ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಬೆ: ರಂಗಾಯಣಕ್ಕೆ ಹೊಸ ಸೂತ್ರದಾರ

By Staff
|
Google Oneindia Kannada News

ಜಂಬೆ: ರಂಗಾಯಣಕ್ಕೆ ಹೊಸ ಸೂತ್ರದಾರ
ಬಹುಮುಖಿ ಪ್ರತಿಭೆಯ ಕೈಗೆ ರಂಗಾಯಣದ ಚುಕ್ಕಾಣಿ

ಬೆಂಗಳೂರು: ರಂಗ ನಿರ್ದೇಶಕ ಎ. ಜಿ. ಚಿದಂಬರರಾವ್‌ ಜಂಬೆ ಅವರನ್ನು ಮೈಸೂರು ರಂಗಾಯಣದ ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಬುಧವಾರ, ಜ21ರಂದು ಜಂಬೆ ಅವರ ನೇಮಕದ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ.

ಮೂರು ವರ್ಷಗಳ ಕಾಲಾವಧಿಗೆ ಜಂಬೆ ಅವರು ನಿರ್ದೇಶಕರಾಗಿ ಸೇವೆ ಸಲ್ಲಿಸುವರು. ಸ್ವೀಡನ್‌ ಸರಕಾರದ ಮಕ್ಕಳ ರಂಗ ತರಬೇತಿ ಯೋಜನೆಗೂ ಅನುಮೋದನೆ ದೊರೆತಿದ್ದು, ಉತ್ತಮವಾದ ಫಲಿತಾಂಶ ಕಂಡುಬರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ತಿಳಿಸಿದ್ದಾರೆ.

ಪರಿಚಯ : ಮೂಲತಃ ಕೆಳದಿಯ ಅಡ್ಡೇರಿಯವರಾದ ಚಿದಂಬರರಾವ್‌ ಜಂಬೆ, 1949ರಲ್ಲಿ ಜನಿಸಿದರು. ಪಿಯುಸಿ ತನಕ ಮಾತ್ರ ಶಿಕ್ಷಣ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದರು. ಎಸ್‌ಜೆಪಿ ಕಾಲೇಜಿನಲ್ಲಿ ಕ್ಯಾಟರಿಂಗ್‌ ಕೋರ್ಸ್‌ ಮಾಡಿ ನಂತರ ದೆಹಲಿ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗ ಡಿಪ್ಲೊಮ ಸಂಪಾದಿಸಿದರು.

ಜಂಬೆ ಅವರ ರಂಗಭೂಮಿಯ ನಿಕಟ ನಂಟು ಆರಂಭವಾದುದು 1982ರಿಂದ. 1982 ರಲ್ಲಿ ಹೆಗ್ಗೋಡಿನ ಹೆಸರಾಂತ ನೀನಾಸಂನ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಆರಂಭಿಸಿದರು. ಸುತ್ತಲಿನ ಜನರ ಜೊತೆ ಬೆರೆತು, ಜನಮನದಲ್ಲಿ ಕಲೆಯ ಬಗೆಗೆ ಆಸಕ್ತಿ ಬೆಳೆಸಿದರು. ಅದರ ಫಲವೇ ಮಂಚಿಕೇರಿಯ ಹಿಂದುಳಿದ ಜನಾಂಗ ಸಿದ್ಧಿ ಬುಡಕಟ್ಟು ಜನರಿಗೆ ತರಬೇತಿ ನೀಡಿ ನಿರ್ದೇಶಿಸಿದ ’ಕಪ್ಪು ಜನ ಕೆಂಪು ನೆರಳು’ ನಾಟಕ. ಗಂಗೊಳ್ಳಿಯ ಬೆಸ್ತರಿಗೆ, ಹಂಪಿ ವಿವಿಯಲ್ಲಿ ರಂಗ ಕಾರ್ಯಾಗಾರ ನಡೆಸಿಕೊಟ್ಟಿದ್ದರು.

ಪ್ರಶಸ್ತಿ-ಪುರಸ್ಕಾರ : ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳದ ಸಂಗೀತ ಅಕಾಡೆಮಿ ಪುರಸ್ಕಾರ, ರುಜುವಾತು ಪ್ರಕಾಶನದ ಫೆಲೋಷಿಪ್‌, ದೆಹಲಿಯ ರಾಷ್ಟ್ರೀಯ ಕಲಶಾಲೆಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಣೆ- ಇವು ಇವರ ಕಲಾ ಸೇವೆಗೆ ಸಂದ ಗೌರವ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X