ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್‌ ವ್ಯಾಲಿಗೆ ಬಯೋ ಲಗ್ಗೆ - ರಸೆಲ್‌ ಹೆನ್‌ಕೊಕ್‌

By Staff
|
Google Oneindia Kannada News

ಸಿಲಿಕಾನ್‌ ವ್ಯಾಲಿಗೆ ಬಯೋ ಲಗ್ಗೆ - ರಸೆಲ್‌ ಹೆನ್‌ಕೊಕ್‌
ವ್ಯಾಲಿಯಲ್ಲಿನ ಉದ್ಯೋಗ ಅನಿಶ್ಚಿತತೆಗೆ ಬಯೋಟೆಕ್‌ ಮದ್ದು !

ಸಿಲಿಕಾನ್‌ವ್ಯಾಲಿ: ಸಿಲಿಕಾನ್‌ವ್ಯಾಲಿಯಲ್ಲಿ ಮಾಹಿತಿ ತಂತ್ರಜ್ಞಾನ ದ ಕುಸಿತದಿಂದ ಮುಗ್ಗರಿಸಿದ ಆರ್ಥಿಕ ಪರಿಸ್ಥಿತಿಯು ಬಯೋಕೆಮಿಕಲ್‌ ಕೈಗಾರಿಕೆಯ ಮೂಲಕ ಪುನಶ್ಚೇತನ ಕಾಣಲಿದೆ. ಈ ಹಿಂದೆ ಅಂತರ್‌ಜಾಲ, ರಕ್ಷಣಾ, ಖಾಸಗಿ ಗಣಕಯಂತ್ರ(ಪಿ.ಸಿ) ಅನುಸಂಧಾನದಿಂದ ಆರ್ಥಿಕ ಉತ್ತುಂಗಕ್ಕೇರಿದ್ದ ಸಿಲಿಕಾನ್‌ವ್ಯಾಲಿ, ಮತ್ತೆ ಪುನರ್ಜೀವ ಪಡೆಯಲಿರುವ ಆಶಾಕಿರಣದ ಕುರಿತ ಒಂದು ವರದಿ....

‘ಮೂರು ದುಖ8ತಪ್ತ ವಸಂತಗಳ ಬಳಿಕ , ಮತ್ತೆ ವ್ಯಾಲಿಯ ಮರುವಿಕಸನದ ಕುರುಹು ಕಾಣುತಿದ್ದೇವೆ. ಇದು ಹಿಂದೆಗಿಂತ ನಿಧಾನವಾಗಿರ ಬಹುದು, ಆದರೆ ಬೆಳವಣಿಗೆಯ ಸ್ಪಷ್ಟ ಚಿತ್ರಣ ಕಾಣುತಿದ್ದೇವೆ.’ ಎಂದು ಲಾಭ ನಿರಪೇಕ್ಷಿತಾ ಸಂಸ್ಥೆಯಾದ ಸಿಲಿಕಾನ್‌ ವ್ಯಾಲಿ ನೆಟ್‌ವರ್ಕ್‌ ಜಂಟಿ ಪಡೆಯು ಹೊರತಂದ ವರದಿಯಲ್ಲಿ ಅದರ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕರಾಗಿರುವ ರಸೆಲ್‌ ಹೆನ್‌ಕೊಕ್‌ ಹೇಳಿದ್ದಾರೆ.

‘ಸಿಲಿಕಾನ್‌ವ್ಯಾಲಿ ನೆಟ್‌ವರ್ಕ್‌ 2004 ಇಂಡೆಕ್ಸ್‌’ ಎಂಬ ವರದಿಯಲ್ಲಿ ತಿಳಿಸಿರುವಂತೆ 2002 ಮೇ ಯಿಂದ 2003 ಮೇ ಅಂತ್ಯಕ್ಕೆ ವ್ಯಾಲಿಯಲ್ಲಿ ಶೇ5 ರಷ್ಟು ಉದ್ಯೋಗ ಇಳಿಕೆಯಾಗಿದೆ. ವ್ಯಾಲಿಯು 2002ರಲ್ಲಿ 99,262 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದರೆ, 2001 ರಿಂದ 2002 ರಲ್ಲಿ ದೇಶದಲ್ಲೇ ಅತಿಹೆಚ್ಚು ಉದ್ಯೋಗ ಕಳೆದುಕೊಂಡ ತಾಣವಾಗಿದೆ. ಆದರೆ ದೇಶದ ಬಯೋಟೆಕ್ನಾಲಜಿ ನಾಯಕರುಗಳನ್ನು ಒಳಗೊಂಡ ಬಯೋಟೆಕ್ನಾಲಜಿ ಕಂಪೆನಿಗಳು ಕೆಲವೇ ಉದ್ಯೋಗಿಗಳನ್ನು ಕಳೆದುಕೊಂಡಿದೆ. ಸರ್ವೆಯಾಂದರ ಅಂಕಿಅಂಶದಂತೆ ವ್ಯಾಲಿಯಲ್ಲೀಗ ಸಾಪ್ಟ್‌ವೇರ್‌ ಕಂಪೆನಿ ಹಾಗೂ ಬಯೋಟೆಕ್ನಾಲಜಿ ಕಂಪೆನಿಗಳ ಬಂಡವಾಳ ಪ್ರಮಾಣ ಸಮಾನವಾಗಿದೆ.

‘ ವ್ಯಾಲಿಯಲ್ಲಿ ವೈದ್ಯಕೀಯ ತಂತ್ರಜ್ಞಾನ ಹಾಗೂ ಬಯೋಟೆಕ್‌ನಿಂದಾಗಿ 2000 ದಲ್ಲಿ ಶೇ 7 ಕ್ಕಿಂತಲೂ ಕಡಿಮೆಯಿದ್ದ ಬಂಡವಾಳ ಹೂಡಿಕೆಯು ಕಳೆದ ವರ್ಷ ಶೇ24ಕ್ಕೇರಿದೆ. ಹೆಚ್ಚು ಸಂಭಾವನೆ ನೀಡುವ ಉದ್ಯೋಗ ಅವಕಾಶಗಳು ಹೆಚ್ಚಿವೆ. ಮುಖ್ಯವಾಗಿ ಆರೋಗ್ಯ ಸೇವೆ ಮತ್ತು ಬಯೋಟೆಕ್‌ ಕ್ಷೇತ್ರದಲ್ಲಿ ದೇಶದಲ್ಲೇ ವ್ಯಾಲಿಯಲ್ಲಿ ಹೆಚ್ಚಿನ ಉದ್ಯೋಗ ಕೇಂದ್ರಿಕೃತವಾಗಿದೆ ’ ಹೆನ್‌ಕೊಕ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಡಾಟ್‌ಕಾಮ್‌ ಪತನ ದಿಂದ ವ್ಯಾಲಿ ಚೇತರಿಸಬಹುದೇ?ಎಂಬ ಜ್ವಲಂತ ಪ್ರಶ್ನೆಗೆ ಉತ್ತರ ದೊರೆಯುತ್ತಿದೆ. ಹೌದು, ವ್ಯಾಲಿ ಮುಂದೆ ಬದಲಾಗಿ ಕಾಣಬಹುದು! ಆದರೆ ಹೆಚ್ಚಿನ ಉದ್ಯೋಗ ಸೃಷ್ಟಿಗಾಗಿ ನಾವು ನಮ್ಮ ಕೌಶಲ್ಯದ ಮೇಲೆ ಬಂಡವಾಳ ಹೂಡಬೇಕಾಗಿದೆ.’ ಎಂದೂ ಅವರು ಹೇಳಿದರು.

‘ಕೈಗಾರಿಕಾ ಕ್ಷೇತ್ರದ ಕ್ಷಿಪ್ರ ಬದಲಾವಣೆಗಳಿಗೆ ನಾವು ನಮ್ಮ ಜನತೆಯನ್ನು ಹೇಗೆ ತಯಾರು ಮಾಡಬೇಕೆಂದು ಅಲೋಚಿಸ ಬೇಕಾಗಿದೆ .’ ಎಂದು ಈ ಜಂಟಿ ಪಡೆಗಾಗಿ ವರದಿ ತಯಾರಿಸಿದ ಕೊಲಾಬರೇಟಿವ್‌ ಇಕಾನೊಮಿಕ್ಸ್‌ ಅಧ್ಯಕ್ಷ ಡೌ ಹೇಂಟೋನ್‌ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X