• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ‘ಕನ್ನಡ ಕ್ರಾಂತಿ ದಳ’ದ ರಾಜ್ಯೋತ್ಸವ

By Staff
|

ಮೈಸೂರು ‘ಕನ್ನಡ ಕ್ರಾಂತಿ ದಳ’ದ ರಾಜ್ಯೋತ್ಸವ

ಸಮಾರಂಭ ಉದ್ಘಾಟಿಸಿದ ಶಿಕಾರಿಪುರ ಹರಿಹರೇಶ್ವರರಿಗೆ ವಿಶೇಷ ಸನ್ಮಾನ

  • ದಟ್ಸ್‌ಕನ್ನಡ ಬ್ಯೂರೊ, ಮೈಸೂರು.

‘ಕನ್ನಡ ಯೋಧ’ ದಿವಂಗತ ನ.ನಾಗಲಿಂಗಸ್ವಾಮಿ ಅವರು ಸ್ಥಾಪಿಸಿ, ನಡೆಸುತ್ತಿದ್ದ ಹೆಸರಾಂತ ‘ಕನ್ನಡ ಕ್ರಾಂತಿ ದಳ’ ತನ್ನ 48 ನೇ ಕನ್ನಡ ರಾಜ್ಯೋತ್ಸವ ಸನ್ಮಾನ ಸಮಾರಂಭವನ್ನು ನವೆಂಬರ್‌ 30ನೇ ತಾರೀಕು ಭಾನುವಾರ ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸಿತು.

ದೀಪ ಬೆಳಗಿಸುವುದರ ಮೂಲಕ ‘ಅಮೆರಿಕನ್ನಡ’ ಪತ್ರಿಕೆಯ ಸಂಪಾದಕ ಶಿಕಾರಿಪುರ ಹರಿಹರೇಶ್ವರ ಸಮಾರಂಭವನ್ನು ಉದ್ಘಾಟಿಸಿದರು. ಕನ್ನಡ ಬಳಸಿ ಉಳಿಸಿ ಬೆಳೆಸುವುದರಲ್ಲಿ ಕನ್ನಡ ಕ್ರಾಂತಿ ದಳದ ಸಾಧನೆಗಳನ್ನು ಹರಿಹರೇಶ್ವರ ತಮ್ಮ ಭಾಷಣದಲ್ಲಿ ಹೊಗಳಿದರು. ವಿದೇಶಗಳ ಮಣ್ಣು ಮೆಟ್ಟಿ, ಬಹುಮುಖಿ ಅನುಭವ ಪಡೆದುಕೊಂಡು ಬಂದಿರುವ ಹರಿಹರೇಶ್ವರ, ಮೈಸೂರು ತಮಗೆ ಏಕೆ ಅಷ್ಟು ಆಪ್ಯಾಯಮಾನ ಎಂಬುದನ್ನು ವಿವರಿಸಿ ಹೇಳಿದರು.

Shikaripura Harihareshwaraರಾಜಕೀಯ ಪಕ್ಷ, ಪತ್ರಿಕೋದ್ಯಮ, ನಗರಾಡಳಿತ, ಖಾಸಗಿ ಉದ್ಯಮ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು, ಹೆಸರು ಮಾಡಿರುವ ಮೈಸೂರಿನ ಹಲವು ಗಣ್ಯರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮತ್ತು ವಿಶೇಷ ಆಹ್ವಾನಿತರಾಗಿ ಬಂದಿದ್ದರು. ವಿದೇಶದಲ್ಲಿ ಹಲವಾರು ವರ್ಷ ಇದ್ದು ಕನ್ನಡಕ್ಕಾಗಿ ಗಣನೀಯ ಪ್ರಮಾಣದಲ್ಲಿ ಕೆಲಸ ಮಾಡಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿಹರೇಶ್ವರ ಅವರನ್ನು ಈ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೈಸೂರಿನ ಇನ್ನೂ ಕೆಲವು ಗಣ್ಯರನ್ನ್ನೂ ಸನ್ಮಾನಿಸಲಾಯಿತು. ಅವರೆಂದರೆ- ಅನಂತು (ಅಧ್ಯಕ್ಷರು, ಜಾತ್ಯಾತೀತ ಜನತಾದಳ, ಮೈಸೂರು), ಆರ್‌. ಶಿವಶಂಕರಸ್ವಾಮಿ (ಸಂಪಾದಕರು, ವಾರದ ಮಿತ್ರ ಪತ್ರಿಕೆ, ಮೈಸೂರು), ಪಿ. ಶಿವರುದ್ರಪ್ಪ (ಸದಸ್ಯರು, ಕೇಂದ್ರ ಕಾರಾಗೃಹ ಸಲಹೆ ಸಮಿತಿ, ಮೈಸೂರು), ಗ್ರೇಸಿಯಸ್‌ ರೋಡಿಗ್ರೇಸ್‌ (ಬಾಬು) (ಯೂನಿಟ್ರಾನಿಕ್ಸ್‌ ಎಲೆಕ್ಟ್ರಾನಿಕ್ಸ್‌ ಇಂಡಸ್ಟ್ರೀಸ್‌, ಪ್ರಧಾನ ಕಾರ್ಯದರ್ಶಿ, ಯುವ ಕಾಂಗ್ರೆಸ್‌ ಮೈಸೂರು), ಜಿ. ರಘು ಆಚಾರ್‌ (ಪ್ರಧಾನ ಕಾರ್ಯದರ್ಶಿ, ಯುವ ಕಾಂಗ್ರೆಸ್‌, ಮೈಸೂರು), ಎಸ್‌. ಎನ್‌. ಕೇಶವಮೂರ್ತಿ (ಪ್ರಸಿದ್ಧ ಶಿಲ್ಪಿಗಳು, ಕಾಮಟಗೇರಿ, ಮೈಸೂರು), ಎಂ. ರಮೇಶ್‌ (ನೆಹರು ಯುವ ಕೇಂದ್ರ ಪ್ರಶಸ್ತಿ ಪುರಸ್ಕೃತರು, ಮೈಸೂರು) ಹಾಗೂ ಮಹದೇವಮ್ಮ ಶಿವಕುಮಾರ್‌ (ನಗರ ಪಾಲಿಕೆ ಸದಸ್ಯೆ, ಮೈಸೂರು).

ಸನ್ಮಾನಿತರ ಪರವಾಗಿ ಅನಂತುರವರು ಮಾತನಾಡಿ, ‘ಹುಟ್ಟು ಹೋರಾಟಗಾರರಾಗಿ ಕನ್ನಡದ ಹಿತಕ್ಕಾಗಿ ಅವಿರತ ಶ್ರಮಿಸಿದ ದಿವಂಗತ ನಾಗಲಿಂಗಸ್ವಾಮಿಯವರ ನೆನಪು ಅವರು ಹುಟ್ಟುಹಾಕಿದ ಕನ್ನಡ ಕ್ರಾಂತಿ ದಳದ ಚಟುವಟಿಕೆಗಳ ಮೂಲಕ ಚಿರಸ್ಥಾಯಿಯಾಗಿರುತ್ತದೆ’ ಎಂದರು.

‘ವಾರದ ಮಿತ್ರ’ ಪತ್ರಿಕೆಯ ಸಂಪಾದಕ ಆರ್‌.ಶಿವಶಂಕರ್‌ ಸ್ವಾಮಿಯವರು ಮಾತನಾಡುತ್ತಾ, ಕನ್ನಡ ಕ್ರಾಂತಿದಳದ ಮೂಲಕ ಇಷ್ಟೆಲ್ಲಾ ಹೋರಾಟ ನಡೆಸಿ ಜನಪ್ರಿಯರಾದ ದಿವಂಗತ ನಾಗಲಿಂಗಸ್ವಾಮಿಯವರ ಹೆಸರನ್ನು ಮೈಸೂರಿನ ಯಾವುದಾದರೊಂದು ಮುಖ್ಯ ವೃತ್ತಕ್ಕೆ ಇಡಬೇಕೆಂದು ಸಲಹೆ ಕೊಟ್ಟರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ನ ಸದಸ್ಯರಾದ ತೊಂಟದಾರ್ಯ ಮಾತನಾಡುತ್ತಾ , ‘ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಅಕ್ಕರೆಯನ್ನ ಇಟ್ಟುಕೊಳ್ಳುತ್ತಲೇ, ನಾವೆಲ್ಲರೂ ಭಾರತೀಯರು, ಭಾರತದ ಪ್ರಗತಿಗಾಗಿ ಶ್ರಮಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ’ ಎಂದರು.

ಮೈಸೂರು ನಗರ ಕಾಂಗ್ರೆಸ್‌ ಸಮಿತಿಯ ವಕ್ತಾರ ಟಿ. ಎಸ್‌. ರವಿಶಂಕರ್‌, ಇತರ ಭಾಷಿಗರಂತೆ ಕನ್ನಡಿಗರೂ ತಮ್ಮ ಮಾತೃಭಾಷೆಯ ಬಗ್ಗೆ ಸ್ವಾಭಿಮಾನ ತಳೆಯಬೇಕು ಎಂದು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಶಿವಬಸಪ್ಪ (ಅಧ್ಯಕ್ಷರು, ವೀರಶೈವ ಮಹಾಸಭಾ, ತಾಲ್ಲೂಕು ಘಟಕ, ಮೈಸೂರು), ಪುಟ್ಟವೆಂಕಟರಮಣ (ಸಹಾಯಕ ಆಡಳಿತಾಧಿಕಾರಿಗಳು, ಪೋಲೀಸ್‌ ಆಯುಕ್ತರ ಕಛೇರಿ, ಮೈಸೂರು), ಎಂ. ಎ. ಸೋಮಶೇಖರ್‌ (ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವ ಕಾಂಗ್ರೆಸ್‌, ಕರ್ನಾಟಕ), ಎಂ. ಮಣಿರಾಜು (ಮಾಜಿ ಮೇಯರ್‌, ಜಾತ್ಯತೀತ ಜನತಾದಳ, ಮೈಸೂರು), ಎಂ. ಕೆ. ಸೋಮಶೇಖರ್‌ (ಮುಖಂಡರು, ಜಾತ್ಯತೀತ ಜನತಾದಳ, ಮೈಸೂರು), ಸಿ. ಸಿ. ಕಾಂತಕುಮಾರ್‌ (ಕಾ. ಡಾ. ಸದಸ್ಯರು, ಕರ್ನಾಟಕ ಸರ್ಕಾರ), ಎನ್‌. ನಾಗರಾಜು (ಅಧ್ಯಕ್ಷರು, ಕೃಷ್ಣರಾಜ ಕ್ಷೇತ್ರ, ಜಾತ್ಯಾತೀತ ಜನತಾದಳ, ಮೈಸೂರು), ಎಂ. ಚಂದ್ರಶೇಖರ್‌ (ಅಧ್ಯಕ್ಷರು, ಕನ್ನಡ ಸಾಹಿತ್ಯ ಕಲಾ ಕೂಟ, ಮೈಸೂರು), ಹೊನ್ನಯ್ಯ (ಅಧ್ಯಕ್ಷರು, ಯುವ ಕಾಂಗ್ರೆಸ್‌ ಸಮಿತಿ, ಮೈಸೂರು), ಸುರೇಶ್‌ (ಉಪಾಧ್ಯಕ್ಷರು, ಯುವ ಕಾಂಗ್ರೆಸ್‌ ಸಮಿತಿ, ಅಶೋಕಪುರಂ, ಮೈಸೂರು), ಸಿ. ಜೆ. ಗಂಗಾಧರ್‌ (ಉಪಾಧ್ಯಕ್ಷರು, ಯುವ ಕಾಂಗ್ರೆಸ್‌ ಸಮಿತಿ, ಮೈಸೂರು), ಎಂ. ಉಮೇಶ್‌ ಕುಮಾರ್‌ (ಪ್ರಧಾನ ಕಾರ್ಯದರ್ಶಿ, ಯುವ ಕಾಂಗ್ರೆಸ್‌ ಸಮಿತಿ, ಮೈಸೂರು), ಪಿ. ಎನ್‌. ಚೇತನ್‌ (ಅಧ್ಯಕ್ಷರು, ವಿದ್ಯಾರ್ಥಿ ಕಾಂಗ್ರೆಸ್‌, ಮೈಸೂರು), ಎಂ. ಹೆಚ್‌. ಚಂದ್ರಶೇಖರ್‌ (ಅಧ್ಯಕ್ಷರು, ಜೆ. ಎಸ್‌. ಎಸ್‌. ಆಸ್ಪತ್ರೆ ನೌಕರರ ಸಂಘ, ಮೈಸೂರು), ಪ್ರೊ. ಕೆ. ಭೈರವಮೂರ್ತಿ (ಪ್ರಾಧ್ಯಾಪಕರು, ಮಹರಾಜಾ ಸಂಜೆ ಕಾಲೇಜು)- ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್‌. ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ‘ಪುಟ್ಟು ಮೆಲೋಡಿಯಸ್‌ ಮತ್ತು ತಂಡ’ದವರಿಂದ ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು. ನಾಗಲಾಂಬಿಕೆಯವರು ಅತಿಥಿಗಳನ್ನು ಸ್ವಾಗತಿಸಿದರು; ಕಾರ್ಯಕ್ರಮದ ಕೊನೆಗೆ ಅವರೇ ವಂದನೆಗಳನ್ನ ಅರ್ಪಿಸಿದರು. ಕ್ರಾಂತಿ ದಳದ ಅಧ್ಯಕ್ಷೆಯಾದ ನಾಗಮ್ಮ ನಾಗಲಿಂಗಸ್ವಾಮಿ, ಕಾರ್ಯಾಧ್ಯಕ್ಷರಾದ ಕೆ. ಎಸ್‌. ರವಿ ಮತ್ತು ದಳದ ಇತರ ಉತ್ಸಾಹೀ ಕಾರ್ಯಕರ್ತರ ಶ್ರಮದ ಫಲವಾಗಿ ಯಶಸ್ವಿಯಾದ, ಉದ್ದಕ್ಕೂ ಕನ್ನಡದಲ್ಲೇ ಅದ್ಧೂರಿಯಿಂದ ನಡೆದ ಈ ಕಾರ್ಯಕ್ರಮವನ್ನು ಚಂದ್ರಶೇಖರ್‌ ಅಚ್ಚುಕಟ್ಟಾಗಿ ನಿರೂಪಿಸಿದರು.

Post your views

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more