಲ್ಲು
ಜೀವಾವಧಿ ಶಿಕ್ಷೆಯನ್ನು ಗಲ್ಲಿಗೆ ಪರಿವರ್ತಿಸಿದ ಸುಪ್ರಿಂಕೋರ್ಟ್‌

ನವದೆಹಲಿ : ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರಿಗೆ ಸುಪ್ರಿಂಕೋರ್ಟ್‌ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ.

1993ರ ಏಪ್ರಿಲ್‌ನಲ್ಲಿ ನೆಲಬಾಂಬ್‌ ಸ್ಫೋಟಿಸುವ ಮೂಲಕ 21 ಜನರ ಸಾವಿಗೆ ಈ ನಾಲ್ವರು ಅಪರಾಧಿಗಳು ಕಾರಣರಾಗಿದ್ದರು. ಪಾಲಾರ್‌ ಬಳಿ ಈ ಹತ್ಯಾಕಾಂಡ ನಡೆದಿತ್ತು . ನ್ಯಾಯಮೂರ್ತಿ ವೈ.ಕೆ.ಸಬರ್‌ವಾಲ್‌ ಮತ್ತು ನ್ಯಾಯಮೂರ್ತಿ ಬಿ.ಎನ್‌.ಅಗರ್‌ವಾಲ್‌ ಅವರನ್ನೊಳಗೊಂಡ ವಿಭಾಗೀಯ ಪೀಠ, ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತು.

ಈ ಮುನ್ನ ಟಾಡಾ ವಿಶೇಷ ನ್ಯಾಯಾಲಯ ಬಂಧಿತ ವೀರಪ್ಪನ್‌ ಸಹಚರರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು . ಈ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು . ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ- ಜೀವಾವಧಿ ಶಿಕ್ಷೆಯನ್ನು ಬದಲಿಸಿ ಗಲ್ಲುಶಿಕ್ಷೆ ನೀಡುವ ಮಹತ್ವದ ಆದೇಶವನ್ನು ಜ.29ರ ಗುರುವಾರ ನೀಡಿದೆ.

ಜ್ಞಾನಪ್ರಕಾಶ್‌, ಸಿಮನ್‌, ಬಿಲೈಂದ್ರ ಹಾಗೂ ಶೇಖರನ್‌ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್‌ ಸಹಚರರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X