ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಉಸ್ತುವಾರಿಸಮಿತಿ ಸಭೆಯಲ್ಲಿ ನೀರಿಗೆ ತಮಿಳ್ನಾಡು ಮನವಿ

By Staff
|
Google Oneindia Kannada News

ಕಾವೇರಿಉಸ್ತುವಾರಿಸಮಿತಿ ಸಭೆಯಲ್ಲಿ ನೀರಿಗೆ ತಮಿಳ್ನಾಡು ಮನವಿ
ಕರ್ನಾಟಕದ ಪ್ರಮಾಣ ಪತ್ರಕ್ಕೆ ಉತ್ತರಿಸಲು ಜಯಾಗೆ 2 ವಾರ ಗಡುವು

ನವದೆಹಲಿ : ತಕ್ಷಣವೇ ಏಳು ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸೋಮವಾರ ದೆಹಲಿಯಲ್ಲಿ ನಡೆದ ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ ಮನವಿ ಮಾಡಿದೆ.

ತಮಿಳುನಾಡು ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ಪ್ರಾಣೇಶ್‌ ಅವರು ಸೋಮವಾರದ ಉಸ್ತುವಾರಿ ಸಮಿತಿ ಸಭೆಯಲ್ಲಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು. ತಮಿಳುನಾಡಿನ ಕೋರಿಕೆಗೆ ಸ್ಪಂದಿಸಿದ ಕರ್ನಾಟಕ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ್‌ ಅವರು ಈ ಮನವಿಯನ್ನು ಸರ್ಕಾರದ ಗಮನಕ್ಕೆ ತರುವದಾಗಿ ಹೇಳಿದರು.

ಗಣರಾಜ್ಯೋತ್ಸವ ದಿನದ ಒಳಗೆ ನೀರು ಬಿಡುಗಡೆಯ ಕುರಿತು ತೀರ್ಮಾನ ಕೈಗೊಳ್ಳುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಜಲ ಸಂಪನ್ಮೂಲ ಕಾರ್ಯರ್ದಿ ವಿ.ಕೆ.ದುಗ್ಗಲ್‌ ಕರ್ನಾಟಕದ ಬಿ.ಎಸ್‌.ಪಾಟೀಲ್‌ ಅವರಿಗೆ ಸೂಚಿಸಿದರು. ಉಭಯ ರಾಜ್ಯಗಳಲ್ಲಿನ ಮಳೆಯ ಪ್ರಮಾಣ, ಬರ ಪರಿಸ್ಥಿತಿ, ಇನ್ನಿತರೆ ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಜಯಲಲಿತಾಗೆ ಗಡುವು : ಹಗರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ತನಿಖೆ ನಡೆಸಲು ಯಾವುದೇ ತೊಡಕು ಉಂಟಾಗದು ಎಂದು ಕರ್ನಾಟಕ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಸುಪ್ರಿಂಕೋರ್ಟ್‌ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೋಮವಾರ ಸೂಚಿಸಿತು.

ಕಾವೇರಿ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತನಿಖೆ ನಡೆಸಲು ಅಡ್ಡಿ ಉಂಟಾಗಬಹುದು ಎಂದು ಜಯಲಲಿತಾ ಅವರು ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು , ಈ ಅರ್ಜಿಗೆ ಪ್ರತಿಯಾಗಿ ಸಕಲ ರಕ್ಷಣೆಯನ್ನೂ ಒದಗಿಸುವುದಾಗಿ ಕರ್ನಾಟಕ ಸರ್ಕಾರ ಉತ್ತರ ನೀಡಿತ್ತು . ಕರ್ನಾಟಕ ಸರ್ಕಾರದ ಉತ್ತರವನ್ನು ಪರಿಶೀಲಿಸಿದ ಸುಪ್ರಿಂಕೋರ್ಟ್‌ನ ನ್ಯಾಯಪೀಠ ಇನ್ನೆರಡು ವಾರಗಳಲ್ಲಿ ಈ ಕುರಿತು ಉತ್ತರ ನೀಡುವಂತೆ ಜಯಲಲಿತಾ ಅವರಿಗೆ ಆದೇಶಿಸಿತು.

(ಪಿಟಿಐ)

ಮುಖಪುಟ / ಕಾವೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X