ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆರೆ ಸಿಕ್ಕಿದ ಸರ್ಪ ! ಚಾರ್ಲ್ಸ್‌ ಶೋಭರಾಜ್‌ ಪೊಲೀಸರ ಅತಿಥಿ!

By Staff
|
Google Oneindia Kannada News

ಸೆರೆ ಸಿಕ್ಕಿದ ಸರ್ಪ ! ಚಾರ್ಲ್ಸ್‌ ಶೋಭರಾಜ್‌ ಪೊಲೀಸರ ಅತಿಥಿ!
ಏಷ್ಯಾದ ಪ್ರವಾಸಿಗರೆದೆಯಲ್ಲಿ ಭಯದ ಚಂಡಮಾರುತ ಎಬ್ಬಿಸಿದ ಚಾರ್ಲ್ಸ್‌

ಕಠ್ಮಂಡು : ಏಷ್ಯಾದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಲೆಕ್ಕವಿಲ್ಲದಷ್ಟು ಪ್ರವಾಸಿಗರನ್ನು ದೋಚಿರುವ ಹಾಗೂ ಕೊಂದಿರುವ ಆರೋಪ ಎದುರಿಸುತ್ತಿರುವ ಅಂತರರಾಷ್ಟ್ರೀಯ ಪಾತಕಿ ಚಾರ್ಲ್ಸ್‌ ಶೋಭರಾಜ್‌ ಈಗ ಮತ್ತೆ ಪೊಲೀಸರ ಅತಿಥಿ.

ಕಠ್ಮಂಡುವಿನ ದುರ್ಬಾರ್‌ಮಾರ್ಗ್‌ನ ಯಾಕ್‌ ಅಂಡ್‌ ಯೇಟಿ ಹೊಟೇಲಿನ ರಾಯಲ್‌ ಕ್ಯಾಸಿನೋದಲ್ಲಿ ಶುಕ್ರವಾರ (ಸ್ಥಳೀಯ ಕಾಲಮಾನ ಬೆಳಗಿನ ಜಾವ 4 ಗಂಟೆಗೆ) ಬಂಧಿಸಲಾಯಿತು ಎಂದು ಕ್ಯಾಸಿನೋದ ಭದ್ರತಾ ಅಧಿಕಾರಿ ಹೇಳಿದ್ದಾರೆ.

ಫ್ರೆಂಚ್‌ ರಾಷ್ಟ್ರೀಯನಾದ ಅರುವತ್ತು ವಯಸ್ಸಿನ ಶೋಭರಾಜ್‌ ಈ ಹಿಂದೆ ಭಾರತದ ಜೈಲಿನಲ್ಲಿ 20 ವರ್ಷ ಸೆರೆವಾಸ ಅನುಭವಿಸಿದ್ದ. 1997ರಲ್ಲಿ ಪೊಲೀಸರು ಆತನನ್ನು ಫ್ರಾನ್ಸ್‌ ವಶಕ್ಕೆ ಸಾಕಷ್ಟು ಕಷ್ಟಪಟ್ಟು ಒಪ್ಪಿಸಿದ್ದರು.

Notorious Criminal Charles Sobhrajಆಂಗ್ಲ ಪತ್ರಿಕೆ ಹಿಮಾಲಯನ್‌ ಟೈಮ್ಸ್‌ನಲ್ಲಿ ಸೆ.17ರಂದು ಶೋಭರಾಜ್‌ ಫೋಟೋ ಪ್ರಕಟವಾಯಿತು. ಮತ್ತೆ ಶೋಭರಾಜ್‌ ತನ್ನ ಹಳೆ ಚಾಳಿ ಶುರುವಿಟ್ಟುಕೊಂಡಿರಬಹುದೆಂದು ಪೊಲೀಸರಿಗೆ ಶಂಕೆಯಾಯಿತು. ಅಂದಿನಿಂದ ಆತನ ಶೋಧದಲ್ಲಿ ಪೊಲೀಸರು ನಿರತರಾಗಿದ್ದರು. ಕ್ಯಾಸಿನೋದಲ್ಲಿ ಆಡುತ್ತಿದ್ದಾಗ ಪೊಲೀಸ್‌ ಉಪ ಸೂಪರಿಂಟೆಂಡೆಂಟ್‌ ಟೇಕ್‌ ಬಹಾದುರ್‌ ಜಿ.ಸಿ., ಶೋಭರಾಜ್‌ನನ್ನು ಬಂಧಿಸಿದರು. ಆತನನ್ನು ಕಠ್ಮಂಡು ಜಿಲ್ಲಾ ಪೊಲೀಸ್‌ ಕಚೇರಿಯ ವಶಕ್ಕೆ ಒಪ್ಪಿಸಲಾಗಿದೆ.

ಪ್ರವಾಸಿಗರ ದೋಚುವುದು ಹಾಗೂ ಕೊಲ್ಲುವ ಹುನ್ನಾರ ಹೊಸೆಯುವುದಕ್ಕೆ ಸಾಕಷ್ಟು ಕುಖ್ಯಾತನಾಗಿರುವ ಶೋಭರಾಜ್‌ಗೆ ಹಾವಾಡಿಗ ಎಂಬ ಅಡ್ಡ ಹೆಸರುಂಟು. 1975ರಲ್ಲಿ ಅಮೆರಿಕ ಮತ್ತು ಕೆನಡಾದ ಇಬ್ಬರು ಮಹಿಳೆಯರನ್ನು ಕೊಂದ ಆರೋಪದ ಮೇರೆಗೆ ಶೋಭರಾಜ್‌ ಇಲ್ಲಿನ ಪೊಲೀಸರಿಗೆ ಬೇಕಾಗಿದ್ದ.

1997ರಲ್ಲಿ ಫ್ರ್ಯಾನ್ಸ್‌ ದೇಶಕ್ಕೆ ಒಪ್ಪಿಸಿದ ನಂತರ ಈತನಿಗೆ ಎರಡು ವರ್ಷಗಳ ಕಾಲ ಸ್ವಾತಂತ್ರ್ಯ ಕೊಡಲಾಗಿತ್ತು. ಭಾರತ, ಟರ್ಕಿ, ಅಫ್ಘಾನಿಸ್ತಾನ, ಹಾಂಗ್‌ಕಾಂಗ್‌, ಇರಾನ್‌ ಹಾಗೂ ಥೈಲ್ಯಾಂಡ್‌ಗಳಲ್ಲಿ ಸುಮಾರು 20 ಕೊಲೆಗಳನ್ನು ಮಾಡಿರುವ ಶೋಭರಾಜ್‌ ತನ್ನ ತಂತ್ರದಿಂದ ಪ್ರವಾಸಿಗರ ಭಯ ಹುಟ್ಟಿಸಿದ್ದ. ವಿದೇಶೀ ಪ್ರವಾಸಿಗರನ್ನು ಮಾದಕ ವ್ಯಸನಕ್ಕೆಳೆದು, ಅವರನ್ನು ದೋಚುವುದು ಹಾಗೂ ಕೊಲ್ಲುವುದು ಈತನ ಚಾಳಿಯಾಗಿತ್ತು. ಈಗ ಮತ್ತೆ ಕಠ್ಮಂಡುವಿನಲ್ಲಿ ಈತ ಇದ್ದಾನೆ ಎಂಬುದು ಪ್ರವಾಸಿಗರಲ್ಲಿ ಭಾರೀ ಭೀತಿ ಹುಟ್ಟಿಸಿತ್ತು.

ತನ್ನದೊಂದು ಸಂದರ್ಶನಕ್ಕೂ ಸಾವಿರಾರು ಡಾಲರ್‌ಗಟ್ಟಲೆ ಹಣ ಕೇಳುವ ಚಾರ್ಲ್ಸ್‌ ಶೋಭರಾಜ್‌ ಪರಮ ಕಾಮುಕ ಎಂಬ ಕುಖ್ಯಾತಿಗೂ ಪಾತ್ರನಾಗಿದ್ದಾನೆ.

(ಏಜೆನ್ಸೀಸ್‌)

ಓದಿ- All About Charles Sobraj by Mark Gribben

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X