ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಂಗುಲಿಗರಿಗೆ ದೊರಕೀತೆ ಮುಕ್ತಿ ಪಾಕಿಸ್ತಾನದ ಜೈಲುಗಳಿಂದ ?

By Staff
|
Google Oneindia Kannada News

ಮೀಂಗುಲಿಗರಿಗೆ ದೊರಕೀತೆ ಮುಕ್ತಿ ಪಾಕಿಸ್ತಾನದ ಜೈಲುಗಳಿಂದ ?
ಮೀನುಗಾರಿಕಾ ಗಡಿಗಳನ್ನು ಗುರ್ತಿಸಲು ಭಾರತೀಯ ಮೀನುಗಾರರ ಫೋರಂ ಒತ್ತಾಯ

ಬೆಂಗಳೂರು : ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಈ ಮೀಂಗುಲಿಗ ಬಂಧುಗಳು ನಂಬಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಾರ್ಕ್‌ ಸಮ್ಮೇಳನದ ಫಲಶ್ರುತಿಯಾಗಿ ನಮ್ಮ ಬಂಧುಗಳು ಬಿಡುಗಡೆಯಾಗುತ್ತಾರೆ ; ಬಂಧಿಸಿ ಜೈಲಿನಲ್ಲಿಟ್ಟಿರುವ ಭಾರತೀಯ ಬೆಸ್ತರನ್ನು ಪಾಕಿಸ್ತಾನ ಬಿಡುಗಡೆ ಮಾಡಿಯೇ ತೀರುತ್ತದೆ ; ಪಾಕ್‌ ಸೌಹಾರ್ದ ಭಾವ ಮೆರೆಯುತ್ತದೆ !

ಹಾಗೆಂದು ಇವರೆಲ್ಲ ನಂಬಿದ್ದಾರೆ.

ಜನವರಿ 2, ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಮೀನುಗಾರರ ಫೋರಂನ ಪ್ರತಿನಿಧಿಗಳು ವ್ಯಕ್ತಪಡಿಸಿದ್ದು ಇದೇ ಆಶಾವಾದ. ಸಂಘಟನೆಯ ಪ್ರತಿನಿಧಿ ಹಾಗೂ ವಿಶ್ವ ಮೀನು ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಥಾಮಸ್‌ ಕೊಚಿರ್ರಿ ಪಾಕಿಸ್ತಾನ ಸ್ನೇಹ ಮನೋಭಾವ ಮೆರೆಯುವ ಕುರಿತು ಅತೀವ ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚೂಕಡಿಮೆ 144 ಭಾರತೀಯ ಮೀನುಗಾರರು ಬಂಧಿಗಳಾಗಿ ಪಾಕಿಸ್ತಾನದ ಜೈಲುಗಳಲ್ಲಿದ್ದಾರೆ. ಮೀನು ಹಿಡಿಯುತ್ತಾ ಹಿಡಿಯುತ್ತಾ ಅಕ್ರಮವಾಗಿ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿದ್ದು ಇವರೆಲ್ಲರ ತಪ್ಪು . ಇವರೆಲ್ಲರ ಬಿಡುಗಡೆಯಾಗುತ್ತಾ ? ಮತ್ತೆ ಭಾರತಕ್ಕೆ ಇವರೆಲ್ಲ ಮರಳುತ್ತಾರಾ ?

ನಿಖರವಾದ ಮೀನುಗಾರಿಕಾ ಗಡಿಗಳನ್ನು ಗುರ್ತಿಸಬೇಕು. ಆಯಾ ಕಸ್ಟಂಸ್‌ಗೆ ಸಂಬಂಧಿಸಿದಂತೆ ಮೀನುಗಾರರಿಗೆ ಪರಿಚಯ ಪತ್ರ ನೀಡಬೇಕು. ಮೀನುಗಾರರನ್ನು ಹಿಂಸಿಸುವುದನ್ನು ನಿಲ್ಲಿಸಬೇಕು ಎಂದು ಥಾಮಸ್‌ ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳನ್ನು ಒತ್ತಾಯಿಸಿದರು.

ಶ್ರೀಲಂಕಾ, ಬಾಂಗ್ಲಾ ದೇಶಗಳಿಗೆ ಸಂಬಂಧಿಸಿದಂತೆಯೂ ಮೀನುಗಾರಿಕಾ ಗಡಿಗಳನ್ನು ಗುರ್ತಿಸಬೇಕು. ಸೀಮಾ ಜಲರೇಖೆ ಉಲ್ಲಂಘಿಸಿದ ಮೇಲೆ ಸುಮಾರು 200 ಭಾರತೀಯರು ಪಾಕ್‌-ಬಾಂಗ್ಲಾ-ಶ್ರೀಲಂಕಾ ಜೈಲುಗಳಲ್ಲಿದ್ದಾರೆ. ಇವರುಗಳ ಬಿಡುಗಡೆಯಾಗಬೇಕು ಎಂದು ಥಾಮಸ್‌ ಒತ್ತಾಯಿಸುತ್ತಾರೆ.

(ಪಿಟಿಐ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X