ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಪಂಜಾಬ್‌ ವರ್ಸಸ್‌ ಪಾಕಿಸ್ತಾನ ಪಂಜಾಬ್‌ ಕ್ರಿಕೆಟ್‌!

By Staff
|
Google Oneindia Kannada News

ಭಾರತೀಯ ಪಂಜಾಬ್‌ ವರ್ಸಸ್‌ ಪಾಕಿಸ್ತಾನ ಪಂಜಾಬ್‌ ಕ್ರಿಕೆಟ್‌!
ಪಟಿಯಾಲ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಪಂಜಾಬ್‌ಗಳ ನಡುವೆ ಕ್ರಿಕೆಟ್‌ ಪ್ರಸ್ತಾವನೆ

ಇದು ಕ್ರಿಕೆಟ್‌. ಪಂದ್ಯ ನಡೆಯುವುದು ಭಾರತ ಹಾಗೂ ಪಾಕಿಸ್ತಾನಗಳ ನಡುವೆ. ಅಂದಹಾಗೆ, ಈ ಪಂದ್ಯದಲ್ಲಿ ಭಾಗವಹಿಸುವುದು ಭಾರತ-ಪಾಕ್‌ನ ರಾಷ್ಟ್ರೀಯ ತಂಡಗಳಲ್ಲ ; ರಾಜ್ಯ ತಂಡಗಳು. ಇದು ಪಂಜಾಬ್‌ ವರ್ಸಸ್‌ ಪಂಜಾಬ್‌ ನಡುವಿನ ಹಣಾಹಣಿ.

ಸದ್ಯಕ್ಕೆ ಪಂಜಾಬ್‌ ವರ್ಸಸ್‌ ಪಂಜಾಬ್‌ ನಡುವಿನ ಕ್ರಿಕೆಟ್‌ ಪಂದ್ಯದ ಪ್ರಸ್ತಾವನೆ ಕಾಗದದ ಮೇಲಿದೆ.

ಭಾರತ ಹಾಗೂ ಪಾಕಿಸ್ತಾನ್‌ ಎರಡೂ ರಾಷ್ಟ್ರಗಳಲ್ಲೂ ಪಂಜಾಬ್‌ ಹೆಸರಿನ ರಾಜ್ಯಗಳಿವೆ. ಈ ಎರಡೂ ರಾಜ್ಯಗಳ ತಂಡಗಳ ನಡುವೆ ಹಬ್ಬದ ಕ್ರಿಕೆಟ್‌ ಪಂದ್ಯ ಆಡಿಸುವ ಚಿಂತನೆ ಭಾರತದ ಪಂಜಾಬ್‌ನಲ್ಲಿ ಹುಟ್ಟಿಕೊಂಡಿದೆ. ಈ ಕುರಿತು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಈಗಾಗಲೇ ಕಾರ್ಯ ತತ್ಪರರಾಗಿದ್ದಾರೆ.

ಕೇಂದ್ರದ ಕ್ರೀಡೆ ಮತ್ತು ಯುವಜನ ಖಾತೆ ಸಚಿವ ವಿಕ್ರಂ ವರ್ಮ ಅವರಿಗೆ ಪಂಜಾಬ್‌ಗಳ ನಡುವಿನ ಕ್ರಿಕೆಟ್‌ ಪಂದ್ಯದ ಕುರಿತು ಅಮರಿಂದರ್‌ ಸಿಂಗ್‌ ಪತ್ರ ಬರೆದಿದ್ದಾರೆ. ಪತ್ರ ಬರೆದಿರುವುದಷ್ಟೇ ಅಲ್ಲ , ಜ.22ರ ಗುರುವಾರ ಕೇಂದ್ರ ಸಚಿವರನ್ನು ಖುದ್ದು ಭೇಟಿ ಮಾಡಿದ ಅಮರಿಂದರ್‌ ಸಿಂಗ್‌ ಭೇಟಿ ಮಾಡಿದ್ದಾರೆ. ಸಚಿವ ವಿಕ್ರಂ ಸಿಂಗ್‌ ಪಂಜಾಬ್‌ ಕ್ರಿಕೆಟ್ಟಿಗೆ ಹಸಿರು ನಿಶಾನೆಯನ್ನು ತೋರಿಸಿದ್ದಾರೆ.

ಪಂಜಾಬ್‌ ಕ್ರಿಕೆಟ್‌ ಕೌನ್ಸಿಲ್‌ ಕೂಡ ಈ ಕ್ರಿಕೆಟ್‌ ಪಂದ್ಯದ ಕುರಿತು ಅತ್ಯಾಸಕ್ತಿ ಹೊಂದಿದ್ದು , ಪಾಕಿಸ್ತಾನದ ಪಂಜಾಬ್‌ ಕ್ರಿಕೆಟ್‌ ಕೌನ್ಸಿಲ್‌ ಜೊತೆ ಮಾತುಕತೆ ಆರಂಭಿಸಿದೆ. ಆದರೆ, ಈ ಮಾತುಕತೆಗೊಂದು ಸ್ಪಷ್ಟ ದಿಕ್ಕು ದೊರೆಯಲಿಕ್ಕೆ, ಕೇಂದ್ರ ಕ್ರೀಡಾ ಸಚಿವಾಲಯದ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಬೇಕು. ಅದಕ್ಕಾಗಿ ಕಾಯಲಾಗುತ್ತಿದೆ.

ಮುಂಬರುವ ಫೆಬ್ರವರಿ 21 ರಿಂದ 29ರವೆರೆಗೆ ಪಂಜಾಬ್‌ನಲ್ಲಿ ಪಟಿಯಾಲ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಈ ಸಂಭ್ರಮದ ಸಂದರ್ಭದಲ್ಲಿ ಪಂಜಾಬ್‌ಗಳ ಕ್ರಿಕೆಟ್‌ ಪಂದ್ಯವನ್ನು ಏರ್ಪಡಿಸುವುದು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಉದ್ದೇಶ. ಕ್ರಿಕೆಟ್‌ ಪಂದ್ಯದಿಂದ ಸಂಗ್ರಹವಾಗುವ ಹಣವನ್ನು, ಪಂಜಾಬ್‌ನಲ್ಲಿನ ಸ್ಮಾರಕಗಳ ಅಭಿವೃದ್ಧಿಗೆ ಬಳಸಲು ಅಮರಿಂದರ್‌ ಉದ್ದೇಶಿಸಿದ್ದಾರೆ.

ಕಾಗದದ ಮೇಲಿನ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ - ಭಾರತ ಹಾಗೂ ಪಾಕ್‌ ರಾಷ್ಟ್ರೀಯ ತಂಡಗಳ ನಡುವಿನ ಕ್ರಿಕೆಟ್‌ ಹಣಾಹಣಿಗೆ ಮುನ್ನವೇ ಪಂಜಾಬ್‌ ವರ್ಸಸ್‌ ಪಂಜಾಬ್‌ ಸೆಣಸಾಟ ನಡೆಯಲಿದೆ. ಕ್ರೀಡೆಗೆ ಜಯವಾಗಲಿ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X