ಕಾಯಿಲೆ ಬಿದ್ದ ಅಮ್ಮನ ನೋಡಲು ತೆಲಗಿಗೆ ಪೆರೋಲ್‌ನಿರಾಕರಣೆ
ಕಾಯಿಲೆ ಬಿದ್ದ ಅಮ್ಮನ ನೋಡಲು ತೆಲಗಿಗೆ ಪೆರೋಲ್‌ನಿರಾಕರಣೆ
ನವಂಬರ್ 24ರಿಂದ ಕರ್ನಾಟಕದಲ್ಲಿ ಛಾಪಾ ಕಾಗದ ಹಗರಣದ ವಿಚಾರಣೆ
ಛಾಪಾ ಕಾಗದ ಹಗರಣದ ತನಿಖೆಯನ್ನು ವಿಶೇಷ ನ್ಯಾಯಾಲಯ ಈಗಾಗಲೇ ಕೈಗೆತ್ತಿಕೊಂಡಿದೆ. ಇಂತಹ ಸಂದರ್ಭದಲ್ಲಿ ಪೆರೋಲ್ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿನ ತಾಯಿ ಹಾಗೂ ಹೆಂಡತಿಯನ್ನು ಭೇಟಿ ಮಾಡಲು ಅನುವಾಗುವಂತೆ 1 ವಾರ ಕಾಲ ಪೆರೋಲ್ ನೀಡುವಂತೆ ತೆಲಗಿ ಕೋರಿಕೆಯನ್ನು ಶನಿವಾರ (ನ.22) ಪರಿಶೀಲಿಸಿದ ನ್ಯಾಯಮೂರ್ತಿ ಕೆ.ನಾಗಯ್ಯ ಶೆಟ್ಟಿ ಈ ಆದೇಶ ನೀಡಿದರು.
ನವಂಬರ್ 24 ರಿಂದ ವಿಚಾರಣೆ
ಛಾಪಾ ಕಾಗದ ಹಗರಣದ ವಿಚಾರಣೆ ನಡೆಧಿಸಲು ನಿಯೋಜಿಸಲಾಗಿರುವ ವಿಶೇಷ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನವಂಬರ್ 24ರಿಂದ ಪ್ರಾರಂಭಿಸಲಿದೆ ಎಂದು ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಶನಿವಾರ ತಿಳಿಸಿದರು.
ಹಿರಿಯ ವಕೀಲ ಡಾ.ನಂಜುಂಡಪ್ಪ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸರ್ಕಾರ ನೇಮಿಸಿದ್ದು, ನಂಜುಂಡಪ್ಪ ಅವರು ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ನೆರವಾಗಲಿದ್ದಾರೆ ಎಂದು ಸಚಿವ ಚಂದ್ರೇಗೌಡ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications