ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ಮೈಲುಗಳಿಂದ ಶಿರಹಟ್ಟಿಗೆ ಬಂದಾರೊ ಚಳಿಗಾಲದ ನಂಟರು

By Staff
|
Google Oneindia Kannada News

ಸಾವಿರ ಮೈಲುಗಳಿಂದ ಶಿರಹಟ್ಟಿಗೆ ಬಂದಾರೊ ಚಳಿಗಾಲದ ನಂಟರು
ಶಿರಹಟ್ಟಿಯ ಕೆರೆಗೆ ನೆರೆ ದೇಶಗಳಿಂದ ಸಾವಿರಾರು ಪಕ್ಷಿಗಳು

ಶಿರಹಟ್ಟಿ : ಸಾವಿರಾರು ಮೈಲು ದೂರದಿಂದ ವಿವಿಧ ಪ್ರಬೇಧದ ನೂರಾರು ಪಕ್ಷಿಗಳು ಬದಾಮಿ ಸಮೀಪದ ಶಿರಹಟ್ಟಿಗೆ ಬಂದಿವೆ. ಶಿರಹಟ್ಟಿಯಲ್ಲೀಗ ಪಕ್ಷಿಗಳದೇ ಮಾತು-ಕಥೆ.

ಟಿಬೆಟ್‌, ಲಡಾಕ್‌, ಬಾಂಗ್ಲಾ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಮತ್ತಿತರ ಪ್ರದೇಶಗಳಿಂದ ಪಕ್ಷಿಗಳು ಶಿರಹಟ್ಟಿಗೆ ವಲಸೆ ಬಂದಿದ್ದು , ಪಕ್ಷಿಪ್ರಿಯರನ್ನು ಸೆಳೆದಿವೆ. ಲಕ್ಷ್ಮೇಶ್ವರದಿಂದ 11 ಕಿಮೀ, ಗದಗದಿಂದ 23 ಕಿಮೀ ಇರುವ ಶಿರಹಟ್ಟಿ ಬಳಿಯ 120 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಈ ಪಕ್ಷಿಗಳ ಬಿಡಾರ. ಸುಮಾರು 30 ಪ್ರಬೇಧದ ಪಕ್ಷಿಗಳು ಇಲ್ಲಿಗೆ ಬಂದಿವೆ ಎನ್ನುತ್ತಾರೆ ಡಿಎಫ್‌ಒ ವಿಜಯ್‌ ಮೋಹನ್‌ ರಾಜ್‌.

ಪಕ್ಷಿಗಳು ಬೀಡು ಬಿಟ್ಟಿರುವ ಈ ಕೆರೆ ಕೂಡ ಪರಿಸರ ಮಾಲಿನ್ಯದ ಕಬಂಧ ಹಸ್ತಕ್ಕೆ ಸಿಲುಕುತ್ತಿದ್ದು , ಸಮೀಪದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿಷ ಕೆರೆಯನ್ನು ಸೇರುತ್ತಿದೆ. ಹಳ್ಳಿಯ ಜನರು ಬಟ್ಟೆ ಒಗೆಯಲು, ಜಾನುವಾರುಗಳ ಮೈ ತೊಳೆಯುವುದು ಕೂಡ ಇಲ್ಲಿಯೇ.

ಸ್ವಲ್ಪ ದಿನಗಳ ಹಿಂದೆ ಕೆಲವು ಪಕ್ಷಿಗಳು ಕೆರೆಯ ಸಮೀಪ ಸತ್ತು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಗೆಗೆ ಬಾಯಿ ಬಿಡಲು ಸಿದ್ಧರಿಲ್ಲ .

ಪ್ರಸ್ತುತ ಪಕ್ಷಿಗಳ ಸಂರಕ್ಷಣೆಯ ಕಟ್ಟೆಚ್ಚರದ ಕೆಲಸವನ್ನು ಸ್ಥಳೀಯರ ಸಂಘಟನೆಯಾದ ಗ್ರಾಮ ಅರಣ್ಯ ಸಮಿತಿ ವಹಿಸಿಕೊಂಡಿದೆ. ಕೆರೆಯ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪಕ್ಷಿಗಳ ವಲಸೆಗೆ ಅನುಕೂಲಕರ ಪರಿಸರ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಕೆರೆಯನ್ನು ಪಕ್ಷಿಧಾಮವಾಗಿ ಪರಿವರ್ತಿಸುವ ಪ್ರಸ್ತಾಲವನೆಯನ್ನು ಸ್ಥಳೀಯ ಆಡಳಿತ ಸರ್ಕಾರದ ಮುಂದಿಟ್ಟಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X