ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ಗೆ ಅಂತ್ಯ ಕಾಣಿಸಲು ರಾಜ್ಯಪಾಲ ಚತುರ್ವೇದಿ ಒತ್ತಾಯ

By Staff
|
Google Oneindia Kannada News

ವೀರಪ್ಪನ್‌ಗೆ ಅಂತ್ಯ ಕಾಣಿಸಲು ರಾಜ್ಯಪಾಲ ಚತುರ್ವೇದಿ ಒತ್ತಾಯ
ಉತ್ತಮ ಸೇವೆಯ ಮೂಲಕ ಜನರ ನಂಬಿಕೆ ಗಳಿಸಲು ಪೊಲೀಸರಿಗೆ ಕರೆ

ಬೆಂಗಳೂರು : ನರಹಂತಕ-ಕಾಡುಗಳ್ಳ ವೀರಪ್ಪನ್‌ ಸಮಸ್ಯೆಯನ್ನು ಕೊನೆಗಾಣಿಸುವಂತೆ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಹಾಗೂ ನೆರೆ ರಾಜ್ಯಗಳ ಗಡಿಯಲ್ಲಿನ ಅರಣ್ಯಗಳಲ್ಲಿ ಕಾಡುಗಳ್ಳನ ಹಾವಳಿ ಮುಂದುವರಿದೆ. ಈ ಪ್ರಕರಣಕ್ಕೆ ತಡೆ ಹಾಕಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲ ಚತುರ್ವೇದಿ ತಮ್ಮ ಗಣರಾಜ್ಯೋತ್ಸವ ಭಾಷಣದಲ್ಲಿ (ಜ.26, ಸೋಮವಾರ) ಹೇಳಿದರು.

ಪೊಲೀಸ್‌ ಇಲಾಖೆಯ ವಿವಿಧ ಹಂತಗಳಲ್ಲಿ ಸಹಕಾರ ಮನೋಭಾವ ಉಂಟಾಗಬೇಕು. ಗುಪ್ತಚರ ವಿಭಾಗವನ್ನು ಬಲಗೊಳಿಸಬೇಕು. ಈ ಮೂಲಕ ರಾಜ್ಯದ ಜನತೆಯ ವಿಶ್ವಾಸ ಗಳಿಸಬೇಕು ಎಂದು ಚತುರ್ವೇದಿ ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ರಾಜ್ಯದ ಪೊಲೀಸರು ಉತ್ತಮ ಸಾಮರ್ಥ್ಯ ತೋರಿದ್ದಾರೆ ಎಂದು ರಾಜ್ಯಪಾಲ ಚತುರ್ವೇದಿ ಶ್ಲಾಘಿಸಿದರು.

ಮುಂಬರುವ ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗಳ ಪಾರದರ್ಶಕತೆ ಕುರಿತು ಜನರಲ್ಲಿ ನಂಬಿಕೆ ಮೂಡಿಸುವ ಕೆಲಸಗಳನ್ನು ಸರ್ಕಾರ ಮಾಡಬೇಕಿದೆ ಎಂದು ರಾಜ್ಯಪಾಲರು ಹೇಳಿದರು.

ಪ್ರವಾಸೋದ್ಯಮಕ್ಕೆ ಒತ್ತು , ಬೆಂಗಳೂರಿಗೆ ಮೆಟ್ರೋ

ರಾಜ್ಯದಲ್ಲಿನ ಪ್ರವಾಸೋದ್ಯಮದ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಹೆಚ್ಚು ಕ್ರಿಯಾಶೀಲರಾಗಬೇಕು. ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚುತ್ತಿದ್ದು , ಈ ಸಮಸ್ಯೆಗೆ ಮೆಟ್ರೋ ರೈಲು ಮದ್ದಾಗಬಲ್ಲದು ಎಂದು ಚತುರ್ವೇದಿ ಅಭಿಪ್ರಾಯಪಟ್ಟರು.

ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ದೊಡ್ಡ ಸವಾಲು ಸರ್ಕಾರದ ಮುಂದಿದೆ ಎಂದು ಚತುರ್ವೇದಿ ತಮ್ಮ ಭಾಷಣದಲ್ಲಿ ತಿಳಿಸಿದರು.

ನೂರಾರು ಶಾಲಾ ಮಕ್ಕಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಶಾಲಾ ಮಕ್ಕಳೊಂದಿಗೆ, ಭಾರತೀಯ ವಾಯುದಳ, ಸಿಆರ್‌ಪಿಎಫ್‌, ಅಗ್ನಿಶಾಮಕ ದಳ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಆಕರ್ಷಕ ಪೆರೇಡ್‌ನಲ್ಲಿ ಭಾಗವಹಿಸಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X