ಸುಧಾಮೂರ್ತಿ ‘ಮನದ ಮಾತು’ ಕೃತಿ ಜು.27ರಂದು ಬಿಡುಗಡೆ
ಸುಧಾಮೂರ್ತಿ ‘ಮನದ ಮಾತು’ ಕೃತಿ ಜು.27ರಂದು ಬಿಡುಗಡೆ
‘ವೈಸ್ ಅಂಡ್ ಅದರ್‌ವೈಸ್’ ಕನ್ನಡೀಕರಣಕ್ಕೆ ಕಂಕಣ ಕೂಡಿ ಬಂತು !
ಮಾಜಿ ಸಂಸದ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು. ಲೋಕಶಿಕ್ಷಣ ಟ್ರಸ್ಟ್ ಮಾಲೆ ಪ್ರಕಟಿಸಿರುವ ‘ಮನದ ಮಾತು’ ಪುಸ್ತಕದ ಬೆಲೆ 25 ರುಪಾಯಿ.
‘ಮನದ ಮಾತು’ ಕೃತಿ ಸುಧಾಮೂರ್ತಿಯವರ ‘ವೈಸ್ ಅಂಡ್ ಅದರ್‌ವೈಸ್’ ಎನ್ನುವ ಇಂಗ್ಲೀಷ್ ಕೃತಿಯ ಭಾಷಾಂತರವಾಗಿದ್ದು , ಸ್ವತಃ ಲೇಖಕಿ ಪುಸ್ತಕವನ್ನು ಕನ್ನಡೀಕರಿಸಿದ್ದಾರೆ. ಕನ್ನಡ ತಮ್ಮ ಮಾತೃಭಾಷೆಯಾದರೂ, ಸಮಯದ ಅಭಾವ ಇದ್ದುದರಿಂದ ಭಾಷಾಂತರ ತಡವಾಯಿತು ಎನ್ನುವುದು ಲೇಖಕಿಯ ತಪ್ಪೊಪ್ಪಿಗೆ.
ತಮಿಳು, ಗುಜರಾತಿ, ಒರಿಯಾ, ಹಿಂದಿ, ಮಲಯಾಳಂ, ತೆಲುಗು, ಕಾಶ್ಮೀರಿ, ಬೆಂಗಾಳಿ, ಮರಾಠಿ, ಉರ್ದು, ಡೋಗ್ರಿ, ಪಂಜಾಬಿ ಹಾಗೂ ಅಸ್ಸಾಮಿ ಭಾಷೆಗಳಿಗೆ ‘ವೈಸ್ ಅಂಡ್ ಅದರ್‌ವೈಸ್’ ಕೃತಿ ಈಗಾಗಲೇ ಭಾಷಾಂತರವಾಗಿದೆ. ಗುಜರಾತಿ ಕೃತಿಗೆ 90 ಸಾವಿರ ರುಪಾಯಿ ಗೌರವ ಧನ ದೊರೆತಿದ್ದು , ಈ ಮೊತ್ತವನ್ನು ಗುಜರಾತ್ ಕಿಡ್ನಿ ಫೌಂಡೇಶನ್‌ಗೆ ಸುಧಾಮೂರ್ತಿ ನೀಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications