ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಎಜುಸ್ಯಾಟ್‌’ : 2000 ಕೋಟಿ ರು. ಶೈಕ್ಷಣಿಕ ಯೋಜನೆಗೆ ಚಾಲನೆ

By Staff
|
Google Oneindia Kannada News

‘ಎಜುಸ್ಯಾಟ್‌’ : 2000 ಕೋಟಿ ರು. ಶೈಕ್ಷಣಿಕ ಯೋಜನೆಗೆ ಚಾಲನೆ
ಜೂನ್‌ನಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾದ ಉಪಗ್ರಹ ಉಡಾವಣೆ

ಬೆಂಗಳೂರು : ಒಟ್ಟು 2000 ಕೋಟಿ ರುಪಾಯಿ ವೆಚ್ಚದ, ‘ಎಜುಸ್ಯಾಟ್‌’ (EDUSAT) ಎನ್ನುವ ಮಹತ್ವಾಕಾಂಕ್ಷೆಯ ಟೆಲಿ ಶಿಕ್ಷಣ ಯೋಜನೆ ಬುಧವಾರ (ಜ.28) ಪ್ರಾರಂಭವಾಯಿತು.

ಕಕ್ಷೆಯಲ್ಲಿನ ಭಾರತದ ಉಪಗ್ರಹವೊಂದರ ಟ್ರಾನ್ಸ್‌ಪಾಂಡರ್‌ ಮೂಲಕ ಸುಮಾರು 50 ಇಂಜಿನಿಯರಿಂಗ್‌ ಕಾಲೇಜುಗಳು ‘ಎಜುಸ್ಯಾಟ್‌’ ಯೋಜನೆಯ ಜಾಲಕ್ಕೆ ಸೇರಲಿವೆ.

ಪ್ರಸ್ತುತ 90 ಕೋಟಿ ರುಪಾಯಿ ವೆಚ್ಚದಲ್ಲಿ - ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮಹಾರಾಷ್ಟ್ರದಲ್ಲಿನ ನಾಸಿಕ್‌ ಮೂಲದ ವೈ.ಬಿ.ಚವ್ಹಾಣ್‌ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಮಧ್ಯಪ್ರದೇಶದಲ್ಲಿನ ರಾಜೀವ್‌ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯಗಳು ಟೆಲಿ ಶಿಕ್ಷಣ ಯೋಜನೆಯ ಸವಲತ್ತು ಹೊಂದಲಿವೆ.

ಮುಂಬರುವ ಜೂನ್‌ ತಿಂಗಳಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾದ ಉಪಗ್ರಹವೊಂದನ್ನು ಉಡಾಯಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಟೆಲಿ ಶಿಕ್ಷಣ ಯೋಜನೆ ರಾಷ್ಟ್ರವ್ಯಾಪಿಯಾಗುವ ಕುರಿತು ನಮಗೆ ನಂಬಿಕೆಯಿದೆ ಎಂದು ‘ಎಜುಸ್ಯಾಟ್‌’ಗೆ ಚಾಲನೆ ದೊರೆತ ಸಂದರ್ಭದಲ್ಲಿ ಇಸ್ರೋದ ಮುಖ್ಯಸ್ಥ ಮಾಧವನ್‌ ನಾಯರ್‌ ಸುದ್ದಿಗಾರರಿಗೆ ತಿಳಿಸಿದರು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ‘ಎಜುಸ್ಯಾಟ್‌’ ಉದ್ಘಾಟಿಸಿದರು.

‘ಎಜುಸ್ಯಾಟ್‌’ನ ಮೊದಲ ಹಂತದಲ್ಲಿ ಇನ್ಸಾಟ್‌-3ಎ ಅಥವಾ ಇನ್ಸಾಟ್‌-3ಬಿ ಉಪಗ್ರಹದ ಪ್ರಯೋಜನ ಪಡೆಯಲಾಗುವುದು. ಮೂರು ರಾಜ್ಯಗಳಲ್ಲಿನ (ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ) ಸುಮಾರು 100 ಶಾಲಾಕೊಠಡಿಗಳಲ್ಲಿ ‘ಎಜುಸ್ಯಾಟ್‌’ ಸಂಪರ್ಕ ಜಾಲ ಉಂಟಾಗಲಿದೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X